ಕೀರ್ತಿ ಮಾತಿಗೆ ಬಗ್ಗದ ವ್ಯಕ್ತಿಗೆ ಪತಿ ಆಂಟೋನಿ ಮಧ್ಯಪ್ರವೇಶಿಸಿ ಮಾಡಿದ್ದೇನು? ಅಸಲೀ ವಿಷ್ಯ ಇರೋದೇ ಇಲ್ಲಿ!

Published : Oct 31, 2026, 03:04 PM IST

ಕೀರ್ತಿ ಸುರೇಶ್ ತಮ್ಮ ಪತಿ ಆಂಟೋನಿ ಥಟ್ಟಿಲ್ ಜೊತೆ ಮಿಲನ್‌ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಆ ವ್ಯಕ್ತಿ ಮದ್ಯಪಾನ ಮಾಡಿದ್ದನಂತೆ. ಮುಂದೇನಾಯ್ತು? ನೋಡಿ..

PREV
16

ವಿಮಾನದಲ್ಲಿ ಸೆಲ್ಫಿಗಾಗಿ ಕಿರುಕುಳ ನೀಡಿದ ಪ್ರಯಾಣಿಕ! ಕಹಿ ಅನುಭವ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್. Actress Keerthy Suresh has explained how frustrating it can be to face uncomfortable behavior from fans in public places!

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಮುಜುಗರದ ಘಟನೆಯೊಂದನ್ನು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಸೆಲೆಬ್ರಿಟಿಗಳಾಗಿರುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಅಭಿಮಾನಿಗಳಿಂದ ಎದುರಾಗುವ ಅಹಿತಕರ ವರ್ತನೆ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ವಿಶೇಷವಾಗಿ ವಿಮಾನ ಪ್ರಯಾಣದ ವೇಳೆ ನಡೆದ ಘಟನೆಯ ಬಗ್ಗೆ ಕೀರ್ತಿ ಹೇಳಿಕೊಂಡಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

26

ಸಿನಿಮಾ ಕ್ಷೇತ್ರದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕೀರ್ತಿ ಸುರೇಶ್, ಇದೀಗ ಒಟಿಟಿ ಲೋಕದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ 'ಡೊರೊಥಿ' ಚಿತ್ರದ ಮೂಲಕ ಮೆಚ್ಚುಗೆ ಪಡೆದಿದ್ದ ಅವರು, ಬಾಲಿವುಡ್ ನಟಿ ರಾಧಿಕಾ ಆಪ್ಟೆ ಜೊತೆ 'ಅಕ್ಕಾ' ಎಂಬ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ವೆಬ್ ಸರಣಿಯಾಗಿದ್ದು, ಅಕ್ಟೋಬರ್ 30ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸದ್ಯ ಈ ಸರಣಿಯ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

36

ವಿಮಾನದಲ್ಲಿ ಸೆಲ್ಫಿಗಾಗಿ ಹಠ ಹಿಡಿದ ವ್ಯಕ್ತಿ!

ಕೀರ್ತಿ ಸುರೇಶ್ ತಮ್ಮ ಪತಿ ಆಂಟೋನಿ ಥಟ್ಟಿಲ್ ಜೊತೆ ಮಿಲನ್‌ನಿಂದ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆಯಂತೆ. ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಕೀರ್ತಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಆ ವ್ಯಕ್ತಿ ಮದ್ಯಪಾನ ಮಾಡಿದ್ದರಿಂದ ಸರಿಯಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದನಂತೆ.

46

ಈ ಬಗ್ಗೆ ಮಾತನಾಡಿರುವ ಕೀರ್ತಿ, "ಆ ವ್ಯಕ್ತಿ ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ. ಆತ ಕುಡಿದಿದ್ದರಿಂದ ಸರಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಸ್ವಲ್ಪ ಸಮಯ ಕಾಯುವಂತೆ ನಾನು ಶಾಂತವಾಗಿ ಕೇಳಿಕೊಂಡೆ. ಆದರೆ ಆತ ನನ್ನ ಮಾತನ್ನು ಕೇಳದೆ ತಕ್ಷಣವೇ ಫೋಟೊ ತೆಗೆದುಕೊಳ್ಳಬೇಕೆಂದು ಹಠ ಹಿಡಿದ. ಫೋಟೊ ತೆಗೆದುಕೊಳ್ಳಬೇಕೇ ಬೇಡವೇ ಎಂಬುದು ನನ್ನ ನಿರ್ಧಾರ ಎಂದು ತಿಳಿಸಿದೆ" ಎಂದು ಹೇಳಿದ್ದಾರೆ.

56

ಪತಿ ಆಂಟೋನಿ ತಡೆದರೂ ವ್ಯಕ್ತಿಯ ವರ್ತನೆ ಬದಲಾಗಲಿಲ್ಲ!

ಕೀರ್ತಿ ಮಾತಿಗೂ ವ್ಯಕ್ತಿ ಸ್ಪಂದಿಸದಿದ್ದಾಗ ಅವರ ಪತಿ ಆಂಟೋನಿ ಕೂಡ ಮಧ್ಯಪ್ರವೇಶಿಸಿ ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸದ ಕಾರಣ ಕೀರ್ತಿ ವಿಮಾನದ ಸಿಬ್ಬಂದಿಗೆ ದೂರು ನೀಡಬೇಕಾಯಿತು ಎಂದು ತಿಳಿಸಿದ್ದಾರೆ.

ಅಭಿಮಾನಿಗಳು ತೋರಿಸುವ ಪ್ರೀತಿಯನ್ನು ತಾನು ಸದಾ ಗೌರವಿಸುತ್ತೇನೆ. ಅವರೊಂದಿಗೆ ಮಾತನಾಡುವುದು, ಫೋಟೊ ತೆಗೆಸಿಕೊಳ್ಳುವುದು ಸಂತೋಷ ನೀಡುತ್ತದೆ. ಆದರೆ ಅಭಿಮಾನದ ಹೆಸರಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೀರ್ತಿ ಸ್ಪಷ್ಟಪಡಿಸಿದ್ದಾರೆ. ಸಭ್ಯವಾಗಿ ವರ್ತಿಸಿ, ತಮ್ಮ ಅನುಮತಿಯನ್ನು ಗೌರವಿಸುವ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

66

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಕೀರ್ತಿ ಕೈಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್‌ಗಳಿವೆ. ಅನಿಲ್ ರವಿಪುಡಿ ನಿರ್ದೇಶನದ ಚಿತ್ರದಲ್ಲಿ ವೆಂಕಟೇಶ್ ಜೊತೆ ನಟಿಸುತ್ತಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಅಭಿನಯದ 'ರೌಡಿ ಜನಾರ್ದನ' ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ನಡುವೆ ವಿಮಾನದಲ್ಲಿ ತಮಗಾದ ಅನುಭವದ ಬಗ್ಗೆ ಕೀರ್ತಿ ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories