ಅಂಬಾನಿ ಅರಮನೆಯೊಳಗೆ ಹೇಗಿದೆ ನೋಡಿದೀರಾ?

First Published Aug 4, 2020, 5:31 PM IST

ಆಂಟೀಲಿಯಾ- ಇದು ಅಂಬಾನಿ ಅರಮನೆ. ಜಗತ್ತಿನಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಬಿಟ್ಟರೆ ಆ್ಯಂಟೀಲಿಯಾದ ಅಂದ ಹಾಗೂ ಶ್ರೀಮಂತಿಕೆ ಮತ್ತೊಂದಕ್ಕಿಲ್ಲ. ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿಯ ಇಂಥದೊಂದು ವೈಭವೋಪೇತ ಬಂಗಲೆ ಮುಂಬಯಿಯಲ್ಲಿದೆ. ಅದರೊಳಗೆ ಹೇಗಿದೆ, ಏನೆಲ್ಲಾ ಇದೆ, ವಿಶೇಷತೆಗಳೇನು ?
 

ಪೋರ್ಚುಗಲ್ ಹಾಗೂ ಸ್ಪೇನ್‌ನಲ್ಲಿರುವ ಅಟ್ಲಾಂಟಿಕ್ ಸಮುದ್ರದ ನಡುವಿರುವ ದ್ವೀಪ ಆಂಟೀಲಿಯಾದ ಹೆಸರನ್ನೇ ಅಂಬಾನಿಯ ವಾಸಸ್ಥಳಕ್ಕಿಡಲಾಗಿದೆ.
undefined
ದೇಶದಲ್ಲೇ ಅತಿ ದುಬಾರಿ ವಸತಿ ಪ್ರದೇಶ ಎನಿಸಿಕೊಂಡ ಮುಂಬೈಯ ಅಲ್ಟಾಮೌಂಟ್ ರಸ್ತೆಯಲ್ಲಿ ಆಂಟೀಲಿಯಾ ಇದ್ದು, ಇಲ್ಲಿ ಚದರ ಅಡಿಗೆ 80ಸಾವಿರದಿಂದ 85ಸಾವಿರ ರೂಪಾಯಿಗಳವರೆಗೆ ಇದೆ.
undefined

Latest Videos


27 ಮಹಡಿಯ ಈ ಕಟ್ಟಡದಲ್ಲಿ ಮುಖೇಶ್ ಅಂಬಾನಿ, ಪತ್ನಿ ನೀತಾ, ತಾಯಿ ಕೋಕಿಲಾ ಬೆನ್, ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ವಾಸಿಸುತ್ತಾರೆ. ಸುಮಾರು 600 ಜನ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.
undefined
ಕಟ್ಟಡದಲ್ಲಿ 3 ಹೆಲಿಪ್ಯಾಡ್‌ಗಳಿದ್ದು, ಅರೇಬಿಯನ್ ಸೀ ಹಾಗೂ ಮುಂಬೈಯ ಅತ್ಯುತ್ತಮ ನೋಟವನ್ನು ಇಲ್ಲಿಂದ ಕಾಣಬಹುದಾಗಿದೆ. ರಿಕ್ಟರ್ ಮಾಪಕದಲ್ಲಿ 8ರಷ್ಟು ಭೂಕಂಪವಾದರೂ ಬೀಳದಂತೆ ಆಂಟೀಲಿಯಾವನ್ನು ನಿರ್ಮಿಸಲಾಗಿದೆ.था।
undefined
ಅಂಬಾನಿಯ ಕಾರು ಪ್ರೀತಿಯನ್ನು ಪ್ರದರ್ಶಿಸುವಂತೆ ಕಟ್ಟಡದ 6 ಮಹಡಿಗಳನ್ನು ಕಾರ್ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದೆ. ಇಲ್ಲಿ 168 ಕಾರ್‌ಗಳಿದ್ದು, ಬಹುತೇಕ ಎಲ್ಲ ಲಕ್ಷುರಿ ಕಾರ್‌ಗಳನ್ನೂ ಕಾಣಬಹುದು. 7ನೇ ಫ್ಲೋರ್‌ನಲ್ಲಿ ಕಾರ್ ಸರ್ವೀಸ್ ಸ್ಟೇಶನ್ ಕೂಡಾ ಇದೆ!
undefined
ಆಂಟೀಲಿಯಾದಲ್ಲಿ ಅದರದೇ ಆದ ಐಸ್‌ಕ್ರೀಂ ಪಾರ್ಲರ್, ದೊಡ್ಡ ದೇವಸ್ಥಾನ, 50 ಜನರನ್ನು ಹಿಡಿಯುವ ಥಿಯೇಟರ್, ಸಲೂನ್ ಎಲ್ಲವೂ ಆ್ಯಂಟೀಲಿಯಾದಲ್ಲಿದೆ.
undefined
ಆ್ಯಂಟೀಲಿಯಾದ ಪ್ರತೀ ಮಹಡಿಯ ವಿನ್ಯಾಸವೂ ಬೇರೆ ರೀತಿ ಇದ್ದು, ಅದನ್ನು ಕಟ್ಟಲು ಬೇರೆಯದೇ ಮೆಟೀರಿಯಲ್ ಬಳಸಲಾಗಿದೆ.
undefined
ಮುಂಬೈ ತಾಪಮಾನವನ್ನು ಹೊಡೆದೋಡಿಸಲು ಆ್ಯಂಟೀಲಿಯಾದಲ್ಲಿ ಪೂರ್ತಿ ಎಸಿಯಷ್ಟೇ ಅಲ್ಲದೆ, ಐಸ್ ರೂಂ ಇದೆ. ಇಲ್ಲಿ ಗೋಡೆಗಳು ಹಿಮವನ್ನು ಹೊರ ಹಾಕುತ್ತವೆ.
undefined
ಕಟ್ಟಡದಲ್ಲಿ 9 ಎಲಿವೇಟರ್‌ಗಳಿದ್ದು, ವಿವಿಧ ಫ್ಲೋರ್‌ಗಳಿಗೆ ಕರೆದೊಯ್ಯುತ್ತದೆ. ಅದಲ್ಲದೆ ಎರಡು ಮಹಡಿಗಳು ಕೇವಲ ಮನರಂಜನೆಗಾಗಿ ಇದ್ದು, ಇಲ್ಲಿ ಯೋಗ ಕೇಂದ್ರ, ಡ್ಯಾನ್ಸ್ ಸ್ಟುಡಿಯೋ, ಜಾಕುಝಿ, ಹೆಲ್ತ್ ಸ್ಪಾ, ಹಲವಾರು ಸ್ವಿಮ್ಮಿಂಗ್ ಪೂಲ್‌ಗಳು ಸೇರಿದಂತೆ ಮತ್ತಷ್ಟು ವೈಭೋಗಗಳಿವೆ.
undefined
ಇವೆಲ್ಲವೂ ಸೇರಿ ಆ್ಯಂಟೀಲಿಯಾದ ಬೆಲೆಯನ್ನು 14 ಸಾವಿರ ಕೋಟಿ ರೂಪಾಯಿಗಳಿಗೆ ನಿಲ್ಲಿಸುತ್ತವೆ.
undefined
click me!