OTTಯಲ್ಲಿ ನಡುಕ ಹುಟ್ಟಿಸುವ ಹಾರರ್ ಥ್ರಿಲ್ಲರ್: ಮದುವೆಯಾದ ಪ್ರತಿಯೊಬ್ಬ ಸೊಸೆಗೂ ಅದೇ ಗತಿಯಂತೆ!

Published : Sep 26, 2026, 06:26 PM IST

OTTಯಲ್ಲಿ ಹಾರರ್, ಮಿಸ್ಟರಿ ಹಾಗೂ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ‘ಅಯ್ಯನ ಮನೆ’ ಕುತೂಹಲ ಮೂಡಿಸುವ ಕನ್ನಡ ವೆಬ್‌ಸಿರೀಸ್ ಆಗಿದೆ. ಮದುವೆಯಾಗಿ ಹಳೆಯ ‘ಅಯ್ಯನ ಮನೆ’ಗೆ ಬರುವ ಪ್ರತಿಯೊಬ್ಬ ಸೊಸೆಗೂ ಅನಿರೀಕ್ಷಿತ ದುರಂತ ಎದುರಾಗುತ್ತದೆ.

PREV
17
ವೆಬ್‌ಸಿರೀಸ್‌ಗಳಿಗೂ ಸಖತ್ ಕ್ರೇಜ್

ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗಷ್ಟೇ ಅಲ್ಲ, ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಿನಿಮಾಗಳು ಹಾಗೂ ವೆಬ್‌ಸಿರೀಸ್‌ಗಳಿಗೂ ಸಖತ್ ಕ್ರೇಜ್ ಇದೆ. ಯಾವ ಸಿನಿಮಾ, ಯಾವ ವೆಬ್‌ಸಿರೀಸ್ ಯಾವಾಗ OTTಗೆ ಬರುತ್ತದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಾರೆ. ಅದರಲ್ಲೂ ಹಾರರ್, ಮಿಸ್ಟರಿ ಹಾಗೂ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ OTT ಪ್ಲಾಟ್‌ಫಾರ್ಮ್‌ಗಳು ಹೊಸ ಹೊಸ ಕಂಟೆಂಟ್‌ಗಳನ್ನು ನೀಡುತ್ತಿವೆ.

27
ಆ ಕುಟುಂಬದಲ್ಲಿ ನಡೆಯುತ್ತಿರುವುದೇನು?

ವಿಶೇಷವಾಗಿ ಕಡಿಮೆ ಅವಧಿಯಲ್ಲಿ ವೇಗವಾಗಿ ಸಾಗುವ ಥ್ರಿಲ್ಲರ್ ವೆಬ್‌ಸಿರೀಸ್‌ಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಸಾಲಿನಲ್ಲಿ ಯಾವುದೇ ದೊಡ್ಡ ಹೈಪ್ ಇಲ್ಲದೆ OTTಗೆ ಬಂದಿರುವ ಕನ್ನಡದ ಹಾರರ್ ಮಿಸ್ಟರಿ ಸಿರೀಸ್‌ವೊಂದು ಇದೀಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮದುವೆಯಾಗಿ ಆ ಮನೆಗೆ ಕಾಲಿಡುವ ಪ್ರತಿಯೊಬ್ಬ ಸೊಸಿಗೂ ಅನಿರೀಕ್ಷಿತ ದುರಂತ ಎದುರಾಗುತ್ತದೆ. ಹಾಗಾದರೆ ಆ ಕುಟುಂಬದಲ್ಲಿ ನಡೆಯುತ್ತಿರುವುದೇನು? ಎಂಬ ಪ್ರಶ್ನೆಯೇ ಈ ಸಿರೀಸ್‌ನ ಕುತೂಹಲಕ್ಕೆ ಕಾರಣ.

37
ಆರಂಭದಿಂದ ಕೊನೆಯವರೆಗೂ ಸಸ್ಪೆನ್ಸ್

ಸಾಮಾನ್ಯ ದೆವ್ವದ ಕಥೆಗಳಿಗಿಂತ ವಿಭಿನ್ನವಾಗಿ ಕುಟುಂಬದ ಸಂಬಂಧಗಳು, ಅನುಮಾನಾಸ್ಪದ ಸಾವುಗಳು ಹಾಗೂ ಮನೆಯೊಳಗೆ ಅಡಗಿರುವ ರಹಸ್ಯಗಳನ್ನು ಒಟ್ಟುಗೂಡಿಸಿ ಈ ಸಿರೀಸ್‌ ಅನ್ನು ರೂಪಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಎಪಿಸೋಡ್ ಕೂಡ ಕಡಿಮೆ ಅವಧಿಯಲ್ಲಿ ಇರುವುದರಿಂದ ಕಥೆ ಎಲ್ಲಿಯೂ ಎಳೆಯಲಾಗಿದೆ ಎನ್ನಿಸುವುದಿಲ್ಲ. ಆರಂಭದಿಂದ ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುವ ರೀತಿಯಲ್ಲಿ ಸ್ಕ್ರೀನ್‌ಪ್ಲೇ ಸಾಗುತ್ತದೆ.

47
ಮದುವೆಯಾದ ನಂತರ ಆ ಹಳೆಯ ಬಂಗಲೆಗೆ ಬಂದ ಜಾಜಿ!

ಕಥೆಯ ವಿಚಾರಕ್ಕೆ ಬಂದರೆ, ಜಾಜಿ ಎಂಬ ಯುವತಿಗೆ ದುಷ್ಯಂತ್ ಜೊತೆ ಮದುವೆಯಾಗುತ್ತದೆ. ಮದುವೆಯ ಬಳಿಕ ಆಕೆ ತನ್ನ ಪತಿಯೊಂದಿಗೆ ಆತನ ಹಳೆಯ ಬಂಗಲೆ ‘ಅಯ್ಯನ ಮನೆ’ಗೆ ಬರುತ್ತಾಳೆ. ಆದರೆ ಮನೆಗೆ ಕಾಲಿಟ್ಟ ಕೆಲವೇ ಸಮಯದಲ್ಲಿ ಅಲ್ಲಿ ಅನಿರೀಕ್ಷಿತ ದುರಂತವೊಂದು ಸಂಭವಿಸುತ್ತದೆ. ಜಾಜಿ ಅತ್ತೆಮನೆಗೆ ಬಂದ ತಕ್ಷಣವೇ ಆಕೆಯ ಮಾವ ಮೃತಪಟ್ಟಿರುತ್ತಾರೆ. ಈ ಘಟನೆ ಜಾಜಿಗೆ ಆ ಮನೆಯ ವಾತಾವರಣದ ಬಗ್ಗೆ ಅನುಮಾನ ಮೂಡಿಸುತ್ತದೆ. ಮನೆಯಲ್ಲಿರುವ ಕುಟುಂಬ ಸದಸ್ಯರ ವರ್ತನೆಯೂ ಆಕೆಗೆ ವಿಚಿತ್ರವಾಗಿ ಕಾಣಿಸುತ್ತದೆ. ಪ್ರತಿಯೊಬ್ಬರ ವರ್ತನೆಯ ಹಿಂದೆಯೂ ಯಾವುದೋ ರಹಸ್ಯ ಅಡಗಿದೆ ಎಂಬ ಅನುಮಾನ ಜಾಜಿಗೆ ಕಾಡಲು ಆರಂಭಿಸುತ್ತದೆ.

57
ದುಷ್ಯಂತ್‌ಗೆ ಇದು ಮೊದಲ ಮದುವೆಯಲ್ಲ!

ಇದರ ನಡುವೆ ಮನೆಯ ಕೆಲಸದಾಕೆ ಜಾಜಿಗೆ ಹೇಳುವ ವಿಚಾರವೊಂದು ಆಕೆಯನ್ನು ಮತ್ತಷ್ಟು ಬೆಚ್ಚಿಬೀಳಿಸುತ್ತದೆ. ದುಷ್ಯಂತ್‌ಗೆ ಇದು ಮೊದಲ ಮದುವೆಯಲ್ಲ ಎಂಬ ಸತ್ಯ ಆಕೆಗೆ ತಿಳಿಯುತ್ತದೆ. ಈ ಹಿಂದೆ ದುಷ್ಯಂತ್‌ರನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು ಎಂಬ ವಿಚಾರವೂ ಜಾಜಿಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಆ ಕುಟುಂಬಕ್ಕೆ ಸೊಸೆಯಾಗಿ ಬಂದ ಮಹಿಳೆಯರು ಒಬ್ಬರ ಹಿಂದೆ ಒಬ್ಬರು ಸಾವನ್ನಪ್ಪಿದ್ದಾರೆ ಎಂಬ ಭಯಾನಕ ಸತ್ಯವೂ ಆಕೆಯ ಮುಂದೆ ತೆರೆದುಕೊಳ್ಳುತ್ತದೆ. ಈ ಹಿಂದೆ ಆ ಮನೆಗೆ ಸೊಸೆಯಾಗಿ ಬಂದಿದ್ದ ಮೂವರು ಮಹಿಳೆಯರೂ ಅನಿರೀಕ್ಷಿತ ರೀತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಜಾಜಿಗೆ ತಿಳಿಯುತ್ತದೆ.

