ಖಿನ್ನತೆಯಲ್ಲಿರುವವರ ಬಳಿ ಈ ಮಾತುಗಳನ್ನಾಡಿ, ನಿಮ್ಮ ಬೆಂಬಲವೇ ಅವರ ಚಿಕಿತ್ಸೆ

First Published Aug 4, 2020, 5:30 PM IST

ಖಿನ್ನತೆ ಎಂಬುದು ಬಹಳ ಸಾಮಾನ್ಯ ಸಮಸ್ಯೆಯಾಗಿದೆ. ಉದ್ಯೋಗದಲ್ಲಿ ಅಂದುಕೊಂಡ ಯಶಸ್ಸು ಸಿಗದಾಗ, ಪ್ರೀತಿಪಾತ್ರರನ್ನು ಕಳೆದುಕೊಂಡಾಗ, ಕೀಳರಿಮೆ ಹೆಚ್ಚಾದಾಗ, ಪ್ರೀತಿಯಲ್ಲಿ ಸೋತಾಗ, ಕಾಯಿಲೆಗಳು ಕಂಗೆಡಿಸಿದಾಗ, ಅವಮಾನದಿಂದ- ಹೀಗೆ ಅನೇಕ ಕಾರಣಕ್ಕೆ ಜನರು ಖಿನ್ನತೆಗೆ ಜಾರುತ್ತಾರೆ. ನಮ್ಮ ಸುತ್ತಮುತ್ತಲಲ್ಲೇ ಹಲವರು ಖಿನ್ನತೆಯಿಂದ ನರಳುತ್ತಿರುತ್ತಾರೆ. ಅವರು ನಮ್ಮವರೇ ಆಗಿದ್ದಾಗ ಅವರನ್ನು ಸಮಾಧಾನ ಪಡಿಸಲು ಮನಸ್ಸು ಚಡಪಡಿಸಿದರೂ, ಏನು ಮಾತನಾಡಬೇಕೆಂಬುದು ಹಲವರಿಗೆ ತಿಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಯಾವುದೇ ಕ್ಷಣ ಬೇಕಾದರೂ ನಾವಿರುವುದಾಗಿ ಅರಿವು ಮೂಡಿಸುವುದೇ ದೊಡ್ಡ ಬಲ. ಖಿನ್ನತೆಯಲ್ಲಿರುವವರ ಬಳಿ ಎಂಥ ಮಾತುಗಳು ಕೆಲಸ ಮಾಡಬಹುದು ಎಂಬ ಅರಿವಿದ್ದರೆ, ಹತ್ತಿರದವರನ್ನು ಈ ವೇದನೆಯಿಂದ ಎತ್ತಲು ಸಹಾಯವಾಗಬಹುದು. 

'ನಿನಗೇನಾಗುತ್ತಿದೆ ಎಂದು ನನ್ನಲ್ಲಿ ಹೇಳಿಕೋ. ಅರ್ಥ ಮಾಡಿಕೊಳ್ಳುತ್ತೇನೆ. ಇದರಿಂದ ನಿನ್ನ ಮನಸ್ಸೂ ಹಗುರಾಗುತ್ತದೆ. '
undefined
'ನಿನಗಿದರ ಬಗ್ಗೆ ಮಾತನಾಡಲು ಇಷ್ಟವಿಲ್ಲವಾದರೆ ಪರವಾಗಿಲ್ಲ. ನೀನು ಹೇಗೇ ಇದ್ದರೂ ನಿನ್ನೊಂದಿಗೆ ನಾನಿರುತ್ತೇನೆ. ನನ್ನಿಂದ ಸಾಧ್ಯವಾದಷ್ಟು ನಿನ್ನನ್ನು ನಗಿಸಲು, ಖುಷಿಯಾಗಿರಿಸಲು ಪ್ರಯತ್ನಿಸುತ್ತೇನೆ.'
undefined
'ಈ ಪರಿಸ್ಥಿತಿ ಸರಿಯಾಗುವುದೇ ಇಲ್ಲ ಎಂದು ಎನಿಸುತ್ತಿರಬಹುದು. ಆದರೆ ಕಾಲ ಕಳೆದಂತೆಲ್ಲ ಬಹಳಷ್ಟು ಬದಲಾಗುತ್ತದೆ. ಪ್ರತಿ ಕೆಟ್ಟ ಕಾಲಕ್ಕೂ ಒಂದು ಅಂತ್ಯ ಇರಲೇಬೇಕು. ಒಳ್ಳೆ ಕಾಲ ಬಂದೇ ಬರುತ್ತದೆ, ಕಾಯೋಣ.'
undefined
'ನಿನ್ನ ಕಷ್ಟ ನನಗೆ ಅರ್ಥವಾಗುತ್ತದೆ. ಖಿನ್ನತೆಯಲ್ಲಿರುವುದು ತಪ್ಪೇನಲ್ಲ. ಅದರಿಂದ ಹೊರ ಬರಲು ಸಮಯ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ನಿಧಾನವಾಗಿ ಚೇತರಿಸಿಕೋ. ಬೇಕಾದ ಸಹಾಯ ಕೇಳು.'
undefined
'ಅರೆ ನೀನು ನಿನ್ನೆಗಿಂತ ಎಷ್ಟು ಗೆಲುವಾಗಿದ್ದೀಯಾ, ಬೆಳಗ್ಗೆ ಹಾಸಿಗೆಯಿಂದ ನೀನಾಗೇ ಎದ್ದೆ. ಇದು ಕೂಡಾ ಗೆಲುವೇ. ಇಂಥ ಚಿಕ್ಕ ಚಿಕ್ಕ ಗೆಲುವುಗಳೇ ದೊಡ್ಡ ಗೆಲುವಿನತ್ತ ಕರೆದೊಯ್ಯುವುದು. ಇದಕ್ಕಾಗಿ ನಿನಗೆ ನೀನೇ ಬೆನ್ನು ತಟ್ಟಿಕೋಬೇಕು. '
undefined
'ಕೆಲವೊಂದು ದಿನ ಹಿನ್ನಡೆಯಾಗುತ್ತದೆ. ಆದರೆ ನಾಳೆ ಎಂಬುದು ಇದ್ದೇ ಇದೆಯಲ್ಲ... ಪ್ರತಿ ನಾಳೆಯಲ್ಲೂ ಬಹಳಷ್ಟು ಅವಕಾಶಗಳಿರುತ್ತವೆ. ಆಗ ಗೆಲ್ಲಬಹುದು. '
undefined
'ನಿನಗೆ ಬೆಂಬಲ ಬೇಕೆಂದರೆ ನಾನು ನಿನ್ನೊಂದಿಗೆ ಬರುತ್ತೇನೆ. ಬಾ ಇಬ್ಬರೂ ಹೊರ ಹೋಗಿ ಬರೋಣ.'
undefined
'ನಿನಗೆ ಹೇಗೆನಿಸುತ್ತಿದೆಯೋ ಅದರಲ್ಲಿ ನಿನ್ನ ತಪ್ಪಿಲ್ಲ. ಅದಕ್ಕಾಗಿ ಯಾರೂ ನಿನ್ನನ್ನು ದೂಷಿಸುವುದಿಲ್ಲ. ಎಲ್ಲರಿಗೂ ಒಮ್ಮೊಮ್ಮೆ ಹೀಗಾಗುತ್ತದೆ. ನೀನು ಕೂಡಾ ನಿನ್ನನ್ನು ದೂಷಿಸಿಕೊಳ್ಳುವುದು, ವೃಥಾ ಪಶ್ಚಾತ್ತಾಪ ಪಟ್ಟುಕೊಳ್ಳುವುದು ಬಿಡಬೇಕು. '
undefined
'ನೀನೇನು ಒಂಟಿಯಲ್ಲ. ನನಗೆ ನೀನೆಂದರೆ ಇಷ್ಟ. ನೀನು ಮುಂಚಿನಂತಾಗಬೇಕು. '
undefined
'ಏನು ಮಾಡಬೇಕೆನಿಸುತ್ತಿದೆ ಹೇಳು? ನಾನು ಜೊತೆಗೂಡುತ್ತೇನೆ. ನಿನಗೆ ಇಷ್ಟ ಬಂದಂತೆ ಮಾಡೋಣ. '
undefined
click me!