ಅಬ್ಬಬ್ಬಾ ಎಂಥಾ ಬಿಸಿಲು... ಜಗತ್ತಿನಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು ಎಲ್ಲಿ ಗೊತ್ತಾ?

Published : Apr 25, 2026, 08:33 AM IST

ಜಗತ್ತಿನಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾದ ಟಾಪ್ 10 ಸ್ಥಳಗಳ ಪಟ್ಟಿಯಲ್ಲಿ ಡೆತ್ ವ್ಯಾಲಿ ಮೊದಲ ಸ್ಥಾನದಲ್ಲಿದೆ. ಡೆತ್ ವ್ಯಾಲಿಯಿಂದ ಹಿಡಿದು ಕುವೈತ್‌ವರೆಗೆ  ಹೆಚ್ಚು ತಾಪಮಾನ ಹೊಂದಿರುವ ಪ್ರದೇಶಗಳನ್ನು ನೋಡಿ.

PREV
15
1. ಫರ್ನೇಸ್ ಕ್ರೀಕ್, ಡೆತ್ ವ್ಯಾಲಿ (ಅಮೆರಿಕ)

1. ಫರ್ನೇಸ್ ಕ್ರೀಕ್, ಡೆತ್ ವ್ಯಾಲಿ (ಅಮೆರಿಕ): ಜಗತ್ತಿನ ಅತಿ ಹೆಚ್ಚು ಬಿಸಿಲಿರುವ ಸ್ಥಳವೆಂಬ ಖ್ಯಾತಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಫರ್ನೇಸ್ ಕ್ರೀಕ್‌ಗೆ (ಡೆತ್ ವ್ಯಾಲಿ) ಸಲ್ಲುತ್ತದೆ. ಇಲ್ಲಿ 1913ರ ಜುಲೈ 10ರಂದು ಬರೋಬ್ಬರಿ 56.7°C (134°F) ಉಷ್ಣಾಂಶ ದಾಖಲಾಗಿತ್ತು. ಇದುವರೆಗೂ ಭೂಮಿಯ ಮೇಲೆ ಅಧಿಕೃತವಾಗಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶ ಇದಾಗಿದೆ.

2. ಕೆಬಿಲಿ (ಟ್ಯುನೀಷಿಯಾ)

ಅತಿ ಹೆಚ್ಚು ಉಷ್ಣಾಂಶ ದಾಖಲಾದ ಪಟ್ಟಿಯಲ್ಲಿ ಟ್ಯುನೀಷಿಯಾದ ಕೆಬಿಲಿ ಎರಡನೇ ಸ್ಥಾನದಲ್ಲಿದೆ. 1931ರ ಜುಲೈ 7ರಂದು ಇಲ್ಲಿ 55°C (131°F) ಉಷ್ಣಾಂಶ ದಾಖಲಾಗಿತ್ತು. ಆಫ್ರಿಕಾ ಖಂಡದಲ್ಲೇ ಇದು ಅತಿ ಹೆಚ್ಚಿನ ಉಷ್ಣಾಂಶ ಎಂದು ಹೇಳಬೇಕು.

25
3. ಅಹ್ವಾಜ್ (ಇರಾನ್)

3. ಅಹ್ವಾಜ್ (ಇರಾನ್): ಮೂರನೇ ಸ್ಥಾನದಲ್ಲಿ ಇರಾನ್‌ನ ಅಹ್ವಾಜ್ ನಗರವಿದೆ. 2017ರ ಜೂನ್ 29ರಂದು ಇಲ್ಲಿನ ಉಷ್ಣಾಂಶ 54°C (129.2°F) ತಲುಪಿತ್ತು. ಆಧುನಿಕ ಕಾಲದಲ್ಲಿ ದಾಖಲಾದ ಅತಿ ಹೆಚ್ಚು ಬಿಸಿಲಿನ ದಿನಗಳಲ್ಲಿ ಇದೂ ಒಂದಾಗಿದೆ.

4. ತಿರತ್ ಸ್ವಿ (ಇಸ್ರೇಲ್)

ಇಸ್ರೇಲ್‌ನ ತಿರತ್ ಸ್ವಿ ಪ್ರದೇಶವು ನಾಲ್ಕನೇ ಸ್ಥಾನದಲ್ಲಿದೆ. 1942ರ ಜೂನ್ 21ರಂದು ಇಲ್ಲಿ 54°C (129°F) ಉಷ್ಣಾಂಶ ದಾಖಲಾಗಿತ್ತು. ಏಷ್ಯಾ ಖಂಡದಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣಾಂಶಗಳಲ್ಲಿ ಇದೂ ಒಂದು.

35
5. ಮಿತ್ರಿಬಾ (ಕುವೈತ್)

5. ಮಿತ್ರಿಬಾ (ಕುವೈತ್): ಕುವೈತ್‌ನ ಮಿತ್ರಿಬಾ ಐದನೇ ಸ್ಥಾನದಲ್ಲಿದೆ. 2016ರ ಜುಲೈ 21ರಂದು ಇಲ್ಲಿನ ಉಷ್ಣಾಂಶ 53.9°C (129°F) ಎಂದು ದಾಖಲಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಸಿಲು ಎಷ್ಟು ತೀವ್ರವಾಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

6. ಬಸ್ರಾ (ಇರಾಕ್)

ಇರಾಕ್‌ನ ಬಸ್ರಾ ಆರನೇ ಸ್ಥಾನದಲ್ಲಿದೆ. 2016ರ ಜುಲೈ 22ರಂದು ಇಲ್ಲಿಯೂ ಕುವೈತ್‌ನಂತೆಯೇ 53.9°C (129°F) ಉಷ್ಣಾಂಶ ದಾಖಲಾಗಿತ್ತು. ಕುವೈತ್ ಮತ್ತು ಇರಾಕ್ ಪ್ರದೇಶಗಳು ಸತತ ದಿನಗಳಲ್ಲಿ ಈ ಗರಿಷ್ಠ ಉಷ್ಣಾಂಶವನ್ನು ಕಂಡಿದ್ದವು.

45
7. ತುರ್ಬತ್ (ಪಾಕಿಸ್ತಾನ):

7. ತುರ್ಬತ್ (ಪಾಕಿಸ್ತಾನ): ನಮ್ಮ ನೆರೆಯ ದೇಶವಾದ ಪಾಕಿಸ್ತಾನದ ತುರ್ಬತ್ ನಗರವು ಏಳನೇ ಸ್ಥಾನದಲ್ಲಿದೆ. 2017ರ ಮೇ 28ರಂದು ಇಲ್ಲಿ 53.7°C (128.7°F) ಉಷ್ಣಾಂಶ ದಾಖಲಾಗಿತ್ತು. ಆ ಬೇಸಿಗೆಯಲ್ಲಿ ಪಾಕಿಸ್ತಾನದ ಜನರು ತೀವ್ರ ತೊಂದರೆ ಅನುಭವಿಸಿದ್ದರು.

8. ಅಲ್ ಜಝೀರಾ ಬಾರ್ಡರ್ ಗೇಟ್ (ಯುಎಇ)

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ ಜಝೀರಾ ಬಾರ್ಡರ್ ಗೇಟ್‌ನಲ್ಲಿ 2002ರ ಜುಲೈನಲ್ಲಿ 52.1°C (125.8°F) ಉಷ್ಣಾಂಶ ದಾಖಲಾಗಿ, ಇದು ಎಂಟನೇ ಸ್ಥಾನದಲ್ಲಿದೆ.

55
9. ಮೆಕ್ಸಿಕಾಲಿ (ಮೆಕ್ಸಿಕೊ):

9. ಮೆಕ್ಸಿಕಾಲಿ (ಮೆಕ್ಸಿಕೊ): ಮೆಕ್ಸಿಕೊದ ಮೆಕ್ಸಿಕಾಲಿ ನಗರವು ಒಂಬತ್ತನೇ ಸ್ಥಾನದಲ್ಲಿದೆ. 1995ರ ಜುಲೈ 28ರಂದು ಇಲ್ಲಿ 52°C (125.6°F) ಉಷ್ಣಾಂಶ ದಾಖಲಾಗಿತ್ತು. ಉತ್ತರ ಅಮೆರಿಕದಲ್ಲಿ ಡೆತ್ ವ್ಯಾಲಿ ನಂತರ ಅತಿ ಹೆಚ್ಚು ಬಿಸಿಲು ದಾಖಲಾದ ಪ್ರದೇಶ ಇದಾಗಿದೆ.

10. ಜಿದ್ದಾ (ಸೌದಿ ಅರೇಬಿಯಾ)

ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಸೌದಿ ಅರೇಬಿಯಾದ ಜಿದ್ದಾ ನಗರವಿದೆ. 2010ರ ಜೂನ್ 22ರಂದು ಇಲ್ಲಿ 52°C (125.6°F) ಉಷ್ಣಾಂಶ ದಾಖಲಾಗಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories