ಇರ್ಫಾನ್‌ ಪಠಾಣ್‌ ಕೊನೆ, 9 ವರ್ಷದಿಂದ ನಾನು ಯಾರೊಂದಿಗೂ ಸೆಕ್ಸ್‌ ಮಾಡಿಲ್ಲ ಎಂದ ನಟಿ!

Published : Jun 27, 2024, 07:01 PM IST

ನಟಿ ಹಾಗೂ ರಾಜಕಾರಣಿ ಪಾಯಲ್‌ ಘೋಷ್‌ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಇದರಲ್ಲಿ ಅವರು ತಾವು ಸೆಕ್ಸ್‌ ಮಾಡದೇ 9 ವರ್ಷವಾಯಿತು ಎಂದು ಹೇಳಿದ್ದಾರೆ.

PREV
113
ಇರ್ಫಾನ್‌ ಪಠಾಣ್‌ ಕೊನೆ, 9 ವರ್ಷದಿಂದ ನಾನು ಯಾರೊಂದಿಗೂ ಸೆಕ್ಸ್‌ ಮಾಡಿಲ್ಲ ಎಂದ ನಟಿ!

ನಟಿ ಪಾಯಲ್‌ ಘೋಷ್‌ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲಲ್ಲಿ ವರಾತ ಆರಂಭಿಸಿದ್ದಾರೆ. ಈ ಬಾರಿ ತಾವು ಕಳೆದ 9 ವರ್ಷಗಳಿಂದ ಯಾರ ಜೊತೆಗೂ ದೈಹಿಕ ಸಂಪರ್ಕ ಸಾಧಿಸಿಲ್ಲ ಎಂದು ಬರೆದುಕೊಂಡಿದ್ದಾರೆ.

213

ಅವರು ಹಂಚಿಕೊಂಡಿರುವ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಅಷ್ಟಕ್ಕೂ ನಟಿ ಪಾಯಲ್‌ ಘೋಷ್‌ ತಮ್ಮ ಇನ್ಸ್‌ಟಾಗ್ರಾಮ್‌ ಫೀಡ್‌ನಲ್ಲಿ ಬರೆದುಕೊಂಡಿದ್ದೇನು? ಅದರ ವಿವರ ಇಲ್ಲಿದೆ.

313

ಈಗಾಗಲೇ ಸಿನಿಮಾ ಮೂಲಕ ಎಲ್ಲೂ ಸುದ್ದಿಯಲ್ಲಿ ಇಲ್ಲದ ಪಾಯಲ್‌ ಘೋಷ್‌, ಪ್ರತಿ ಬಾರಿಯೂ ಇಂಥ ಪೋಸ್ಟ್‌ ಹಾಗೂ ವಿವಾದಾತ್ಮಕ ಕಾಮೆಂಟ್‌ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿ ಇರುತ್ತಾರೆ.

413

ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪಾಯಲ್ ಘೋಷ್, '9 ವರ್ಷಗಳಾದವು. ನಾನು ಯಾರೊಂದಿಗೂ ಸೆಕ್ಸ್ ಮಾಡಿಲ್ಲ. ಇರ್ಫಾನ್ ಪಠಾಣ್ ಜೊತೆ ಬ್ರೇಕಪ್ ಆದ ನಂತರ ಯಾರೊಂದಿಗೂ ಸೆಕ್ಸ್ ಮಾಡಲಿಲ್ಲ' ಎಂದು ಬರೆದಿದ್ದಾರೆ.

