ಶಿಲ್ಪಾ, ಐಶ್ವರ್ಯಾ ಅಲ್ಲ; 150 ಕೋಟಿ ಕಲೆಕ್ಷನ್ ಮಾಡಿದ ಕನ್ನಡತಿಯ ಫಸ್ಟ್‌ ಸಿನ್ಮಾ!

Published : Nov 11, 2026, 10:43 AM IST

ಬೆಂಗಳೂರು ಮೂಲದ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಮೊದಲ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಡಬಲ್ ರೋಲ್‌ನಲ್ಲಿ ನಟಿಸಿದ ಈ ಸಿನಿಮಾ 1970ರ ಕಾಲಘಟ್ಟದ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.

PREV
15
ಮೊದಲ ಸಿನಿಮಾವೇ 150 ಕೋಟಿ ಕಲೆಕ್ಷನ್

ಕರುನಾಡು ಅಪಾರ ಪ್ರತಿಭೆಗಳನ್ನು ಹೊಂದಿರುವ ಭೂಮಿ. ಕನ್ನಡದ ಪ್ರತಿಭೆಗಳು ಭಾರತವಷ್ಟೇ ಅಲ್ಲ, ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ. ಕನ್ನಡ ಸಿನಿಮಾಗಳಿಂದ ಬಾಲಿವುಡ್‌ಗೆ ಹೋದ ಕನ್ನಡತಿ ಮೊದಲ ಸಿನಿಮಾದಲ್ಲಿಯೇ ಮೂಡಿ ಮಾಡುವ ಮೂಲಕ ಇಂದು ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ನಟಿಯ ಮೊದಲ ಸಿನಿಮಾ ವಿಶ್ವದಾದ್ಯಂತ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

25
ಮೊದಲ ಸಿನಿಮಾದಲ್ಲಿ ಕಮಾಲ್

2006ರಲ್ಲಿ ಈ ನಟಿ ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದರು. ಈ ಸಿನಿಮಾದ ನಂತರ ಅತಿದೊಡ್ಡ ಅವಕಾಶವೊಂದು ನಟಿಗೆ ಕಾದಿತ್ತು. ಬಾಲಿವುಡ್ ಅಂಗಳದ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿದ್ದು, ನಟಿಗೆ ಡ್ಯೂಯಲ್ ರೋಲ್‌ನಲ್ಲಿ ನಟಿಸುವ ಚಾನ್ಸ್ ಸಿಕ್ಕಿತ್ತು. 2007ರಂದು ಬಿಡುಗಡೆಯಾದ ಈ ಸಿನಿಮಾ 1970ರ ಬಣ್ಣದ ಲೋಕದ ಕಾಲಘಟ್ಟವನ್ನು ಮರುಸೃಷ್ಟಿಸಿತ್ತು. ಯಾವುದು ಈ ಸಿನಿಮಾ? ಯಾರು ಈ ನಟಿ ಎಂದು ನೋಡೋಣ ಬನ್ನಿ.

35
ಬೆಂಗಳೂರಿನ ನಟಿ

ಹೌದು, ನಾವು ಹೇಳುತ್ತಿರುವ ನಟಿಯ ಹೆಸರು ದೀಪಿಕಾ ಪಡುಕೋಣೆ. ಬ್ಯಾಡ್ಮಿಟನ್ ಆಟಗಾರ ಪ್ರಕಾಶ್ ಪಡುಕೋಣೆಯವರ ಪುತ್ರಿಯಾಗಿರುವ ದೀಪಿಕಾ, ದಶಕದವರೆಗೂ ಬಾಲಿವುಡ್‌ ಆಳಿದ್ದಾರೆ. ಸದ್ಯ ತಾಯ್ತನದ ಖುಷಿಯಲ್ಲಿರುವ ದೀಪಿಕಾ ಪಡುಕೋಣೆ ವೃತ್ತಿಜೀವನದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ. ತಾಯಿಯಾದ್ರೂ ದೀಪಿಕಾ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ಫರ್ಹಾ ಖಾನ್ ನಿರ್ದೇಶನದ 'ಓಂ ಶಾಂತಿ ಓಂ' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪನೆ ಮಾಡಿದ್ದರು.

ಇದನ್ನೂ ಓದಿ: ಆಪ್ತಮಿತ್ರ ನಂತರ ಭಯ ಹುಟ್ಟಿಸಿದ ಕನ್ನಡದ ಸಿನಿಮಾ: ಬೆಸ್ಟ್ ಹಾರರ್ ಥ್ರಿಲ್ಲರ್ ಕಥೆ!

45
ಓಂ ಶಾಂತಿ ಓಂ

ಪರ್ಹಾನ್ ಖಾನ್ ನಿರ್ದೇಶನ, ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಅರ್ಜುನ್ ರಾಂಪಾಲ್, ಶ್ರೇಯಸ್ ತಲ್ಪಾಡೆ, ಕಿರಣ್ ಖೇರ್ ಸಹ ಚಿತ್ರದ ಭಾಗವಾಗಿದ್ದರು. 2007ರಲ್ಲಿ 40 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ 'ಓಂ ಶಾಂತಿ ಓಂ' 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ಮುಂಗಾರುಮಳೆ ನಂತ್ರ ಪ್ರೇಕ್ಷಕರನ್ನು ಭಾವುಕರನ್ನಾಗಿಸಿ ಕೋಟಿ ಕೋಟಿ ಲಾಭ ಗಳಿಸಿದ ಸಿನಿಮಾ

55
ಚಿತ್ರದ ಕಥೆ ಏನು?

1970ರ ಕಾಲಘಟ್ಟದ ಸೂಪರ್ ಸ್ಟಾರ್ ನಾಯಕಿ ಶಾಂತಿ ನಿಗೂಢವಾಗಿ ಸಾಯುತ್ತಾಳೆ. ಈ ಸಾವಿಗೆ ಸಾಕ್ಷಿಯಾಗುವ ನಾಯಕನನ್ನು ಕೊಲ್ಲಲಾಗುತ್ತದೆ. ನಂತರ ಇವರಿಬ್ಬರು ಮರುಜನ್ಮ ಪಡೆಯುತ್ತಾರೆ. ನಾಯಕನಿಗೆ ತನ್ನ ಜನ್ಮರಹಸ್ಯ ತಿಳಿಯುತ್ತಲೇ ಶಾಂತಿ ಸಾವಿಗೆ ಕಾರಣವಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿನಿಮಾವೊಂದನ್ನೇ ನಿರ್ಮಾಣ ಮಾಡಲಾಗುತ್ತದೆ. ಚಿತ್ರದ ನಾಯಕಿಗಾಗಿ ಆಡಿಷನ್ ನಡೆಸುವಾಗ ಬೆಂಗಳೂರಿನ ಸ್ಯಾಂಡಿಯ ಪರಿಚಯ ನಾಯಕನಿಗಾಗುತ್ತದೆ. ಮುಂದೆ ಏನು ಆಗುತ್ತೆ ಎಂಬುದನ್ನು ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಿ. ಓಂ ಶಾಂತಿ ಓಂ ಸಿನಿಮಾ Netflixನಲ್ಲಿ ಲಭ್ಯವಿದೆ.

ಇದನ್ನೂ ಓದಿ: 520 ದಿನ ಯಶಸ್ವಿ ಪ್ರದರ್ಶನ ಕಂಡ ಕನ್ನಡದ ಸಿನಿಮಾ; 1996ರಲ್ಲೇ 22 ಕೋಟಿ ಕಲೆಕ್ಷನ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories