ಇಫ್ರಿಟ್ (Ifrita kowaldi): ಆಪ್ರಿಕಾ ಖಂಡದಲ್ಲಿ ಕಂಡುಬರುವ ಪಪುವಾ ನ್ಯೂ ಗಿನಿಯಾ ದೇಶದ ಈ ಇಫ್ರಿಟ್ ಪಕ್ಷಿ ವಿಷಪೂರಿತ ಕೀಟಗಳನ್ನು ತಿನ್ನುತ್ತದೆ. ಆದ್ದರಿಂದ ಅದರ ಚರ್ಮ ಮತ್ತು ಗರಿಗಳು ವಿಷಪೂರಿತವಾಗುತ್ತವೆ. ಒಂದು ವೇಳೆ ಮಕ್ಕಳು ಅಥವಾ ಯಾರೇ ವ್ಯಕ್ತಿಗಳು ಇದ ರೆಕ್ಕೆಗಳನ್ನು ಬಾಯಲ್ಲಿಟ್ಟುಕೊಂಡರೆ ಪ್ರಾಣಕ್ಕೆ ಅಪಾಯ ಎಂದು ಹೇಳಲಾಗುತ್ತದೆ.
ಕ್ವೈಲ್: ಈ ಪಕ್ಷಿಗಳು ತಮ್ಮ ಆಹಾರದಲ್ಲಿ ಮನುಷ್ಯ ಹಾಗೂ ಇತರೆ ಪ್ರಾಣಿಗಳಿಗೆ ಅಪಾಯಕಾರಿ ಹಾಗೂ ಇಷಕಾರಿ ಆಗುವಂತಹ ಸಸ್ಯಗಳನ್ನು ಸಹ ತಿನ್ನುತ್ತವೆ. ಆದ್ದರಿಂದ, ಇವುಗಳ ದೇಹ ವಿಷಪೂರಿತವಾಗಿರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ರೂಫಸ್ ಷ್ರ್ರೈಕ್-ಥ್ರಷ್: ಉತ್ತರ ಆಸ್ಟ್ರೇಲಿಯಾ ಮತ್ತು ಪಪುವಾ ನ್ಯೂ ಗಿನಿಯಾದಲ್ಲಿ ಕಂಡುಬರುವ ಈ ಪಕ್ಷಿಯ ಗರಿಗಳು ವಿಷಪೂರಿತವಾಗಿರುತ್ತವೆ. ಇದು ನೋಡಲು ಕಂಬಳು ಹುಳುವಿನ ಕೂದಲಿನ ರೀತಿಯ ರೆಕ್ಕೆಯನ್ನು ಹೊಂದಿದೆ. ಇದರಿಂದ ಮನುಷ್ಯರ ಚರ್ಮಕ್ಕೂ ಹಾನಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಪಿಟೋಹುಯ್ (Pitohui spp): ಈ ಪಕ್ಷಿಗಳು ಪಪುವಾ ನ್ಯೂ ಗಿನಿಯಾದಲ್ಲಿ ಕಂಡುಬರುತ್ತವೆ. ಈ ಪಕ್ಷಿಯ ಗರಿಗಳು, ವಿಷಪೂರಿತ ಜೀರುಂಡೆಗಳಿಂದ ಸೇವಿಸಲ್ಪಟ್ಟ ಬಾಟ್ರಾಕೋಟಾಕ್ಸಿನ್‌ಗಳಿಂದ ಮಾಡಲ್ಪಟ್ಟಿವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಹಕ್ಕಿಗಳು ವಿಷಪೂರಿತವಾಗಿರುತ್ತವೆ.
ಟಾಕ್ಸಿಕ್ ಟೌಕಾನ್‌ಗಳು: ಎಲ್ಲ ಟೌಕಾನ್‌ಗಳು ವಿಷಪೂರಿತವಲ್ಲ. ಆದರೆ, ಕೆಲವು ಟೌಕಾನ್‌ಗಳು ವಿಷಪೂರಿತ ಪರಿಣಾಮವನ್ನು ಬೀರುತ್ತವೆ. ಮಧ್ಯ-ದಕ್ಷಿಣ ಅಮೆರಿಕದ ಟೌಕಾನ್‌ಗಳು ಅತ್ಯಂತ ವಿಷಪೂರಿತ ಗರಿಗಳನ್ನು ಹೊಂದಿರುತ್ತವೆ. ಇವುಗಳನ್ನು ಕಾಡಿನ ಜನರು ಬಾಣಗಳ ಮುಂಭಾಗದ ಚೂಪಾದ ಬಾಗದಲ್ಲಿ ಬಳಸುತ್ತಾರೆ.
ಸೂಪರ್ಬ್ ಲೈರ್‌ಬರ್ಡ್: ಈ ಪಕ್ಷಿ ನೋಡುವುದಕ್ಕೆ ಸ್ವಲ್ಪ ಭಯವನ್ನುಂಟು ಮಾಡುತ್ತದೆ. ಇದು ಅತ್ಯಂತ ಮೃದು ಸ್ವಭಾವದ ಪಕ್ಷಿಯಾಗಿದೆ. ಆದರೆ, ಈ ಪಕ್ಷಿ ಹೆಚ್ಚು ವಿಷಪೂರಿತವಾಗಿಲ್ಲದಿದ್ದರೂ, ಮನುಷ್ಯರ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ಆಸ್ಟ್ರೇಲಿಯನ್ ಪಕ್ಷಿಯಾಗಿದ್ದು, ಇದನ್ನು ಹಿಡಿದುಕೊಂಡರ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತದೆ.