Bigg Bossನಿಂದ ಬಂದ 50 ಲಕ್ಷ ಏನ್​ ಮಾಡಿದ್ರು ವಿನ್ನರ್​ ಪ್ರಥಮ್​? ಗುಟ್ಟು ರಿವೀಲ್​ ಮಾಡಿದ ನಟ

Published : Sep 05, 2025, 12:51 PM IST

ಬಿಗ್​ಬಾಸ್​ ಸೀಸನ್​ 4ನಲ್ಲಿ ವಿಜೇತರಾಗಿರುವ ಪ್ರಥಮ್​ ಅವರಿಗೆ 50 ಲಕ್ಷ ಬಹುಮಾನ ಸಿಕ್ಕಿದ್ದು, ಅದನ್ನು ಹೇಗೆ ಖರ್ಚು ಮಾಡಿದ್ರು ಎನ್ನುವ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

PREV
16
ಬಿಗ್​ಬಾಸ್​-4ರ ವಿನ್ನರ್​

ಪ್ರಥಮ್ ಅವರು ಕನ್ನಡ ಬಿಗ್‍‍ಬಾಸ್ ಸೀಸನ್ 4 ರ ವಿಜೇತರಾಗಿದ್ದಾರೆ. ಅವರು ನಟ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಆಗಾಗ್ಗೆ ಸಕತ್​ ಸದ್ದು ಮಾಡುತ್ತಲೂ ಇದ್ದಾರೆ. ಇವರು ಬಿಗ್​ಬಾಸ್​ ಸೀಸನ್​ 4ನಿಂದ 50 ಲಕ್ಷ ಹಣ ಗೆದ್ದಿದ್ದರು. ಕೊನೆಗೆ ಟ್ಯಾಕ್ಸ್​ ಅದೂ ಇದೂ ಹೋಗಿ 35 ಲಕ್ಷ ಬಂದಿದೆ ಎನ್ನಲಾಗಿದೆ.

26
ಇಷ್ಟು ಹಣ ಏನು ಮಾಡಿದ್ರು?

ಅವರು ಬಿಗ್​ಬಾಸ್​ ವಿಜೇತರಾದಾಗ ಭಾರಿ ಸದ್ದು ಮಾಡಿದ್ದು, ಇಷ್ಟೊಂದು ಹಣ ಏನು ಮಾಡಿದ್ರು ಎನ್ನುವುದು. ಇದಕ್ಕೆ ಕಾರಣವೂ ಇದೆ. ಅದೇನೆಂದರೆ 'ಬಿಗ್ ಬಾಸ್' ಗೆದ್ದ ಬಳಿಕ ವೇದಿಕೆ ಮೇಲೆಯೇ ಪ್ರಥಮ್ ಮತ್ತು ಅವರ ತಂದೆ ಮಲ್ಲಣ್ಣ ಇಬ್ಬರು ರಿಯಾಲಿಟಿ ಶೋ ನಲ್ಲಿ ಗೆದ್ದ ಹಣವನ್ನ ರೈತರಿಗೆ, ಯೋಧರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿದ್ದರು.

36
ಹೋದಲ್ಲಿ, ಬಂದಲ್ಲಿ ಪ್ರಶ್ನೆ

ಕೊನೆಗೆ ಅದರ ಸುದ್ದಿಯೇ ಇರಲಿಲ್ಲ. ಅದಕ್ಕಾಗಿ ಹೋದಲ್ಲಿ ಬಂದಲ್ಲಿ ಪ್ರಶ್ನೆ ಎದುರಾಗುತ್ತಿತ್ತು. ತಮಗೆ ದುಡ್ಡು ಇನ್ನೂ ಕೈಸೇರಿಲ್ಲ ಎಂದರೂ ಹಲವರು ಟೀಕಿಸುತ್ತಲೇ ಇದ್ದರು. ಕೊನೆಗೊಮ್ಮೆ ಸಿಡಿದೆದ್ದಿದ್ದ ಪ್ರಥಮ್​, ''ಬೊಗಳೊ ನಾಯಿಗಳಿಗೆ ನಾನು ಬಿಸ್ಕತ್ ಹಾಕಲ್ಲ. ನಿಮ್ಮ ಕಟುವಾದ ಕಾಮೆಂಟ್ ಗಳು ನನಗೆ ಡಿಸ್ಟರ್ಬ್ ಮಾಡಲ್ಲ ಮತ್ತು ಅದನ್ನ ನಾನು ಕೇರ್ ಮಾಡಲ್ಲ. ದುಡ್ಡು ಬಂದಿಲ್ಲ ಅಂದ್ರೂ, ಬಂದಿದೆ, ಬಂದಿದೆ ಅಂತ ಹೇಳುವವರನ್ನ ನಾನು ನಾಯಿಗಳು ಅಂತಾನೇ ಹೇಳುವುದು.'' ಎಂದು ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದರು.

