ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇದ್ದಾರೆ. ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
213
ಇತ್ತೀಚೆಗೆ ಶಮಿತಾ ಶೆಟ್ಟಿ ತಮ್ಮ ಇನ್ಸ್‌ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಆಕೆಯ ಬಗ್ಗೆ ಚಿಂತಿತರಾಗಿದ್ದಾರೆ.
313
ಈ ವಿಡಿಯೋದಲ್ಲಿ ಶಮಿತಾ ಶೆಟ್ಟಿ ಆಸ್ಪತ್ರೆಯ ಬೆಡ್ ಮೇಲೆ ಕುಳಿತುಕೊಂಡಿದ್ದು, ಅದರೊಂದಿಗೆ ಎಲ್ಲಾ ಮಹಿಳೆಯರಿಗೂ ತಮಗೆ ಆಗಿರುವ ಗಂಭೀರ ಕಾಯಿಲೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
413
ಆಗಿದ್ದೇನೆಂದರೆ, ನಟಿ ಕೂಡ ಆಗಿರುವ ಶಮಿತಾ ಶೆಟ್ಟಿ ಎಂಡೊಮೆಟ್ರಿಯೊಸಿಸ್ ಎನ್ನು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯ ಬಗ್ಗೆ ತಮಗೇ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
513
ಇದೇ ಕಾರಣಕ್ಕಾಗಿ ಎಂಡೊಮೆಟ್ರಿಯೊಸಿಸ್ ಎನ್ನುವ ಕಾಯಿಲೆಯ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು. ಅದರ ಲಕ್ಷಣಗಳನ್ನು ಅರಿತುಕೊಂಡರೆ ಸಹಾಯವಾಗುತ್ತದೆ ಎಂದಿದ್ದಾರೆ.
613
ಎಂಡೊಮೆಟ್ರಿಯೊಸಿಸ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದು ತೀವ್ರವಾದ Pelvic ನೋವನ್ನು ಉಂಟುಮಾಡುತ್ತದೆ ಮತ್ತು ಗರ್ಭಧರಿಸಲು ಕಷ್ಟವಾಗುತ್ತದೆ.
713
ಇಂದು 'ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯೇ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ ಎಂದು ಶಮಿತಾ ಶೆಟ್ಟಿ ಬರೆದುಕೊಂಡಿದ್ದಾರೆ.
813
ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳುವವರೆಗೂ ಶ್ರಮವಹಿಸಿದ ನನ್ನ ವೈದ್ಯರಾದ ನನ್ನ ಸ್ತ್ರೀರೋಗತಜ್ಞ ಡಾ ನೀತಾ ವರ್ತಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.
913
ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ನನ್ನ ರೋಗವನ್ನು ತೆಗೆಯಲಾಗಿದೆ. ನಾನು ಉತ್ತಮ ಆರೋಗ್ಯ ಮತ್ತು ಹೆಚ್ಚು ದೈಹಿಕವಾಗಿ ನೋವು-ಮುಕ್ತ ದಿನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
1013
ಶಮಿತಾ ಶೆಟ್ಟಿ ಕೊನೆಯ ಬಾರಿಗೆ 2023 ರಲ್ಲಿ 'ದಿ ಟೆನೆಂಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಶಮಿತಾ ಶೆಟ್ಟಿ ಈ ಹಿಂದೆ 'ಬ್ಲ್ಯಾಕ್ ವಿಡೋಸ್' ಎಂಬ ವೆಬ್ ಸರಣಿಯ ಭಾಗವಾಗಿದ್ದರು.
1113
'ಬಿಗ್ ಬಾಸ್ 15' ಮತ್ತು 'ಬಿಗ್ ಬಾಸ್ OTT' ಯಲ್ಲೂ ಶಮಿತಾ ಶೆಟ್ಟಿ ಅವರು ಮ್ಯಾಜಿಕ್ ಮಾಡಿದ್ದಾರೆ. ಅಂದಹಾಗೆ, ಇದಕ್ಕೂ ಮೊದಲು ಕೂಡ ಶಮಿತಾ ಬಿಗ್ ಬಾಸ್‌ನ ಭಾಗವಾಗಿದ್ದರು. ಮೂರು ಬಾರಿ ಸ್ಪರ್ಧಿಯಾಗಿ ಕಾರ್ಯಕ್ರಮಕ್ಕೆ ಬಂದರೂ ಒಮ್ಮೆಯೂ ಶೋ ಗೆಲ್ಲಲಾಗಲಿಲ್ಲ.
1213
ಶರರಾ ಶರರಾ’ ಹಾಡಿನ ಮೂಲಕ ಇಂದಿಗೂ ಗುರುತಿಸಿಕೊಂಡಿರುವ ಶಮಿತಾ ಶೆಟ್ಟಿ ‘ಮೊಹಬ್ಬತೇನ್’ ಚಿತ್ರದ ಮೂಲಕ ಜನಮನ್ನಣೆ ಸಿಕ್ಕಿತ್ತು.
1313
ಮಂಗಳೂರು ಮೂಲದ ಶಮಿತಾ ಶೆಟ್ಟಿಗೆ 45 ವರ್ಷವಾಗಿದ್ದರೂ, ಇನ್ನೂ ಮದುವೆಯಾಗಿಲ್ಲ. 2000ದಿಂದ ಅವರು ಸಿನಿಮಾರಂಗದಲ್ಲಿದ್ದಾರೆ.