67
ಆ ಮನೆಯಲ್ಲಿ ನಡೆಯುತ್ತಿರುವುದೇನು?

ಕಥೆ ಮುಂದುವರಿದಂತೆ ಜಾಜಿಗೆ ಮನೆಯಲ್ಲಿರುವ ಪ್ರತಿಯೊಬ್ಬರ ಮೇಲೂ ಅನುಮಾನ ಮೂಡುತ್ತದೆ. ಅದರಲ್ಲೂ ಕುಟುಂಬದ ಹಿರಿಯರ ವರ್ತನೆ ಆಕೆಗೆ ಮತ್ತಷ್ಟು ಗೊಂದಲ ಉಂಟುಮಾಡುತ್ತದೆ. ಹಿಂದೆ ನಡೆದ ಸಾವುಗಳ ಹಿಂದೆ ಯಾರ ಕೈವಾಡವಿದೆ? ಆ ಮನೆಗೆ ಸೊಸೆಯಾಗಿ ಬರುವ ಮಹಿಳೆಯರಿಗೇ ಏಕೆ ಅಪಾಯ ಎದುರಾಗುತ್ತಿದೆ? ಈ ಎಲ್ಲಾ ಘಟನೆಗಳಿಗೂ ಅತ್ತೆಗೂ ಏನಾದರೂ ಸಂಬಂಧವಿದೆಯೇ? ಎಂಬ ಪ್ರಶ್ನೆಗಳು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತವೆ. ಈ ರಹಸ್ಯಕ್ಕೆ ಉತ್ತರ ಕಂಡುಕೊಳ್ಳಲು ಜಾಜಿ ಮುಂದಾಗುತ್ತಾಳೆ. ಆದರೆ ಆಕೆ ಸತ್ಯವನ್ನು ಹುಡುಕಲು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಮನೆಯ ಮತ್ತೊಂದು ರಹಸ್ಯ ಬಯಲಾಗುತ್ತಾ ಹೋಗುತ್ತದೆ. ಹೀಗಾಗಿ ಕಥೆ ಮತ್ತಷ್ಟು ರೋಚಕವಾಗುತ್ತದೆ.

77
6 ಎಪಿಸೋಡ್‌ಗಳ ‘ಅಯ್ಯನ ಮನೆ’

ಈ ಹಾರರ್ ಮಿಸ್ಟರಿ ಥ್ರಿಲ್ಲರ್ ಸಿರೀಸ್‌ನ ಹೆಸರು ‘ಅಯ್ಯನ ಮನೆ’. ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಸಿರೀಸ್‌ ಸದ್ಯ ZEE5ನಲ್ಲಿ ಕನ್ನಡದ ಜೊತೆಗೆ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿದೆ. ‘ಅಯ್ಯನ ಮನೆ’ ಸಿರೀಸ್‌ನಲ್ಲಿ ಒಟ್ಟು 6 ಎಪಿಸೋಡ್‌ಗಳಿವೆ. ಪ್ರತಿಯೊಂದು ಎಪಿಸೋಡ್‌ ಸುಮಾರು 18ರಿಂದ 20 ನಿಮಿಷಗಳ ಅವಧಿಯನ್ನು ಹೊಂದಿದೆ. ಕಡಿಮೆ ರನ್‌ಟೈಮ್‌ನಲ್ಲೇ ಕಥೆಯನ್ನು ವೇಗವಾಗಿ ಮುಂದಕ್ಕೆ ಕೊಂಡೊಯ್ಯುವುದು ಈ ಸಿರೀಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇನ್ನು ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ‘ಅಯ್ಯನ ಮನೆ’ ವೀಕ್ಷಿಸಬಹುದಾಗಿದೆ. ಹಾರರ್ ಜೊತೆಗೆ ಮಿಸ್ಟರಿ, ಕುಟುಂಬದ ರಹಸ್ಯಗಳು ಹಾಗೂ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿರೀಸ್ ಕುತೂಹಲ ಮೂಡಿಸುವ OTT ಆಯ್ಕೆಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories