1989ರಲ್ಲಿ ಬಿಡುಗಡೆಯಾದ ಈ ಸಿನಿಮಾ ಜನ್ಮ-ಪುನರ್ಜನ್ಮದ ಕಥೆಯನ್ನು ಹೊಂದಿದೆ. ಮಗಳ ಮೇಲಿನ ಮಮಕಾರದಿಂದ ತಾಯಿಯ ಆತ್ಮವು ಮರುಜನ್ಮ ಪಡೆದ ಮಗಳ ದೇಹವನ್ನು ಸೇರಿ ಆಕೆಯ ಪ್ರಿಯಕರನನ್ನು ಕೊಲ್ಲಲು ಯತ್ನಿಸುವ ರೋಚಕ ಕಥೆ ಇದರಲ್ಲಿದೆ.
ಜನ್ಮ-ಪುನರ್ಜನ್ಮ ನಂಬಿಕೆ ಕತೆಯನ್ನಾಧರಿಸಿ ಹಲವು ಸಿನಿಮಾಗಳು ಬಿಡುಗಡೆಗೊಂಡಿವೆ. 21ನೇ ಶತಮಾನ, 5G ಯುಗದಲ್ಲಿಯೂ ಪುನರ್ಜನ್ಮ ಕತೆಗಳನ್ನು ಕೇಳುತ್ತಿರುತ್ತೇವೆ. ಇಂದು ನಾವು ನಿಮಗೆ 1989ರಲ್ಲಿ ಬಿಡುಗಡೆಯಾಗಿ, ನೋಡುಗರಿಗೆ ರಸದೌತನ ನೀಡಿದ ಕನ್ನಡದ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಮಗಳ ಮೇಲಿನ ಮಮಕಾರದಿಂದ ತಾಯಿಯ ಆತ್ಮ ಯಾಕೆ ದೇಹವನ್ನು ಪ್ರವೇಶಿಸುತ್ತದೆ.
25
ಮರುಜನ್ಮ ಪಡೆದ ಮಗಳ ದೇಹ ಸೇರುವ ತಾಯಿ ಆತ್ಮ
ಚಿತ್ರದಲ್ಲಿ ಚಂದ್ರು-ಸಂಗೀತಾ ನಡುವೆ ಪ್ರೇಮಾಂಕುರವಾಗಿರುತ್ತೆ. ಆದ್ರೆ ಇಬ್ಬರಿಗೂ ಇದು ತಮ್ಮ ಪುನರ್ಜನ್ಮ ಎಂದು ತಿಳಿದಿರಲ್ಲ. ಮಗಳು ಮತ್ತು ಆಕೆಯ ಪ್ರಿಯಕರನ್ನು ಕೊಂದು ಹುಚ್ಚಿಯಾಗಿ ಬೀದಿ ಹೆಣವಾದ ತಾಯಿಯ ಆತ್ಮ, ಪುನರ್ಜನ್ಮ ಪಡೆದಿರೋ ಮಗಳ ಪ್ರಿಯಕರನ್ನು ಕೊಲ್ಲಲು ಮುಂದಾಗುತ್ತದೆ. ಇದಕ್ಕಾಗಿ ಮಗಳ ದೇಹವನ್ನು ಸೇರುವ ತಾಯಿ ಆತ್ಮದ ದ್ವೇಷವೇ ಚಿತ್ರದ ಒನ್‌ಲೈನ್ ಕಥೆ.
35
ಯಾವುದು ಈ ಸಿನಿಮಾ?
1989ರಲ್ಲಿ ಬಿಡುಗಡೆಯಾದ "ಅದೇ ರಾಗ, ಅದೇ ಹಾಡು" ಕನ್ನಡದ ಮ್ಯೂಸಿಕಲ್ ಹಿಟ್ ಹಾರರ್ ಸಿನಿಮಾ. ಶಿವರಾಜ್ ಕುಮಾರ್, ಸೀಮಾ, ಶ್ರೀನಾಥ್, ತೂಗುದೀಪ ಶ್ರೀನಿವಾಸ್ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಈ ಸಿನಿಮಾ ಹೊಂದಿದೆ. ಕಾಲೇಜು ಲವ್ ಸ್ಟೋರಿಯಿಂದ ಆರಂಭವಾಗುವ ಈ ಸಿನಿಮಾ ಅಂತ್ಯದಲ್ಲಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ಈ ಸಿನಿಮಾದಲ್ಲಿ ನಾಯಕಿ ತಾಯಿಯೇ ವಿಲನ್. ಸತ್ತ ಮೇಲೆಯೂ ಮಗಳ ಪ್ರಿಯಕರನನ್ನು ಕೊಲ್ಲಲು ಪದೇ ಪದೇ ಪ್ರಯತ್ನಿಸುತ್ತಿರುತ್ತಾಳೆ. ಯಾಕೆ ಈ ದ್ವೇಷ ಎಂದು ಹುಡುಕಾಟ ನಡೆಸಿದಾದ ನಂದಾ ಮತ್ತು ದೀಪಾಳ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಶ್ರೀಮಂತ ಕುಟುಂಬದ ದೀಪಾಗೆ ಅದೇ ಊರಿಗೆ ಬಡವ ಮತ್ತು ಅನಾಥ ನಂದನ ಮೇಲೆ ಲವ್ ಆಗುತ್ತದೆ. ಈ ವಿಷಯ ತಿಳಿದು ನಾಯಕಿ ತಾಯಿ ನಂದನ ಮನೆಗೆ ಬೆಂಕಿ ಹಚ್ಚುತ್ತಾಳೆ. ಈ ವೇಳೆ ನಂದನ ಮನೆಯಲ್ಲಿದ್ದ ಮಗಳು ದೀಪಾ ಸಹ ಸಾಯುತ್ತಾಳೆ. ನಂತರ ನಾಯಕಿ ತಾಯಿ ಹುಚ್ಚಿಯಾಗಿ ಸಾಯುತ್ತಾಳೆ.
55
ಯುಟ್ಯೂಬ್‌ನಲ್ಲಿ ಫ್ರೀಯಾಗಿ ನೋಡಿ
ಇದೇ ನಂದಾ ಮತ್ತು ದೀಪಾ ಮರುಜನ್ಮ ಪಡೆದು ಚಂದ್ರು-ಸಂಗೀತಾ ಆಗುತ್ತಾರೆ. ಇಲ್ಲಿಯೂ ಇಬ್ಬರಿಗೂ ಪ್ರೇಮಾಂಕುರ ಆಗುತ್ತದೆ. ಆದ್ರೆ ಹುಚ್ಚಿಯಾಗಿ ಸತ್ತ ತಾಯಿ ಆತ್ಮ, ಚಂದ್ರುನ ಜೀವ ತೆಗೆಯಲು ಮುಂದಾಗುತ್ತೆ. ಮುಂದೆ ಚಂದ್ರು ಈ ಸಮಸ್ಯೆಯಿಂದ ಹೇಗೆ ಪಾರಾಗುತ್ತಾನೆ? ತಾಯಿಯ ಆತ್ಮಕ್ಕೆ ಮುಕ್ತಿ ಸಿಗುತ್ತಾ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬಹುದು. ಅದೇ ರಾಗ, ಅದೇ ಹಾಡು ಸಿನಿಮಾ ಯುಟ್ಯೂಬ್‌ನಲ್ಲಿದ್ದು, ಫ್ರಿಯಾಗಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.