ಕಪಿಲ್ ದೇವ್ ನಿಂದ ಆರನ್ ಫಿಂಚ್ ವರೆಗೆ ಹಲವಾರು ಕ್ರಿಕೆಟಿಗರು ಮೈದಾನದಲ್ಲಿ ಚೂಯಿಂಗ್ ಗಮ್ ಅನ್ನು ಅಗಿಯುವುದನ್ನು ಟಿವಿಗಳಲ್ಲಿ ನೋಡಿರುತ್ತೀರಿ. ನಮ್ಮಲ್ಲಿ ಹಲವರು ಕೂಡ ಚೂಯಿಂಗ್ ಗಮ್ ಅನ್ನು ಅಗಿಯುತ್ತಿರುತ್ತೇವೆ.
ನಾವಂತೂ ಟೈಮ್ ಪಾಸ್ ಗಾಗಿ ಅದನ್ನು ಅಗಿಯುತ್ತೇವೆ. ಆದರೆ ಕ್ರಿಕೆಟಿಗರು ಅದಕ್ಕಾಗಿಯೇ ಅಗಿಯುತ್ತಾರೆಯೇ? ಬೇರೆ ಯಾವುದಾದರೂ ಕಾರಣಕ್ಕಾಗಿ ಅಗಿಯುತ್ತಾರೆಯೇ? ಈಗ ತಿಳಿದುಕೊಳ್ಳೋಣ ಬನ್ನಿ.
ರಿಫ್ರೆಶ್
ಕ್ರಿಕೆಟಿಗರು ರಿಫ್ರೆಶ್ ಆಗಿದ್ದರೆ ಮಾತ್ರ ಅವರು ಕ್ರಿಕೆಟ್ ಅನ್ನು ಚೆನ್ನಾಗಿ ಆಡಲು ಸಾಧ್ಯ. ನಿಮಗೆ ತಿಳಿದಿದೆಯೇ? ಚೂಯಿಂಗ್ ಗಮ್ ನಲ್ಲಿರುವ ಗ್ಲೂಕೋಸ್ ಕ್ರೀಡಾಪಟುಗಳನ್ನು ರಿಫ್ರೆಶ್ ಮಾಡುತ್ತದೆ. ಇದರಿಂದ ಅವರು ತಮ್ಮ ಶಕ್ತಿಯನ್ನು ಕಳೆದುಕೊಳ್ಳದೆ ಮೈದಾನದಲ್ಲಿರಲು ಸಾಧ್ಯವಾಗುತ್ತದೆ.
ಆರ್ದ್ರೀಕರಣ
ಚೂಯಿಂಗ್ ಗಮ್ ಅನ್ನು ಅಗಿಯುವುದರಿಂದ ಬಾಯಿಯಿಂದ ಲಾಲಾರಸ ಉತ್ಪತ್ತಿಯಾಗುತ್ತಲೇ ಇರುತ್ತದೆ. ಇದರಿಂದ ಆಟಗಾರರಿಗೆ ಬಾಯಾರಿಕೆಯಾಗುತ್ತದೆ. ಇದರಿಂದ ಅವರು ನೀರು ಕುಡಿಯುತ್ತಾರೆ. ನೀರು ಕುಡಿಯದಿದ್ದರೆ ಅವರ ದೇಹವು ನಿರ್ಜಲೀಕರಣಗೊಳ್ಳುವ ಸಾಧ್ಯತೆ ಇರುತ್ತದೆ.
ವಿಶ್ರಾಂತಿ
ಮೈದಾನದಲ್ಲಿ ಕ್ಲಿಷ್ಟಕರವಾದ ವಾತಾವರಣದಲ್ಲಿ ವಿಶ್ರಾಂತಿ ಪಡೆಯಲು ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕೂಡ ಚೂಯಿಂಗ್ ಗಮ್ ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಏಕಾಗ್ರತೆ
ಸ್ಟೇಡಿಯಂನಲ್ಲಿ ಅಭಿಮಾನಿಗಳ ಕೂಗುಗಳ ನಡುವೆ ಫೀಲ್ಡರ್ ಗಳು ಪಂದ್ಯದ ಮೇಲೆ ಗಮನ ಕೇಂದ್ರೀಕರಿಸುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚೂಯಿಂಗ್ ಗಮ್ ಮನಸ್ಸನ್ನು ಹಗುರಗೊಳಿಸಿ ಗಮನವನ್ನು ಬೇರೆಡೆಗೆ ಹೋಗದಂತೆ ತಡೆಯುತ್ತದೆ. ಅಲ್ಲದೆ ಚೂಯಿಂಗ್ ಗಮ್ ಉಸಿರಾಟ ಮತ್ತು ಆಮ್ಲಜನಕ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ಆಟಗಾರರು ಮೈದಾನದಲ್ಲಿ ಆಯಾಸಗೊಳ್ಳದೆ ಆಡುತ್ತಾರೆ.