ಇದು ದುರ್ಬಲ ಹೃದಯದವರಿಗಲ್ಲ; 9.7 ರೇಟಿಂಗ್ ಹೊಂದಿರೋ ವೆಬ್‌ ಸಿರೀಸ್ OTTಯಲ್ಲಿ ಲಭ್ಯ

Published : Aug 15, 2026, 02:07 PM IST

ಇದು ನೈಜ ಘಟನೆ ಆಧಾರಿತ ವೆಬ್ ಸಿರೀಸ್ ಆಗಿದ್ದು, ಪತಿಯನ್ನು ಕೊ*ಲೆ ಮಾಡಿದ ಮಹಿಳೆಯರ ಪ್ರಕರಣಗಳನ್ನು ಇದು ಒಳಗೊಂಡಿದೆ. 9.7ರ IMDb ರೇಟಿಂಗ್ ಪಡೆದಿರುವ ಈ ಸರಣಿಯನ್ನು ಅಜಿತೇಶ್ ಶರ್ಮಾ ನಿರ್ದೇಶಿಸಿದ್ದಾರೆ.

PREV
15
9.7 ರೇಟಿಂಗ್ ಪಡೆದಿರೋ ಈ ವೆಬ್ ಸಿರೀಸ್

ಭಾನುವಾರ ರಜೆ ದಿನವಾಗಿದ್ದು, ಧಮಾಕಾ ಕಥೆಯನ್ನು ಹೊಂದಿರುವ ವೆಬ್‌ ಸಿರೀಸ್ ನೋಡಲು ಪ್ಲಾನ್ ಮಾಡೊಕೊಂಡಿದ್ದೀರಾ? ಹಾಗಾದ್ರೆ ಈ ಸರಣಿಯನ್ನು ನಿಮ್ಮಿಷ್ಟದ ಪಟ್ಟಿಗೆ ಸೇರಿಸಿಕೊಳ್ಳಿ. 9.7 ರೇಟಿಂಗ್ ಪಡೆದಿರೋ ಈ ವೆಬ್ ಸಿರೀಸ್, ಹಾರ್ಟ್ ವೀಕ್ ಇದ್ದವರಿಗೆ ಮಾತ್ರ ಖಂಡಿತ ಅಲ್ಲ. ಯಾವುದು ಈ ವೆಬ್ ಸೀರಿಸ್ ಮತ್ತು ಯಾವ ಒಟಿಟಿಯಲ್ಲಿ ಲಭ್ಯವಿದೆ ಎಂಬುದನ್ನು ನೋಡೋಣ ಬನ್ನಿ.

25
IMDBಯಲ್ಲಿಯೂ ಉತ್ತಮ ರೇಟಿಂಗ್

ಇತ್ತೀಚೆಗೆ ನೈಜ ಘಟನೆಯಾಧರಿತ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳನ್ನು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಜನರು ಸಹ ಇಂತಹ ಪ್ರಕರಣಗಳ ಸಿನಿಮಾಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇಂದು ನಾವು ಹೇಳುತ್ತಿರುವ ವೆಬ್ ಸಿರೀಸ್ ಇದೇ ವರ್ಷ ಜನವರಿಯಲ್ಲಿ OTTಯಲ್ಲಿ ಸ್ಟ್ರೀಮಿಂಗ್ ಆಗಿದೆ. ಇದು ಐಎಂಡಿಬಿಯಲ್ಲಿಯೂ ಉತ್ತಮ ರೇಟಿಂಗ್ ಪಡೆದುಕೊಂಡಿದೆ.

35
Honeymoon Se Hatya - Web Series

"ಹನಿಮೂನ್ ಕಾ ಸತ್ಯ" ಶೀರ್ಷಿಕೆಯ ವೆಬ್ ಸಿರೀಸ್, ಮಹಿಳೆಯರು ನಡೆಸುವ ಗಂಡನ ಕೊ*ಲೆ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಕಥೆಯನ್ನು ಸುಂದರವಾಗಿ ಹೆಣೆಯಲಾಗಿದೆ. ಈ ಸರಣಿ ಸೋನಮ್ ರಘುವಂಶಿ, ಮೀರತ್ ಬ್ಲ್ಯೂ ಡ್ರಮ್, ದೆಹಲಿ ವಿದ್ಯುತ್ ಅಪಘಾತದಂತಹ ಕೇಸ್‌ಗಳ ಭಯಾನಕ ಘಟನೆಗಳನ್ನು ತೆರೆಯ ಮೇಲೆ ತೆಗೆದುಕೊಂಡು ಬರಲಾಗಿದೆ. ಈ ಮೂವರು ಕೇಸ್‌ ಜೊತೆ ಇನ್ನಿತರ ಪ್ರಕರಣಗಳನ್ನು ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ.

45
ಅಜಿತೇಶ್ ಶರ್ಮಾ ನಿರ್ದೇಶನ

ಗಂಡನ ಕೊ*ಲೆ, ಅದರ ಹಿಂದಿನ ಸತ್ಯ, ಆ ಸಮಯದಲ್ಲಿ ಮಹಿಳೆಯ ಮನಸ್ಥಿತಿ ಸೇರಿದಂತಹ ಸೂಕ್ಷ್ಮ ವಿಷಯಗಳನ್ನು ನಿರ್ದೇಶಕರು ಅದ್ಭುತವಾಗಿ ತೆರೆ ಮೇಲೆ ತೆಗೆದುಕೊಂಡು ಬಂದಿದ್ದಾರೆ. ಅಜಿತೇಶ್ ಶರ್ಮಾ ನಿರ್ದೇಶನದ Honeymoon Se Hatya ವೆಬ್ ಸರಣಿಯಲ್ಲಿ ಅನುರೇಖಾ ಭಗತ್ ಮತ್ತು ಸುಶ್ಮಿತಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

55
ಐದು ಪ್ರಕರಣಗಳು

ಜನವರಿ 6ರಿಂದ ZEE5ನಲ್ಲಿ ಈ ವೆಬ್ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದೆ. ಮೀರತ್ ಬ್ಲೂ ಡ್ರಮ್ ಪ್ರಕರಣ, ಮೇಘಾಲಯ ಹನಿಮೂನ್ ಮರ್ಡರ್, ಮುಂಬೈ ಟೈಲ್ ಪ್ರಕರಣ, ದೆಹಲಿ ವಿದ್ಯುತ್ ಆಘಾತ ಪ್ರಕರಣ ಮತ್ತು ಭಿವಾನಿ ಪ್ರಭಾವಿ ಪ್ರಕರಣದ ನೈಜ ಘಟನೆಗಳ ಕಥೆಯನ್ನು ಈ ವೆಬ್ ಸಿರೀಸ್ ಹೊಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories