ಕೇರಳದ ಘಟನೆಯಾಧಾರಿತ ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; OTTಯಲ್ಲಿ ಹಲ್‌-ಚಲ್

Published : Aug 13, 2026, 09:59 AM IST

ಕೇರಳದಲ್ಲಿ 2021ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ತಮಿಳಿನ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ಯುವತಿಯರನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ತನಿಖೆಯ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಾಗುತ್ತದೆ.

PREV
15
ಸಸ್ಪೆನ್ಸ್, ಕ್ರೈಮ್, ಹಾರರ್ ಮತ್ತು ಥ್ರಿಲ್ಲರ್

ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬೇರೆ ಬೇರೆ ಜಾನರ್‌ನ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿದ್ದರೂ, ಸಸ್ಪೆನ್ಸ್, ಕ್ರೈಮ್, ಹಾರರ್ ಮತ್ತು ಥ್ರಿಲ್ಲರ್ ಕಥೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸತ್ಯ ಘಟನೆಯೊಂದು ಆಧರಿತ ಸಿನಿಮಾವೊಂದು ಒಟಿಟಿ ಪ್ಲಾಟ್‌ಫಾರಂನಲ್ಲಿ ಹಲ್‌-ಚಲ್ ಸೃಷ್ಟಿಸಿದೆ. ಯಾವುದು ಆ ಸಿನಿಮಾ ಎಂದು ನೋಡೋಣ ಬನ್ನಿ.

25
ಕೇರಳದಲ್ಲಿ 2021ರ ವೇಳೆ ನಡೆದ ಘಟನೆ

ಈ ಸಿನಿಮಾದ ಕಥೆ ಕೇರಳದಲ್ಲಿ 2021ರ ವೇಳೆ ನಡೆದ ಘಟನೆಯನ್ನಾಧರಿಸಿ ಬರೆಯಲಾಗಿದೆ. ಓರ್ವ ಸೀರಿಯಲ್ ಕಿಲ್ಲರ್ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಕೊ*ಲೆಗಾರ ಸಿನಿಮಾದಲ್ಲಿ ಅವಕಾಶಗಳನ್ನು ಕೊಡಿಸೋದಾಗ ಹೇಳಿ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡುತ್ತಿರುತ್ತಾನೆ. ಸರಣಿ ಕೊ&ಲೆಗಳು, ಅವುಗಳ ಹಿಂದಿನ ರಹಸ್ಯ ಸೇರಿದಂತೆ ಪೊಲೀಸ್ ತನಿಖೆ ಹೇಗೆ ನಡೆಯುತ್ತೆ ಎಂಬುದನ್ನು ಈ ಸಸ್ಪೆನ್ಸ್ ಸಿನಿಮಾದಲ್ಲಿ ವೀಕ್ಷಿಸಬಹುದು.

35
ತಮಿಳಿನ ಸ್ಟೀಫನ್ ಸಿನಿಮಾ

ತಮಿಳಿನ ಸ್ಟೀಫನ್ ಸಿನಿಮಾದ ಬಗ್ಗೆ ನಾವು ಹೇಳುತ್ತಿದ್ದೇವೆ. ಹಂತಕ ಸ್ಟೀಫನ್ ಜಬರಾಜ್ ಸುತ್ತವೇ ಈ ಚಿತ್ರದ ಕಥೆ ಸಾಗುತ್ತದೆ. ಚಿತ್ರದಲ್ಲಿನ ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಪ್ರೇಕ್ಷಕರು ಸುಲಭವಾಗಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಕಥೆಯನ್ನು ತೆರೆ ಮೇಲೆ ತೆಗೆದುಕೊಂಡು ಬರಲಾಗಿದೆ.

45
ಸ್ಟೀಫನ್ ಸಿನಿಮಾ ಯಾಕೆ ನೋಡಬೇಕು?

ಸ್ಟೀಫನ್ ಯಾಕೆ ಈ ಕೊ*ಲೆ ಮಾಡುತ್ತಿದ್ದ? ಸ್ಟೀಫನ್‌ನ ಗತಕಾಲದಲ್ಲಿ ಏನಾಗಿತ್ತು? ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಆಘಾತಕಾರಿ ಮಾಹಿತಿ ಏನು? ಎಂಬುದೇ ಸಿನಿಮಾದ ಪ್ರಮುಖ ಪ್ರಶ್ನೆಗಳಾಗಿವೆ. ನ್ಯಾಯಾಲಯದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಳ್ಳುವುದು ಕಥೆಗೆ ಮತ್ತಷ್ಟು ರೋಚಕತೆಯನ್ನು ನೀಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ನೀವು ಸ್ಟೀಫನ್ ಸಿನಿಮಾವನ್ನು ನೋಡಬೇಕಾಗುತ್ತದೆ.

55
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟೀಫನ್ ಸಿನಿಮಾ ಸ್ಟ್ರೀಮಿಂಗ್

ಮಿಥುನ್ ಬಾಲಾಜಿ ನಿರ್ದೇಶನದ ಈ ಸಿನಿಮಾದಲ್ಲಿ ಸ್ಟೀಫನ್ ಆಗಿ ಗೋಮತಿ ಶಂಕರ್ ನಟಿಸಿದ್ದಾರೆ. ಮೈಕೆಲ್ ತಂಗದುರೈ, ಸ್ಮೃತಿ ವೆಂಕಟ್, ಕುಬೇರನ್, ವಿಜಯಶ್ರೀ, ಅಮರ ರಮೇಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಈ ಚಿತ್ರವನ್ನು ನೋಡಬಹುದು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟೀಫನ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories