Sandalwood: ಅಂಡರ್‌ರೇಟೆಡ್ ಕನ್ನಡ ಸಿನಿಮಾಗಳು; ಮಿಸ್ ಮಾಡದೇ ನೋಡಿ ಕಣ್ತುಂಬಿಕೊಳ್ಳಿ

Published : Nov 03, 2026, 12:15 PM IST

Underrated Kannada Movies ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಥಿಯೇಟರ್‌ನಲ್ಲಿ ಸೋತರೂ, ನಂತರ ವೀಕ್ಷಕರ ಹೃದಯ ಗೆದ್ದ ಅತ್ಯುತ್ತಮ ಕನ್ನಡ ಸಿನಿಮಾಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಅಂಡರ್‌ರೇಟೆಡ್ ಚಿತ್ರಗಳು ಇಂದು ಕಲ್ಟ್ ಸಿನಿಮಾಗಳಾಗಿ ಮಾರ್ಪಟ್ಟಿವೆ.

PREV
15
ಥಿಯೇಟರ್‌ನಲ್ಲಿ ಸೋತ್ರು ಹೃದಯಗೆದ್ದ ಸಿನಿಮಾಗಳು

ಕೆಲವೊಂದು ಸಿನಿಮಾಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಥಿಯೇಟರ್‌ನಲ್ಲಿ ಸೋಲುತ್ತವೆ. OTT/TVಗಳಲ್ಲಿ ನೋಡಿದಾಗ ಎಷ್ಟು ಚೆಂದದ ಸಿನಿಮಾ ಎಂದು ಹೃದಯ ತುಂಬಿ ಬರುತ್ತದೆ. ಈ ಲೇಖನವು ಅಂತಹ ಅಂಡರ್‌ರೇಟೆಡ್ ಸಿನಿಮಾಗಳ ಪಟ್ಟಿಯನ್ನು ಹೊಂದಿದೆ. ಇಂದು ಈ ಎಲ್ಲಾ ಚಿತ್ರಗಳು ಕಲ್ಟ್ ಸಿನಿಮಾಗಳ ಸಿನಿಮಾಗಳಿಗೆ ಸೇರಿವೆ.

25
ದ್ವೀಪ-Dweepa

ಸೌಂದರ್ಯಾ, ಅವಿನಾಶ್ ಅಭಿನಯದ ದ್ವೀಪ ಸಿನಿಮಾ 2002ರಲ್ಲಿ ಬಿಡುಗಡೆಯಾಗಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ ಸಿನಿಮಾ ನೋಡಿದ ವೀಕ್ಷಕರಿಗೆ ಅಂತ್ಯದಲ್ಲೊಂದು ನಿರಾಳತೆಯನ್ನು ನೀಡುತ್ತದೆ. ಆಣೆಕಟ್ಟೆಯೊಂದು ನಿರ್ಮಿಸಲು ಗ್ರಾಮವನ್ನು ಸ್ಥಳಾಂತರ ಮಾಡುವ ಕತೆಯನ್ನು ಈ ಸಿನಿಮಾ ಹೊಂದಿದ್ದು, ಕುಟುಂಬವೊಂದು ಮೂಲಸ್ಥಳದಲ್ಲಿ ಉಳಿದುಕೊಳ್ಳಲು ನಿರ್ಧರಿಸುತ್ತದೆ. ಮುಂದೆ ಕಥೆ ಹೇಗೆ ಸಾಗುತ್ತೆ ಎಂಬುವುದೇ ಸಿನಿಮಾದ ಸಸ್ಪೆನ್ಸ್

OTT: Sun NXT OTT

35
ಚಿಗುರಿದ ಕನಸು-Chigurida Kanasu

ಟಿಎಸ್ ನಾಗಭರಣ ನಿರ್ದೇಶದನ ಅತ್ಯದ್ಭುತ ಸಿನಿಮಾಗಳಲ್ಲಿ ಚಿಗುರಿದ ಕನಸು ಸಹ ಒಂದಾಗಿದೆ. ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತ ಅವರು ಬರೆದ ಪ್ರಸಿದ್ಧ ಕನ್ನಡ ಕಾದಂಬರಿಯನ್ನು ಆಧರಿಸಿದೆ. ದೆಹಲಿಯಲ್ಲಿ ಹುಟ್ಟಿಬೆಳೆದ ಶಂಕರ್, ತನ್ನ ಮೂಲವನ್ನು ಹುಡುಕಿಕೊಂಡು ಕರ್ನಾಟಕದ ಮಲೆನಾಡು ಭಾಗಕ್ಕೆ ಬರುತ್ತಾರೆ. ಸಾಂಪ್ರದಾಯಿಕ ಮತ್ತು ಆಧುನಿಕತೆ ಸಂಘರ್ಷವನ್ನು ಸಿನಿಮಾದಲ್ಲಿ ಅತ್ಯಂತ ಸುಂದರವಾಗಿ ತೋರಿಸಲಾಗಿದೆ.

OTT: Sun NXT OTT

45
ಏಕಾಂಗಿ-Ekangi

2002ರಲ್ಲಿ ಬಿಡುಗಡೆಯಾದ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರಿಗೆ ದೊಡ್ಡ ಆಘಾತವನ್ನು ನೀಡಿದ ಸಿನಿಮಾ ಇದಾಗಿದೆ. ಸಿನಿಮಾವು ಅತ್ಯಂತ ಗಟ್ಟಿಕಥೆ ಮತ್ತು ಉತ್ತಮ ಸಂಗೀತ ಹೊಂದಿದ್ರೂ, ಅಂದು ವೀಕ್ಷಕರನ್ನು ಸೆಳೆಯಲು ವಿಫಲವಾಯ್ತು. ಈ ಚಿತ್ರಕ್ಕಾಗಿ ರವಿಚಂದ್ರನ್‌ ಐಷಾರಾಮಿ ಮನೆಯೊಂದನ್ನು ನಿರ್ಮಿಸಿದ್ದರು. ತಂದೆ ಹೇಳಿಕೊಟ್ಟ ಪಾಠದಲ್ಲಿಯೇ ಒಂಟಿಯಾಗಿ ಜೀವನ ನಡೆಸುವ ಯುವಕನ ಬಾಳಲ್ಲಿ ಸುಂದರಿಯ ಎಂಟ್ರಿಯಾಗುತ್ತೆ. ಮುಂದೆ ಚಿತ್ರ ಹೊಸ ತಿರುವು ಪಡೆದುಕೊಳ್ಳಲು ಆರಂಭಿಸುತ್ತದೆ.

OTT: Sun NXT OTT

55
ನಿಶ್ಯಬ್ಧ-Nishabhda

ದಿನೇಶ್ ಬಾಬು ನಿರ್ದೇಶನದ ಪ್ರಸಿದ್ಧ ಕನ್ನಡ ಥ್ರಿಲ್ಲರ್ ಸಿನಿಮಾ ಆದಾಗಿದ್ದು, ಬಿಡುಗಡೆಯಾದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ವಿಷ್ಣುವರ್ಧನ್, ರೇವತಿ, ಮೋಹಿನಿ, ಸಿಹಿ ಕಹಿ ಗೀತಾ ಸೇರಿದಂತೆ ತಾರಬಳಗವನ್ನು ನಿಶ್ಯಬ್ಧ ಸಿನಿಮಾ ಹೊಂದಿತ್ತು. ಇದು 1998ರಲ್ಲಿ ಬಿಡುಗಡೆಯಾಗಿದ್ದು, ಇಂದಿಗೂ ಶ್ವಾನಪ್ರೇಮಿಗಳ ನೆಚ್ಚಿನ ಸಿನಿಮಾಗಳಲ್ಲಿ ಒಂದಾಗಿದೆ. ಶ್ವಾನಗಳೊಂದಿಗೆ ಜೀವನ ನಡೆಸುವ ವ್ಯಕ್ತಿಯ ಸುತ್ತ ಸಾಗುವ ಕತೆ ಇದಾಗಿದ್ದು, ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ, ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

OTT: Sun NXT OTT

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories