ಉಡುಗೊರೆಯಾಗಿ ಸಿಕ್ಕ ವಸ್ತುವಿಗೂ ಚೆಕ್‌ ಮೂಲಕ ಹಣ ಕಳುಹಿಸಿ ಕೊಟ್ಟಿದ್ದರು ಕಲಾಂ!

First Published Aug 16, 2023, 11:30 AM IST

ಎಪಿಜೆ ಅಬ್ದುಲ್ ಕಲಾಂ ಎಷ್ಟು ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿಯೇ ಅವರು ಜಾತಿ-ಧರ್ಮ, ಪ್ರದೇಶ, ರಾಜ್ಯಗಳ ಹಂಗಿಲ್ಲದ ಎಲ್ಲರ ನೆಚ್ಚಿನ ಮಾಜಿ ರಾಷ್ಟ್ರಪತಿ ಎಂದು ಕರೆಸಿಕೊಳ್ಳುತ್ತಾರೆ.. ಅವರ ಸರಳ ಜೀವನ ಎಂಬುದನ್ನು ಎಂ ವಿ ರಾವ್ ವಿವರಿಸಿದ್ದಾರೆ.

ಭಾರತದ ರಾಷ್ಟ್ರಪತಿಯಾಗಿ ಜನಮನ ಗೆದ್ದಿದ್ದ ಅಬ್ದುಲ್ ಕಲಾಂ ಅವರನ್ನು ಮಿಸೈಲ್‌ ಮ್ಯಾನ್‌ ಎಂದು ಸಹ ಕರೆಯುತ್ತಾರೆ. ಜುಲೈ 27, 2023ರಂದು, ಶಿಕ್ಷಣತಜ್ಞ ಮತ್ತು ಅಂತರಿಕ್ಷಯಾನ ವಿಜ್ಞಾನಿ ಅವರು ನಿಧನರಾದ ಎಂಟನೇ ವಾರ್ಷಿಕೋತ್ಸವದಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸಿತು.

ಎಂ ವಿ ರಾವ್ ಅವರು ಈ ವಾರದ ಆರಂಭದಲ್ಲಿ ಕಲಾಂ ತಮ್ಮ ದೈನಂದಿನ ಜೀವನದಲ್ಲಿ ಹೇಗೆ ನೀತಿಯಿಂದ ಬದುಕಿದರು ಎಂಬುದನ್ನು ನೆನಪಿಸಿಕೊಂಡರು. ಕಲಾಂ ಯಾವತ್ತೂ ಯಾರಿಂದಲೂ ಉಡುಗೊರೆಗಳು ಸ್ವೀಕರಿಸುತ್ತಿರಲ್ಲಿಲ್ಲ ಎಂಬುದನ್ನು ತಿಳಿಸಿದರು

ಕಲಾಂ ಅವರು ಕಾರ್ಯಕ್ರಮವೊಂದರಲ್ಲಿ ತನಗೆ ನೀಡಲಾದ ಗ್ರೈಂಡರ್‌ನ್ನು ಸ್ವೀಕರಿಸಲು ನಿರಾಕರಿಸಿದರು. ರಾವ್ ಅವರು ಈ ಬಗ್ಗೆ ಟ್ವಿಟರ್‌ ಎಕ್ಸ್‌ನ ಸುದೀರ್ಘ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

2014ರಲ್ಲಿ, ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಮುಖ್ಯ ಅತಿಥಿಗಳಾಗಿದ್ದ ಕೆಲವು ಸಮಾರಂಭದಲ್ಲಿ ಸೌಭಾಗ್ಯ ವೆಟ್ ಗ್ರೈಂಡರ್ ಎಂಬ ಕಂಪನಿಯು ಪ್ರಾಯೋಜಕರಾಗಿದ್ದರು. ಕಾರ್ಯಕ್ರಮದ ಬಳಿಕ ಕಲಾಂ ಅವರಿಗೆ ಸಂಸ್ಥೆಯ ವತಿಯಿಂದ ಗ್ರೈಂಡರ್ ಉಡುಗೊರೆಯನ್ನು ನೀಡಲಾಯಿತು. ಆದರೆ ಕಲಾಂ ಇದನ್ನು ಸ್ವೀಕರಿಸಲು ನಿರಾಕರಿಸಿದರು. 

ಆದರೂ ಪ್ರಾಯೋಜಕರು ಒತ್ತಾಯಿಸಿದಾಗ ಅಬ್ದುಲ್ ಕಲಾಂ ಗ್ರೈಂಡರ್‌ನ್ನು ತೆಗೆದುಕೊಂಡರು. ಆದರೆ ಮರುದಿನ, ಅವರು ಗ್ರೈಂಡರ್‌ನ ಮಾರುಕಟ್ಟೆ ಮೌಲ್ಯದ ಚೆಕ್ ಅನ್ನು ಕಂಪನಿಗೆ ಕಳುಹಿಸಿದರು. ಚೆಕ್ ಠೇವಣಿ ಇಡದಿರಲು ಕಂಪನಿ ನಿರ್ಧರಿಸಿತು.

ಕಲಾಂ ಅವರ ಖಾತೆಯಿಂದ ಯಾವುದೇ ಹಣವನ್ನು ತೆಗೆದುಕೊಳ್ಳದಿರುವುದನ್ನು ಗಮನಿಸಿದ ನಂತರ ಚೆಕ್ ಅನ್ನು ಠೇವಣಿ ಮಾಡಲು ಕಂಪನಿಗೆ ತಿಳಿಸಲಾಯಿತು. ಇಲ್ಲದಿದ್ದರೆ ಗ್ರೈಂಡರ್ ಅನ್ನು ಹಿಂದಕ್ಕೆ ಕಳುಹಿಸುತ್ತೇವೆ ಎಂದು ಕಲಾಂ ಕಚೇರಿಯಿಂದ ತಿಳಿಸಲಾಯಿತು. ಆ ನಂತರ ಕಂಪೆನಿ ಚೆಕ್ ನೀಡಿ ಹಣವನ್ನು ಪಡೆದುಕೊಂಡಿತು.

ಹಳೆಯ ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಪೋಸ್ಟ್ 248k ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು ಹಲವಾರು ಬಳಕೆದಾರರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

click me!