513


ನಿಮಗೆ ನಾನು ಹೇಳೋದು ಸುಳ್ಳು ಅಂತ ಅನಿಸಬಹುದು. ಆದರೆ ಇದುವೇ ನಿಜ ಎಂದು ನಟಿ ತಮ್ಮ ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

613

ನಾನು ಹಾಗೂ ಇರ್ಫಾನ್ ಪಠಾಣ್ ಲವ್ ಮಾಡುತ್ತಿದ್ದೆವು ಎಂದು ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು ಅವರು ಮದುವೆಯಾಗಿ ಚೆನ್ನಾಗಿದ್ದಾರೆ, ಅವರ ಸಂಸಾರವನ್ನು ಹಾಳು ಮಾಡುವ ಕೆಲಸ ಯಾಕೆ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

713


ಆಗಿದ್ದು ಆಗಿ ಹೋಗಿದೆ. ಅದನ್ನೆಲ್ಲಾ ಯಾಕೆ ನೆನಪು ಮಾಡಿಕೊಳ್ಳುತ್ತೀರಿ.  ಹಿಂದಿನ ಜೀವನದಲ್ಲಿಯೇ ಸಿಕ್ಕಿ ಹಾಕಿಕೊಳ್ಳಬೇಡಿ ಎಂದು ಗಂಭೀರವಾಗಿ ಸಲಹೆಯನ್ನೂ ನೀಡಿದ್ದಾರೆ.

813

ನಾನು ಇರ್ಫಾನ್‌ ಜೊತೆ ಹಾಗೂ ಅವರ ಕುಟುಂಬದ ಜೊತೆ ಇದ್ದೆ. 2016 ನಮ್ಮ ಸೆಲಬ್ರೇಷನ್‌ ದಿನಗಳು ಎಂದು ಪಾಯಲ್‌ ಘೋಷ್‌ ಬರೆದಿದ್ದಾರೆ.

913

ನಾನು ಮುಂಬೈಗೆ ನನ್ನ ಮನೆಗೆ ಬಂದ ಕೂಡಲೇ ಅವನು ಕಾಲ್ ಮಾಡಿ ನನ್ನ ಕುಟುಂಬ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ. ನಂತರ ನನ್ನಿಂದ ಅಂತರ ಕಾಪಾಡಿಕೊಳ್ಳುತ್ತಲೇ ಹೋದ ಎಂದು ಬರೆದಿದ್ದಾರೆ.

1013

ಕೆಲವು ದಿನಗಳ ನಂತರ ಆತನ ಸಹೋದರಿ ಕಾಲ್‌ ಮಾಡಿ, ಇರ್ಫಾನ್‌ಗೆ ಮದುವೆಯಾಗುತ್ತಿದೆ ಎಂದು ತಿಳಿಸಿದ್ದರು. ಅದನ್ನು ನಿಮಗೆ ಊಹಿಸಲು ಸಾಧ್ಯವೇ? ನಾನು ಅನುಭವಿಸಿದ ನೋವು ಊಹಿಸಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ.

1113

ನಾನು ಚಾಲೆಂಜ್ ಮಾಡುತ್ತೇನೆ, ಯಾರಿಂದಲೂ ನನ್ನ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಯಲ್‌ ಘೋಷ್‌ ವಿವರವಾಗಿ ಬರೆದಿದ್ದಾರೆ.
 

1213

ನನ್ನ ಜೀವನದಲ್ಲಿ ಇರ್ಫಾನ್‌ ಪಠಾಣ್‌ಗಿಂತ ಚೆನ್ನಾಗಿರುವ ಆಯ್ಕೆ ಇದ್ದವು. ಆದರೆ, ಪ್ರೀತಿ ಯಾವಾಗಲೂ ಪ್ರೀತಿಯೇ ಅಲ್ಲವೇ? ನನ್ನ ತಂದೆ ನನ್ನ ಸಂಬಂಧಕ್ಕೆ ಎಷ್ಟೇ ವಿರೋಧ ವ್ಯಕ್ತ ಪಡಿಸಿದರೂ ನಾನೆಂದೂ ಮೋಸ ಮಾಡಲಿಲ್ಲ ಎಂದು ಬರೆದಿದ್ದಾರೆ.

1313

ನನ್ನ ತಂದೆ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಆದರೆ ನಾನು ಅವನನ್ನು ಯಾವಾಗಲೂ ಸಪೋರ್ಟ್ ಮಾಡಿದ್ದೆ. ಆದರೆ ಅವನು ನನಗೆ ಕೊಟ್ಟಿದ್ದೇನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.


 

Read more Photos on
click me!

Recommended Stories