46
ಮೌನ ಮುರಿದು ಪ್ರಥಮ್​

ಈ ಘಟನೆ ನಡೆದ ಕೆಲ ವರ್ಷಗಳೇ ಕಳೆದಿವೆ. ಈಗಲೂ ಹಲವರಿಗೆ ಪ್ರಥಮ್​ ಹೇಳಿದಂತೆ ನಡೆದುಕೊಂಡ್ರಾ ಎನ್ನುವ ಪ್ರಶ್ನೆ ಕಾಡ್ತಿದೆ. ಕೀರ್ತಿ ಎಂಟರ್​ಟೇನ್​ಮೆಂಟ್​ ಷೋನಲ್ಲಿ ಅವರಿಗೆ ಈ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಪ್ರಥಮ್​, ನನಗೆ 50 ಲಕ್ಷದಲ್ಲಿ ಕೈಸೇರಿದ್ದು 35 ಲಕ್ಷ ರೂಪಾಯಿಗಳು ಎಂದಿದ್ದಾರೆ.

56
ಕಮೆಂಟಿಗರಿಗೆ ಉತ್ತರ

ನಾನು ಬಂದ 50 ಲಕ್ಷದಲ್ಲಿ ಟ್ಯಾಕ್ಸ್ ಕಟ್ಟಿದ್ದೇನೆ. ಅದರ ದಾಖಲೆ ನನ್ನ ಬಳಿ ಇದೆ. ಕೊನೆಗೆ ಹಾಸನದಲ್ಲಿ ತೀರಿಕೊಂಡ ಕುಟುಂಬಗಳಿಗೆ 7 ಮಂದಿಗೆ ತಲಾ 50 ಸಾವಿರ ರೂಪಾಯಿ ಕೊಟ್ಟಿದ್ದೇನೆ. ಅದರ ಬಗ್ಗೆ ನನ್ನ ಬಳಿ ದಾಖಲೆ ಇದೆ ಎಂದಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ನೀನು ಸಮಾಜಕ್ಕೆ ಏನ್​ ಮಾಡಿದ್ಯಾ ಅಂತ ಕೇಳ್ತಾರೆ. ಅದಕ್ಕಾಗಿಯೇ ನಾನು ಕ್ಯಾಷ್​ ಕೊಟ್ಟಿಲ್ಲ. ಹಣ ಕೊಟ್ಟ ದಾಖಲೆಯನ್ನು ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

66
3.5 ಲಕ್ಷ ಪರಿಹಾರ

ಅಲ್ಲಿಗೆ 35 ಲಕ್ಷ ರೂಪಾಯಿಗಳಲ್ಲಿ 3.5 ಲಕ್ಷ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ಕೊಟ್ಟಿರುವುದಾಗಿ ಪ್ರಥಮ್​ ಹೇಳಿದ್ದಾರೆ. ನಾನು ಕೊಟ್ಟಿದ್ದನ್ನು ಹೇಳಿದ್ರೂ ಕಷ್ಟ, ಹೇಳದಿದ್ರೂ ಕಷ್ಟ. ಎಲ್ಲರನ್ನೂ ಬ್ಯಾಲೆನ್ಸ್​ ಮಾಡಬೇಕಾಗಿದೆ ಎಂದು ನೊಂದು ನುಡಿದಿದ್ದಾರೆ ಪ್ರಥಮ್​.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories