ಎಲ್ಲೆಲ್ಲೂ ನೋಡಿ... ಓಡಾಡ್ತಿರೋ ಬೈಕ್‌ಗಳು, ಸೈಕಲ್‌ಗಳ ಹಿಂದೆ ಬೀದಿ ನಾಯಿಗಳು ಬೊಗಳ್ತಾ ಓಡ್ತಿರ್ತವೆ. ಕೆಲವೊಮ್ಮೆ ಅವು ವೇಗವಾಗಿ ಓಡಿದ್ರೆ... ಇನ್ನು ಕೆಲವೊಮ್ಮೆ ನಿಧಾನವಾಗಿ ಓಡ್ತವೆ. ಅವುಗಳಿಂದ ಅಪಾಯ ಆಗೋ ಸಾಧ್ಯತೆಗಳೂ ಇರ್ತವೆ. ನಿಜವಾಗ್ಲೂ ಯಾಕೆ ಹೀಗೆ ಓಡ್ತವೆ ಗೊತ್ತಾ?
ರಸ್ತೆಯಲ್ಲಿ ಸುಮ್ನೆ ಕೂತಿರೋ ನಾಯಿಗಳು ಒಮ್ಮೆಲೆ ಎದ್ದು ಬೈಕ್‌ಗಳು, ಕಾರುಗಳು, ಸೈಕಲ್‌ಗಳ ಹಿಂದೆ ಓಡೋದು ನೋಡಿದ್ದೀವಿ. ಓಡೋದೇ ಅಲ್ಲದೆ ಜೋರಾಗಿ ಬೊಗಳ್ತಾ ಗಲಾಟೆ ಮಾಡ್ತವೆ. ಇಂಥ ದೃಶ್ಯಗಳನ್ನು ನೀವು ಈಗಾಗಲೇ ನೋಡಿರ್ತೀರಿ. ನಿಜವಾಗ್ಲೂ ನಾಯಿಗಳು ಬೈಕ್‌ಗಳು, ಕಾರುಗಳ ಹಿಂದೆ ಯಾಕೆ ಓಡ್ತವೆ ಅಂತ ನಿಮಗೆ ಅನಿಸಿರಬಹುದು.
25
ವಾಸನೆ ಹೋಲಿಕೆ
ನಾಯಿಗಳಿಗೆ ಮನುಷ್ಯರಿಗಿಂತ ವಾಸನೆ ಗ್ರಹಿಸುವ ಶಕ್ತಿ ತುಂಬಾ ಜಾಸ್ತಿ. ಅವು ದೂರದಿಂದಲೇ ವಾಸನೆ ಪತ್ತೆ ಹಚ್ಚಬಲ್ಲವು. ನಿಮ್ಮ ಕಾರುಗಳು ಅಥವಾ ಬೈಕ್‌ಗಳು, ಸೈಕಲ್‌ಗಳು ಬೇರೆ ಪ್ರದೇಶದಿಂದ ನಾಯಿಗಳು ಇರುವ ಪ್ರದೇಶಕ್ಕೆ ಬರುತ್ತವೆ. ಆಗ ನಾಯಿಗಳಿಗೆ ಆ ಕಾರು ಬೇರೆ ಪ್ರದೇಶದಿಂದ ಬಂದಿದೆ ಅನ್ನೋದು ಟೈರ್‌ಗಳಿಂದ ಬರುವ ವಾಸನೆಯಿಂದ ಗೊತ್ತಾಗುತ್ತೆ. ಅಲ್ಲಿ ವಾಸಿಸುವ ನಾಯಿಗಳಿಗೆ ಆ ಪ್ರದೇಶದ ವಾಸನೆ ಅಭ್ಯಾಸ ಆಗಿರುತ್ತೆ.
ಯಾವಾಗ ಬೇರೆ ಪ್ರದೇಶದಿಂದ ಕಾರು ಅಥವಾ ಬೈಕ್ ಬರುತ್ತೋ, ಅದರ ವಾಸನೆ ಬೇರೆ ಇರುತ್ತೆ. ಆ ವಾಸನೆಯನ್ನು ನಾಯಿಗಳು ಗ್ರಹಿಸಿ ಎಚ್ಚರಿಕೆಯಂತೆ ಬೊಗಳಲು ಪ್ರಾರಂಭಿಸುತ್ತವೆ. ನಿಜವಾಗ್ಲೂ ನಾಯಿಗಳು ಇರುವ ಪ್ರದೇಶಗಳಲ್ಲಿ ಕಾವಲು ಕಾಯುತ್ತವೆ. ತಮ್ಮ ಗಡಿಯನ್ನು ತಾವೇ ನಿರ್ಧರಿಸಿಕೊಳ್ಳುತ್ತವೆ. ಆ ಗಡಿ ಒಳಗೆ ಯಾವುದೇ ಹೊಸ ಬೈಕ್‌ಗಳು, ಕಾರುಗಳು ಬಂದರೆ ತಕ್ಷಣ ಬೊಗಳಲು ಪ್ರಾರಂಭಿಸುತ್ತವೆ.
35
ಟೈರ್‌ಗಳ ಮೇಲೆ ಮೂತ್ರ ವಿಸರ್ಜನೆ
ಎಲ್ಲೆಲ್ಲೂ ವಾಹನಗಳ ಟೈರ್‌ಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡೋದು ನೋಡಿರ್ತೀರಿ. ಇದು ಅವುಗಳಿಗೆ ಇರೋ ಅಭ್ಯಾಸ ಅಂತ ಅಂದುಕೊಳ್ತೀರಿ. ನಿಜವಾಗ್ಲೂ ಅವು ತಮ್ಮ ಅಸ್ತಿತ್ವದ ಗುರುತಾಗಿ ಟೈರ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡ್ತವೆ. ಆ ವಾಸನೆಯನ್ನು ಅವು ಪತ್ತೆ ಹಚ್ಚುತ್ತವೆ. ಆ ಕಾರು ತಮ್ಮ ಪ್ರದೇಶದಲ್ಲೇ ಓಡಾಡುವಾಗ ಅವು ಸ್ಥಳೀಯ ಕಾರುಗಳು ಅಂತ ಪತ್ತೆ ಹಚ್ಚಿ ಬೊಗಳೋದಿಲ್ಲ. ಅದೇ ಹೊರಗಿನಿಂದ ಕಾರು ಬಂದ್ರೆ ತಕ್ಷಣ ಬೊಗಳಲು ಪ್ರಾರಂಭಿಸುತ್ತವೆ.
45
ಅಪಘಾತಗಳು ಸಂಭವಿಸಿದಾಗ
ಕೆಲವೊಮ್ಮೆ ಇದು ಕೇವಲ ವಾಸನೆಗೆ ಸಂಬಂಧಿಸಿದ ವಿಷಯವಲ್ಲದಿರಬಹುದು. ನಾಯಿಗಳು ತುಂಬಾ ಸೂಕ್ಷ್ಮ ಮನಸ್ಸಿನವು. ಒಂದು ವಾಹನದಿಂದ ತಮ್ಮ ಸ್ನೇಹಿತ ರಸ್ತೆ ಅಪಘಾತದಲ್ಲಿ ಗಾಯಗೊಂಡರೂ, ಮರಣ ಹೊಂದಿದರೂ ಅವು ಆ ವಾಹನವನ್ನು ಖಂಡಿತವಾಗಿಯೂ ನೆನಪಿಟ್ಟುಕೊಳ್ಳುತ್ತವೆ. ಅಂತಹ ವಾಹನವನ್ನು ಮತ್ತೊಮ್ಮೆ ನೋಡಿದಾಗ ತಕ್ಷಣ ಪ್ರತಿಕ್ರಿಯಿಸುತ್ತವೆ. ಆ ಕಾರುಗಳ ಹಿಂದೆ ಓಡುವುದು, ಕೋಪದಿಂದ ಬರುವುದು ಮುಂತಾದವುಗಳನ್ನು ಮಾಡುತ್ತವೆ.
ನಾಯಿಗಳು ಸಾಮಾನ್ಯವಾಗಿ ಚಲಿಸುವ ವಾಹನಗಳ ಮೇಲೆ ಗಮನ ಹರಿಸುತ್ತವೆ. ಬೈಕ್ ಅಥವಾ ಕಾರಿನ ಶಬ್ದ ಬಂದರೆ ತಕ್ಷಣ ಎಚ್ಚರಗೊಳ್ಳುತ್ತವೆ.
55
ನಾಯಿ ಬೆನ್ನಟ್ಟಿದರೆ ಹೀಗೆ ಮಾಡಿ
ಕಾರು ಹಿಂದೆ ನಾಯಿಗಳು ಬಿದ್ದರೂ ದೊಡ್ಡ ಅಪಾಯವಿಲ್ಲ. ಆದರೆ ಬೈಕ್‌ಗಳು, ಸೈಕಲ್ ಹಿಂದೆ ಬಿದ್ದರೆ ಅಪಾಯ ಆಗುವ ಸಾಧ್ಯತೆ ಇದೆ. ಸಮತೋಲನ ಕಳೆದುಕೊಳ್ಳಬಹುದು. ಹಾಗಾಗಿ ನಾಯಿಗಳು ನಿಮ್ಮ ಹಿಂದೆ ಬೀಳುತ್ತಿವೆ ಅಂತ ಅನಿಸಿದರೆ ವೇಗ ಹೆಚ್ಚಿಸಬೇಡಿ. ನಿಧಾನವಾಗಿ ನಿಮ್ಮ ವಾಹನ ನಿಲ್ಲಿಸಿ, ನಾಯಿಗಳ ಕಡೆ ನೋಡದೆ ಕೆಲವು ಸೆಕೆಂಡುಗಳ ಕಾಲ ಹಾಗೆ ಇರಿ. ನೀವು ನಾಯಿಗಳನ್ನು ರೇಗಿಸಿದರೆ ಮಾತ್ರ ಅವು ನಿಮ್ಮ ಮೇಲೆ ದಾಳಿ ಮಾಡುತ್ತವೆ. ನೀವು ಕದಲದೆ ಸುಮ್ಮನೆ ಇದ್ದರೆ ಅವು ನಿಮ್ಮನ್ನು ಬಿಟ್ಟುಬಿಡುತ್ತವೆ.