520 ದಿನ ಯಶಸ್ವಿ ಪ್ರದರ್ಶನ ಕಂಡ ಕನ್ನಡದ ಸಿನಿಮಾ; 1996ರಲ್ಲೇ 22 ಕೋಟಿ ಕಲೆಕ್ಷನ್

Published : Oct 17, 2026, 01:04 PM IST

1996ರಲ್ಲಿ ಬಿಡುಗಡೆಯಾದ ಈ ಸಿನಿಮಾ 520 ದಿನಗಳವರೆಗೆ ಯಶಸ್ವಿ ಪ್ರದರ್ಶನ ಕಂಡಿತ್ತು. ಕೇವಲ 62 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಬರೋಬ್ಬರಿ 22 ಕೋಟಿ ರೂ. ಕಲೆಕ್ಷನ್ ಮಾಡಿ ಹಲವು ದಾಖಲೆಗಳನ್ನು ಬರೆದಿದೆ.

PREV
15
520 ದಿನಗಳವರೆಗೆ ಯಶಸ್ವಿ ಪ್ರದರ್ಶನ

ಕನ್ನಡದ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. ಇಂದು ಒಂದು ಸಿನಿಮಾ ಚಿತ್ರಮಂದಿರದಲ್ಲಿ ವಾರದ ಬಳಿಕವೂ ಪ್ರದರ್ಶನವಾದ್ರೆ ದಾಖಲೆ ಬರೆದಿದೆ ಎಂಬ ಹೆಡ್‌ಲೈನ್ಸ್‌ಗಳು ಬರುತ್ತವೆ. ಇಂದು ನಾವು ಹೇಳುತ್ತಿರುವ ಕನ್ನಡ ಸಿನಿಮಾವೊಂದು ಬರೋಬ್ಬರಿ 520 ದಿನಗಳವರೆಗೆ ಯಶಸ್ವಿ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಹಲವು ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

25
ಅತ್ಯುತ್ತಮ ಪ್ರದರ್ಶನ

ಈ ಸಿನಿಮಾ ರಾಜ್ಯದ ಐದು ಥಿಯೇಟರ್‌ಗಳಲ್ಲಿ 25 ವಾರ ಪ್ರದರ್ಶನ ಕಂಡಿತು. ಎಂಟು ಥಿಯೇಟರ್‌ಗಳಲ್ಲಿ 365 ದಿನ ಅಂದ್ರೆ ಒಂದು ವರ್ಷದವವರಗೂ ಪ್ರದರ್ಶನವಾಯ್ತು. ರಾಜ್ಯದ ಗಡಿ ಭಾಗದಲ್ಲಿಯೂ ಅತ್ಯುತ್ತಮ ಪ್ರದರ್ಶನ ಹೊಂದುವ ಮೂಲಕ, ಕರುನಾಡಿನ ಮೆಚ್ಚಿದ ಚಿತ್ರ ಎಂಬ ಹೆಗ್ಗಳಿಕೆಗೆ ಕಾರಣವಾಯ್ತು. ಗ್ರಾಮೀಣ ಭಾಗದ ಜನರು ಎತ್ತಿನಬಂಡಿ ಕಟ್ಟಿಕೊಂಡು ನಗರ ಪ್ರದೇಶಗಳಿಗೆ ತೆರಳಿ ಸಿನಿಮಾ ವೀಕ್ಷಣೆ ಮಾಡಿದ್ದರು.

35
1996ರ ಜನುಮದ ಜೋಡಿ

ಟಿಎಸ್ ನಾಗಭರಣ ನಿರ್ದೇಶನದ ಶಿವರಾಜ್‌ಕುಮಾರ್ ಮತ್ತು ಶಿಲ್ಪಾ ಜೋಡಿಯಾಗಿ ನಟಿಸಿದ 'ಜನುಮದ ಜೋಡಿ' ಸಿನಿಮಾ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನವಾಗಿದೆ. ರೊಮ್ಯಾಂಟಿಕ್ ಕಥೆಯನ್ನು ಹೊಂದಿದ 'ಜನುಮದ ಜೋಡಿ' ಸಿನಿಮಾ, 1996ರಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಗಟ್ಟಿ ಕತೆ ಜೊತೆಯಲ್ಲಿ ಸೂಪರ್‌ ಹಿಟ್ ಹಾಡುಗಳು, ಕಲಾವಿದರ ಸಹಜ ನಟನೆ ಸಿನಿಮಾದ ಗೆಲುವಿಗೆ ಕಾರಣವಾಗಿತ್ತು.

45
ಕೃಷ್ಣ-ಕನಕಳ ಪ್ರೇಮಕಥೆ

ಕೃಷ್ಣ-ಕನಕಳ ಪ್ರೇಮಕಥೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಅಂತಿಮವಾಗಿ ಕೃಷ್ಣ ಮತ್ತು ಕನಕ ಒಂದಾಗ್ತಾರಾ ಅನ್ನೋದೇ ಚಿತ್ರದ ಒನ್‌ಲೈನ್ ಕಥೆಯಾಗಿದೆ. ವಿ.ಮನೋಹರ್ ಅವರ ಸಂಗೀತ ಜನುಮದ ಜೋಡಿ ಪ್ರೀತಿ ನೋಡುಗರ ಹೃದಯಕ್ಕೆ ತಾಗುವಂತೆ ಮಾಡಿತ್ತು. ಚಿತ್ರದ ಕಥೆಗೆ ತಕ್ಕಂತೆಯೇ ಇಲ್ಲಿ ಬರೋ 9 ಹಾಡುಗಳು ನಿಮ್ಮನ್ನು ಕೊನೆಯವರೆಗೂ ಕಟ್ಟಿ ಹಾಕುತ್ತದೆ.

55
62 ಲಕ್ಷಕ್ಕೆ 22 ಕೋಟಿ ಕಲೆಕ್ಷನ್

1996ರಲ್ಲಿ ಜನುಮದ ಜೋಡಿ ಸಿನಿಮಾ ನಿರ್ಮಾಣಕ್ಕೆ 62 ಲಕ್ಷ ರೂಪಾಯಿ ಖರ್ಚು ಆಗಿತ್ತು. ಒಂದು ವರ್ಷಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನವಾದ ಜನುಮದ ಜೋಡಿ ಸಿನಿಮಾ ಬರೋಬ್ಬರಿ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಲವು ವಿಭಾಗಗಳಲ್ಲಿ ಜನುಮದ ಜೋಡಿ ರಾಜ್ಯ ಮತ್ತು ಫಿಲಂಫೇರ್ ಅವಾರ್ಡ್ ಪಡೆದುಕೊಂಡಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories