2009ರಲ್ಲೇ 70 ಕೋಟಿ ದೋಚಿದ ಕನ್ನಡತಿಯ ಫ್ಯಾಂಟಸಿ ಹಾರರ್, ಥ್ರಿಲ್ಲರ್ ನಿಗೂಢ ಸಿನಿಮಾ

Published : Sep 25, 2026, 03:07 PM IST

2009ರಲ್ಲಿ ಬಿಡುಗಡೆಯಾದ ಸೌಥ್ ಸಿನಿಮಾ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. 13.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಮಹಿಳಾ ಪ್ರಧಾನ ಹಾರರ್ ಸಿನಿಮಾ 70 ಕೋಟಿ ಗಳಿಸಿ ಹಲವು ದಾಖಲೆಗಳನ್ನು ಬರೆದಿದೆ. ಯಾವುದು ಈ ಸಿನಿಮಾ ಎಂಬುದರ ಮಾಹಿತಿ ಇಲ್ಲಿದೆ.

PREV
15
ಸಂಚಲನ ಸೃಷ್ಟಿಸಿದ ಸಿನಿಮಾ

2009ರಲ್ಲಿ ಬಿಡುಗಡೆಯಾದ ಈ ಸಿನಿಮಾ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು. ಈ ವೇಳೆ ಡಬ್ಬಿಂಗ್ ಆಯ್ಕೆಯಿಲ್ಲದಿದ್ರೂ ಜನರು ಮೂಲಭಾಷೆಯಲ್ಲಿಯೇ ಸಿನಿಮಾ ನೋಡಿ ಚಕಿತರಾಗಿದ್ದರು. ಚಿತ್ರದ ಹಿನ್ನೆಲೆ ಧ್ವನಿ ಕೇಳುತ್ತಿದ್ರೆ ನಡುಕ ಶುರುವಾಗುತ್ತದೆ. ಸಿನಿಮಾ ಬಿಡುಗಡೆ ಮುನ್ನ ಇದೊಂದು ಮಹಿಳಾ ಪ್ರಧಾನ ಸಿನಿಮಾ ಎಂದು ಊಹಿಸಿದ್ದರು. ರಿಲೀಸ್ ಬಳಿಕ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿತ್ತು.

25
100ಕ್ಕೆ 100 ಅಂಕ ನೀಡಿದ ಪ್ರೇಕ್ಷಕ

ಈ ಚಿತ್ರದಲ್ಲಿಯೇ ನಾಯಕಿಯೇ ಹೀರೋ. 2009ರಲ್ಲಿ 13.5 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಅಂದಿನ ಲೆಕ್ಕದಲ್ಲಿ ಸುಮಾರು 70 ಕೋಟಿಯಷ್ಟು ಹಣವನ್ನು ಬಾಚಿಕೊಂಡಿತ್ತು. ಸಿನಿಮಾ ನೋಡಿದ ವೀಕ್ಷಕರು ಇದಕ್ಕೆ 100ಕ್ಕೆ 100 ಅಂಕಗಳನ್ನು ನೀಡಿದ್ದರು. ಮಾನವ್ ಮಹಾಪಾತ್ರ, ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಕಥೆಗೆ ನಿರ್ದೇಶಕ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದರು.

35
ಯಾವುದು ಈ ಸಿನಿಮಾ?

ಕನ್ನಡತಿ ಅನುಷ್ಕಾ ಶೆಟ್ಟಿ ನಟನೆಯ 'ಅರುಂಧತಿ' (Arundhati) ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಅನುಷ್ಕಾ ಶೆಟ್ಟಿ ನಟನೆಗೆ ಇಡೀ ಚಿತ್ರರಂಗವೇ ಬೆಕ್ಕಸ ಬೆರಗಾಗಿತ್ತು. ಹಾರರ್‌ ಕಥೆ ಜೊತೆ ನೋಡುಗರಿಗೆ ಫ್ಯಾಂಟಸಿ ಲೋಕವನ್ನೇ ಅರುಂಧತಿ ಸಿನಿಮಾ ನೀಡುತ್ತದೆ. ಚಿತ್ರದ ಹಿನ್ನೆಲೆ ಸಂಗೀತ ನಿಮ್ಮನ್ನು ಕುರ್ಚಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತದೆ.

45
ಹಲವು ದಾಖಲೆಗಳನ್ನು ಬರೆದ ಅರುಂಧತಿ

2015 ರವರೆಗೆ ಇದು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಗಳಿಕೆಯ ಮಹಿಳಾ ಪ್ರಧಾನ ಚಿತ್ರವಾಗಿತ್ತು. ಈ ಚಿತ್ರವು 1.8 ಕೋಟಿಗೂ ಹೆಚ್ಚು ಪ್ರೇಕ್ಷಕರನ್ನು ಕಂಡ ಏಕೈಕ ದಕ್ಷಿಣ ಭಾರತದ ಮಹಿಳಾ ಪ್ರಧಾನ ಚಿತ್ರವಾಗಿತ್ತು. ಹೀಗೆ ಅರುಂಧತಿ ಸಿನಿಮಾ ಸಾಲು ಸಾಲು ದಾಖಲೆಗಳನ್ನು ತನ್ನ ಬಣ್ಣದ ಪುಟದಲ್ಲಿ ಬರೆದುಕೊಂಡಿದೆ. ನಂದಿ, ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅರುಂಧತಿ, ಬಂಗಾಳಿಗೆ ರಿಮೇಕ್ ಆಗಿದೆ.

55
ಚಿತ್ರದ ಕಥೆ ಏನು?

ನಾಯಕಿ ತನ್ನೂರಿಗೆ ಬರುತ್ತಾಳೆ. ನಾಯಕಿ ಬರುತ್ತಿದ್ದಂತೆ ಹಲವು ವರ್ಷಗಳಿಂದ ಅಂತರ ಪಿಶಾಚಿಯಾಗಿದ್ದ ಪಶುಪತಿಯ ದುಷ್ಟ ಆತ್ಮ ಜಾಗೃತಗೊಳ್ಳುತ್ತದೆ. ಒಂದು ರಾತ್ರಿಯಲ್ಲಿಯೇ ನಾಯಕಿ ಮುಂದೆ ನೂರಾರು ಸವಾಲಗಳು ಎದುರಾಗುತ್ತವೆ. ಈ ಸವಾಲುಗಳನ್ನು ನಾಯಕಿ ಹೇಗೆ ಎದುರಿಸುತ್ತಾಳೆ ಎಂಬವುದು ಸಿನಿಮಾದ ಒನ್‌ಲೈನ್ ಕತೆ. ಅರುಂಧತಿ ಸಿನಿಮಾವನ್ನು Sun NXT ಒಟಿಟಿ ಪ್ಲಾಟ್‌ಫಾರಂನಲ್ಲಿ ವೀಕ್ಷಣೆ ಮಾಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories