ಒಂಟಿಯಾಗಿದ್ರೆ ಪುನೀತ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ ನೋಡಿ, ಕಥೆಯಲ್ಲಿ ಕಳೆದುಹೋಗ್ತೀರಿ

Published : Oct 09, 2026, 09:15 AM IST

2011ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ನಂತರ ಕಲ್ಟ್ ಸಿನಿಮಾ ಆಗಿ ಹೊರಹೊಮ್ಮಿತು. ಈ ಚಿತ್ರದ ಹಾಡುಗಳು ಮತ್ತು ವಿಭಿನ್ನ ಕಥೆ ಪ್ರೇಕ್ಷಕರ ಮನಗೆದ್ದಿದೆ. ಈ ಮ್ಯೂಸಿಕಲ್ ಹಿಟ್ ಸಿನಿಮಾವನ್ನು ಒಂಟಿಯಾಗಿ ಕುಳಿತು ನೋಡಬೇಕು.

PREV
15
ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ನಟನೆಯ ಹಲವು ಸಿನಿಮಾಗಳು ಸೂಪರ್ ಹಿಟ್ ಪಟ್ಟಿಯಲ್ಲಿವೆ. ಆದ್ರೆ ಕೆಲವೊಂದು ಬಾಕ್ಸ್‌ಆಫಿಸ್‌ನಲ್ಲಿ ಸದ್ದು ಮಾಡಲು ವಿಫಲವಾಗಿದ್ದುಂಟು. ಇಂದು ನಾವು ಹೇಳುತ್ತಿರುವ ಸಿನಿಮಾದಲ್ಲಿ ಒಂದೊಂದು ಹಾಡುಗಳು ಕಿವಿಗಳಿಗೆ ಇಂಪು ಮತ್ತು ಮನಸ್ಸಿಗೆ ತಂಪು ನೀಡುತ್ತಿವೆ. 2011ರಲ್ಲಿ ಬಿಡುಗಡೆಯಾದ ಸಿನಿಮಾ, ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ.

25
2 ಗಂಟೆ 17 ನಿಮಿಷದ ಕಲ್ಟ್ ಸಿನಿಮಾ

2 ಗಂಟೆ 17 ನಿಮಿಷದ ಈ ಸಿನಿಮಾ 6 ಕೋಟಿ ಬಜೆಟ್‌ನಲ್ಲಿ ಸಿದ್ದವಾಗಿ, ಅಂತಿಮವಾಗಿ ಎಲ್ಲಾ ಮೂಲಗಳಿಂದ 25 ಕೋಟಿಯಷ್ಟು ಕಲೆಕ್ಷನ್ ಮಾಡಿದೆ. ಗಣೇಶ್ ಮತ್ತು ಪೂಜಾ ಗಾಂಧಿ ನಟನೆಯ ಮುಂಗಾರುಮಳೆ ಸಿನಿಮಾದ ಎಲ್ಲಾ ದಾಖಲೆಗಳನ್ನು ಇದು ಬ್ರೇಕ್ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಈ ಊಹೆ ಸುಳ್ಳಾಯ್ತು. ಈ ವಿಫಲತೆಗೆ ಕಾರಣ ಏನು ಎಂಬುವುದು ಗೊತ್ತಾಯ್ತು. ನಿರೀಕ್ಷಿತ ಯಶಸ್ಸು ಕಾಣದಿದ್ರೂ ನಂತರದ ದಿನಗಳಲ್ಲಿ ಇದೊಂದು 'ಕಲ್ಟ್ ಸಿನಿಮಾ' ಅನ್ನೋದು ಸಾಬೀತಾಗಿದೆ.

35
ಯಾವುದು ಈ ಸಿನಿಮಾ?

ಯೋಗರಾಜ್ ಭಟ್ ನಿರ್ದೇಶನದ, ಪುನೀತ್ ರಾಜ್‌ಕುಮಾರ್ ನಟನೆಯ 'ಪರಮಾತ್ಮ' ಸಿನಿಮಾ ತುಂಬಾ ವಿಭಿನ್ನವಾದ ಕತೆಯೊಂದಿಗೆ ಮತ್ತು ವಿಶೇಷ ಸಂಭಾಷಣೆಯೊಂದಿಗೆ ತರೆ ಮೇಲೆ ಬಂದಿತ್ತು. ಈ ಸಿನಿಮಾದ ಒಂದೊಂದು ಸಂಭಾಷಣೆ, ಪ್ರತಿಯೊಂದು ಪಾತ್ರವೂ ನಿಮ್ಮನ್ನು ನಗಿಸೋದರ ಜೊತೆ ಸಂದೇಶವನ್ನು ನೀಡುತ್ತದೆ. ಕಾಮಿಡಿ ಜೊತೆಯಲ್ಲಿ ಪ್ರೀತಿಯ ಎಳೆಯನ್ನಿಟ್ಟುಕೊಂಡು ಭಾವನಾತ್ಮಕವಾಗಿ ಪರಮಾತ್ಮ ನಿಮ್ಮನ್ನು ಆವರಿಸಿಕೊಳ್ಳುತ್ತಾನೆ.

45
ಒಂಟಿಯಾಗಿ ಕುಳಿತು ಸಿನಿಮಾ ನೋಡಿ

ಈ ಸಿನಿಮಾದ ಪ್ರತಿಯೊಂದು ಅಂಶಗಳು ಅರ್ಥವಾಗಬೇಕಾದ್ರೆ ಒಬ್ಬರೇ ಕುಳಿತು ಪರಮಾತ್ಮನನ್ನು ನೋಡಬೇಕು. ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆಯಲ್ಲಿ ಹರಟೆ ಹೊಡೆಯುತ್ತಾ ಪರಮಾತ್ಮ ಸಿನಿಮಾ ವೀಕ್ಷಿಸಿದ್ರೆ ಒಂದಕ್ಕೊಂದು ಕೊಂಡಿಯಾಗಿರುವ ಪಾತ್ರಗಳ ವಿಶೇಷತೆ ಮಿಸ್ ಆಗುತ್ತದೆ. ಅದೇ ರೀತಿ ತುಂಬಾನೇ ಕಲರ್‌ಫುಲ್ ಆಗಿರುವ ಪರಮಾತ್ಮ ಚಿತ್ರ ಕಣ್ಣುಗಳಿಗೆ ಹಬ್ಬದೂಟ ನೀಡುತ್ತದೆ.

55
ಮ್ಯೂಸಿಕಲ್ ಹಿಟ್ ಸಿನಿಮಾ

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಪರಮಾತ್ಮನಿಗೆ ಆರು ಹಾಡುಗಳು ಹೂವಿನ ಮಾಲೆಗೆ ಮುತ್ತುಗಳನ್ನು ಜೋಡಿಸಿದಂತಾಗಿದೆ. ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಅವರ ಸಂಗೀತದ ಹಾಡುಗಳು ಇಂದಿಗೂ ಎವರ್‌ಗ್ರೀನ್ ಸಾಲಿಗೆ ಸೇರಿಕೊಂಡಿವೆ. ಪ್ರೀತಿ, ಮಧುರತೆ, ಭಾವನೆ ಸೇರಿದಂತೆ ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಗೀತೆಗಳನ್ನು ಪರಮಾತ್ಮ ಸಿನಿಮಾ ಹೊಂದಿದೆ. ಈ ಸಿನಿಮಾವನ್ನು Jiohotstar ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories