Drying Wet Charger: ಚಾರ್ಜರ್ ನೀರಿಗೆ ಬಿದ್ದ ನಂತರ ನೀವು ಮಾಡುವಂತಹ ಕೆಲವೊಂದು ಆತುರದ ಕೆಲಸಗಳು ಬಳಿಕ ನಿಮಗೆ ದುಬಾರಿಯಾಗಬಹುದು. ಇದು ನಿಮ್ಮ ಫೋನ್‌ಗೆ ಹಾನಿಯಾಗಬಹುದು ಮತ್ತು ಚಾರ್ಜರ್‌ಗೆ ಹಾನಿಯಾಗಬಹುದು. ಆದ್ದರಿಂದ, ನೀವು ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಗ್ಯಾಜೆಟ್‌ಗಳ ಚಾರ್ಜರ್‌ಗಳು ನಮ್ಮ ದೈನಂದಿನ ಜೀವನಕ್ಕೆ ಅತ್ಯಗತ್ಯವಾಗಿವೆ; ಆದರೆ, ಮಳೆ, ಆಕಸ್ಮಿಕ ಸೋರಿಕೆ ಅಥವಾ ಚಾರ್ಜರ್ ನೀರಿಗೆ ಬೀಳುವಂತಹ ಘಟನೆಗಳು ಎಷ್ಟೇ ಜಾಗೃತೆ ವಹಿಸಿದರೂ ಸಂಭವಿಸಬಹುದು. ಅಂತಹ ಸಂದರ್ಭಗಳಲ್ಲಿ, ಆತುರದ ಅಥವಾ ತಪ್ಪು ನಿರ್ಧಾರವು ನಿಮ್ಮ ಚಾರ್ಜರ್ ಅನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ ಮತ್ತು ವಿದ್ಯುತ್ ಶಾಕ್, ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿಯಂತಹ ಗಂಭೀರ ಅಪಾಯಗಳಿಗೆ ಕಾರಣವಾಗಬಹುದು. ನಿಮ್ಮ ಚಾರ್ಜರ್ ಒದ್ದೆಯಾದರೆ ನೀವು ಈ ಕೆಲಸಗಳನ್ನು ತಪ್ಪಿಯೂ ಮಾಡಬಾರದು.
26
ತಕ್ಷಣ ಪರಿಶೀಲಿಸಬೇಡಿ
ಅನೇಕ ಜನರು ಚಾರ್ಜರ್ ನೀರಲ್ಲಿ ಬಿದ್ದ ತಕ್ಷಣ ಚಾರ್ಜರ್ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೋಡಲು ತಕ್ಷಣವೇ ಸಾಕೆಟ್‌ಗೆ ಪ್ಲಗ್ ಮಾಡುತ್ತಾರೆ. ಹಾಗೆ ಮಾಡುವುದು ದೊಡ್ಡ ತಪ್ಪು. ಚಾರ್ಜರ್ ಒಳಗೆ ತೇವಾಂಶವಿದ್ದರೆ ಶಾರ್ಟ್ ಸರ್ಕ್ಯೂಟ್ ಆಗಬಹುದು.
36
ನಿಮ್ಮ ಫೋನ್ ಅನ್ನು ಒದ್ದೆಯಾದ ಚಾರ್ಜರ್‌ನಿಂದ ಚಾರ್ಜ್ ಮಾಡಬೇಡಿ
ಚಾರ್ಜರ್ ಒದ್ದೆಯಾಗಿದ್ದರೆ, ಅದರೊಂದಿಗೆ ನಿಮ್ಮ ಫೋನ್ ಚಾರ್ಜ್ ಮಾಡಲು ಪ್ರಯತ್ನಿಸಬೇಡಿ. ಹಾಗೆ ಮಾಡುವುದರಿಂದ ಚಾರ್ಜರ್ ಮಾತ್ರವಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನ ಚಾರ್ಜಿಂಗ್ ಪೋರ್ಟ್ ಮತ್ತು ಬ್ಯಾಟರಿಯೂ ಹಾನಿಗೊಳಗಾಗಬಹುದು, ಇದರಿಂದ ನೀವು ರಿಪೇರಿಗೆ ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು.
ಚಾರ್ಜರನ್ನು ಹಲವಾರು ಗಂಟೆಗಳ ಕಾಲ ನೇರ, ತೀವ್ರವಾದ ಸೂರ್ಯನ ಬೆಳಕಿನಲ್ಲಿ ಇಡುವುದು ಸೂಕ್ತವಲ್ಲ. ಅತಿಯಾದ ಶಾಖವು ಅದರ ವೈರಿಂಗ್, ಇನ್ಸುಲೇಶನ್ ಮತ್ತು ಎಲೆಕ್ಟ್ರಾನಿಕ್ ಕಾಂಪನ್ಸೇಟ್ ಗಳಿಗೆ ಹಾನಿ ಮಾಡುತ್ತದೆ. ಸ್ವಚ್ಛ, ಶುಷ್ಕ ಮತ್ತು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಅವುಗಳನ್ನು ಒಣಗಲು ಬಿಡಿ.
56
ಹೇರ್ ಡ್ರೈಯರ್ ನ ಅತಿಯಾದ ಬಳಕೆ
ಅನೇಕ ಜನರು ಚಾರ್ಜರ್ ಬೇಗನೆ ಒಣಗಿಸಲು ಹೇರ್ ಡ್ರೈಯರ್ ನಿಂದ ಬರುವ ಬಿಸಿ ಗಾಳಿಯನ್ನು ಬಳಸುತ್ತಾರೆ. ಅತಿಯಾದ ಶಾಖವು ಚಾರ್ಜರ್ ಒಳಗಿನ ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ಘಟಕಗಳನ್ನು ಹಾನಿಗೊಳಿಸುತ್ತದೆ. ಕೋಣೆಯ ಉಷ್ಣಾಂಶದಲ್ಲಿ ಗಾಳಿಯಲ್ಲಿ ಒಣಗಲು ಬಿಡುವುದು ಉತ್ತಮ.
66
ಸ್ಪಾರ್ಕಿಂಗ್ ಇದ್ದರೆ ಏನು ಮಾಡಬೇಕು?
ಒಣಗಿದ ನಂತರವೂ, ಚಾರ್ಜರ್ ಸ್ಪಾರ್ಕ್ ಆಗುತ್ತಿದ್ದರೆ ಅಥವಾ ಅತಿಯಾಗಿ ಬಿಸಿಯಾದರೆ, ಅದನ್ನು ಬಳಸಬೇಡಿ. ಅಂತಹ ಚಾರ್ಜರ್ ಬಳಸುವುದು ಅಪಾಯಕಾರಿ. ಅಗತ್ಯವಿದ್ದರೆ ಹೊಸ ಚಾರ್ಜರ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.