ಸ್ಯಾಮ್‌ಸಂಗ್ ಗ್ಯಾಲಕ್ಸಿ A27 5G ಫೋನ್ ಮಾರಾಟ ಆರಂಭ, ಕ್ಯಾಶ್‌ಬ್ಯಾಕ್ ಸೇರಿ ಭರ್ಜರಿ ಆಫರ್ ಘೋಷಣೆ

Published : Jul 07, 2026, 06:12 PM IST

Galaxy ಟ್ರಿಪಲ್ ರಿಯರ್ ಕ್ಯಾಮೆರಾ, 50MP OIS , 4k ವಿಡಿಯೋ ರೆಕಾರ್ಡಿಂಗ್, ಗೂಗಲ್ ಜೆಮಿನಿ ಎಐ ಜೊತೆ ಇಂಟಿಗ್ರೇಶನ್, ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್ ಪರ್ಪಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳ ಗ್ಯಾಲಕ್ಸಿ A27 5G ಮಾರಾಟ ಆರಂಭಗೊಂಡಿದೆ. ಭರ್ಜರಿ ಕ್ಯಾಶ್‌ಬ್ಯಾಕ್ ಸೇರಿ ಇತರ ಆಫರ್ ನೀಡಲಾಗಿದೆ. 

PREV
16
ಸ್ಯಾಮ್‌ಸಂಗ್ A27 5G ಫೋನ್ ಆಫರ್

ಸ್ಯಾಮ್‌ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ ಬಜೆಟ್ ಫ್ರೆಂಡ್ಲಿ ಫೋನ್ ಪೈಕಿ ಗ್ಯಾಲಕ್ಸಿ A27 5G ಮಾರಾಟ ಆರಂಭಗೊಂಡಿದೆ. ಸ್ಯಾಮ್‌ಸಂಗ್ ಅಧಿಕೃತ ಸ್ಟೋರ್, ಸ್ಯಾಮ್‌ಸಂಗ್ ಸೈಟ್, ಇ ಕಾಮರ್ಸ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಯಾಮ್‌ಸಂಗ್ A27 5G ಫೋನ್ ಲಭ್ಯವಿದೆ. ವಿಶೇಷ ಅಂದೆರ ಝೀರೋ ಡೌನ್‌ಪೇಮೆಂಟ್, ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವು ಆಫರ್ ಮೂಲಕ ಲಭ್ಯವಿದೆ.

26
ಫೋನ್ ಬೆಲೆ ಹಾಗೂ ಸ್ಟೋರೇಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ A27 5G ಮೂರು ಆಕರ್ಷಕ ಬಣ್ಣಗಳಾದ ಲೈಟ್ ಗ್ರೀನ್, ಲೈಟ್ ಪಿಂಕ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ 6GB+128GB, 8GB+128GB ಹಾಗೂ 8GB+256GB ಮೂರು ಮೆಮೊರಿ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 28,999 ರೂಪಾಯಿ. ವಿಶೇಷ ಅಂದರೆ ಗ್ರಾಹಕರು 3,000 ರೂಪಾಯಿ ವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯ ಹಾಗೂ ಶೂನ್ಯ ಡೌನ್ ಪೇಮೆಂಟ್ (Zero Down Payment) ಪ್ರಯೋಜನ ಪಡೆಯಬಹುದು.

6GB RAM + 128GB ಬೆಲೆ 28999 ರೂಪಾಯಿ

8GB RAM + 128GB ಬೆಲೆ 31999 ರೂಪಾಯಿ

8GB RAM + 256GB ಬೆಲೆ 37499 ರೂಪಾಯಿ

36
ಸೂಪರ್ AMOLED ಡಿಸ್‌ಪ್ಲೇ

ಗ್ಯಾಲಕ್ಸಿ A27 5G ಸ್ಮಾರ್ಟ್‌ಫೋನ್ 6.7 ಇಂಚಿನ, 120Hz ಸೂಪರ್ AMOLED ಡಿಸ್‌‌ಪ್ಲೇ ಹೊಂದಿದೆ. ಜೊತೆಗೆ ಅತ್ಯುತ್ತಮ ಪ್ರೊಟೆಕ್ಷನ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 4nm Snapdragon 6 Gen 3 ಮೊಬೈಲ್ ಪ್ಲಾಟ್‌ಫಾರ್ಮ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ, UFS 3.1 ಸ್ಟೋರೇಜ್ ಮತ್ತು LPDDR5X RAM ಅನ್ನು ಹೊಂದಿದ್ದು, ನಿರಂತರ ಹಾಗೂ ಸುಗಮ ಮಲ್ಟಿಟಾಸ್ಕಿಂಗ್ ಹಾಗೂ ಗೇಮಿಂಗ್ ಅನುಭವವನ್ನು ನೀಡುತ್ತದೆ

46
ಕ್ಯಾಮೆರಾ ಫೀಚರ್

Galaxy A27 5Gಯ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, 50MP OIS ಮುಖ್ಯ ಕ್ಯಾಮೆರಾ (4K ವೀಡಿಯೊ ರೆಕಾರ್ಡಿಂಗ್ ಬೆಂಬಲದೊಂದಿಗೆ), 5MP ಅಲ್ಟ್ರಾ-ವೈಡ್ ಲೆನ್ಸ್ ಹಾಗೂ 2MP ಮ್ಯಾಕ್ರೋ ಕ್ಯಾಮೆರಾಗಳನ್ನು ಒಳಗೊಂಡಿದೆ. Object Eraser, Edit Suggestions ಹಾಗೂ My Filter ಸೇರಿದಂತೆ AI ಆಧಾರಿತ ವಿಶೇಷತೆಗಳು ಇದರಲ್ಲಿದೆ. ಹೀಗಾಗಿ ಉತ್ತಮ ಗುಣಮಟ್ಟದ ಫೋಟೋ, ವಿಡಿಯೋ ನೀಡಲಿದೆ. 12MP ಮುಂಭಾಗದ ಕ್ಯಾಮೆರಾ ಉನ್ನತ ಗುಣಮಟ್ಟದ ವೀಡಿಯೊ ಕರೆಗಳು ಮತ್ತು ಪೋರ್ಟ್ರೇಟ್ ಛಾಯಾಚಿತ್ರಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

56
ರಿಯಲ್ ಟೈಮ್ ವಾಯ್ಸ್ ಟ್ರಾನ್ಸ್‌ಸ್ಕ್ರಿಪ್ಶನ್

Galaxy A27 5Gಯಲ್ಲಿ Circle to Search with Google, 22 ಭಾಷೆಗಳಲ್ಲಿ ರಿಯಲ್-ಟೈಮ್ ವಾಯ್ಸ್ ಟ್ರಾನ್ಸ್‌ಸ್ಕ್ರಿಪ್ಶನ್ ಹಾಗೂ Google Gemini, Perplexity ಜೊತೆಗೆ ಏಕೀಕರಣ (Integration) ಸೇರಿದಂತೆ ಹಲವು AI ವೈಶಿಷ್ಟ್ಯಗಳು ಲಭ್ಯವಿವೆ. ಇದರೊಂದಿಗೆ, Bixby ಮೂಲಕ ಬಳಕೆದಾರರು ಯಾವುದೇ ಭಾಷೆಯಲ್ಲೇ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಬಹುದು. Live Transcription ವೈಶಿಷ್ಟ್ಯವು ಇಂಗ್ಲಿಷ್, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಕರೆಗಳ ಸಮಯದಲ್ಲೂ ವಾಯ್ಸ್ ಟ್ರಾನ್ಸ್‌ಸ್ಕ್ರಿಪ್ಶನ್ ಸಪೋರ್ಟ್ ಮಾಡಲಿದೆ

66
5000mAh ಬ್ಯಾಟರಿ

Galaxy A27 5Gಗೆ 5000mAh ಬ್ಯಾಟರಿ, ಆರು ವರ್ಷಗಳ Android OS ಹಾಗೂ ಸೆಕ್ಯೂರಿಟಿ ಅಪ್‌ಡೇಟ್‌ಗಳು ಇದರಲ್ಲಿದೆ. Samsung Knox ಭದ್ರತಾ ವ್ಯವಸ್ಥೆಯ ಬೆಂಬಲ ದೊರೆಯುತ್ತದೆ. ಜೊತೆಗೆ, Samsung Wallet ಮೂಲಕ Tap & Pay, UPI ಪಾವತಿಗಳು ಹಾಗೂ ಡಿಜಿಟಲ್ ಗುರುತಿನ ಚೀಟಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಸೌಲಭ್ಯವೂ ಲಭ್ಯವಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories