ಸೋಲೊಪ್ಪದ ವಿದಿಶಾ, ಮಿಸ್ ಡೆಫ್ ವರ್ಲ್ಡ್ ಗೆದ್ದ ಮೊದಲ ಭಾರತೀಯಳು!

First Published Jul 31, 2019, 5:22 PM IST

ಮಿಸ್ ಡೆಫ್ ವರ್ಲ್ಡ್ 2019 ಗೆದ್ದ ವಿದಿಶಾ ಬಾಲಿಯನ್, ಮಾಜಿ ಟೆನ್ನಿಸ್ ಆಟಗಾರ್ತಿ. ಡೆಫ್ಲಿಂಪ್ಸಿಕ್ ನಲ್ಲಿ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ವಿದಿಶಾ, ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು. ಕಿವುಡುತನವಿದ್ದರೂ ತನ್ನ ಯಶಸ್ಸಿನ ಹಾದಿಗೆ ತೊಡಕಾಗಲು ಬಿಡದ ವಿದಿಶಾರ ಫೋಟೋಗಳು ಇಲ್ಲಿವೆ.

21 ವರ್ಷದ ವಿದಿಶಾ ಬಾಲಿಯನ್ ಉತ್ತರ ಪ್ರದೇಶದ ಮುಜಫ್ಫರ್ ನಗರದಾಕೆ
undefined
ಸಾಧಾರಣ ಪ್ರತಿಭೆ ವಿದಿಶಾ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಿಸ್ ಡೆಫ್ ವರ್ಲ್ಡ್ 2019 ಫೈನಲ್ಸ್ ನಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
undefined
ವಿದಿಶಾ ಮಿಸ್ ಡೆಫ್ ವರ್ಲ್ಡ್ ಕಿರೀಟ ತಮ್ಮದಾಗಿಸಿಕೊಂಡ ಮೊದಲ ಭಾರತೀಯಳು.
undefined
16 ದೇಶಗಳು ಪ್ರತಿನಿಧಿಸಿದ್ದ ಈ ಸ್ಪರ್ಧೆಯಲ್ಲಿ, ವಿದಿಶಾ ಸೇರಿದಂತೆ 11 ಸ್ಪರ್ಧಾಳುಗಳು ಮಿಸ್ ಡೆಫ್ ವರ್ಲ್ಡ್ 2019 ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು.
undefined
ವಿದಿಶಾ ಮಾಜಿ ಟೆನ್ನಿಸ್ ಆಟಗಾರ್ತಿ ಕೂಡಾ ಹೌದು.
undefined
ಡೆಫ್ಲಿಂಪ್ಸಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿದಿಶಾ ದೇಶಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು.
undefined
ವಿದಿಶಾ ಮಿಸ್ ಡೆಫ್ ವರ್ಲ್ಡ್ 2019 ನ ಇಡೀ ಪಯಣವನ್ನು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಭಾವುಕ ಸಂದೇಶದ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
undefined
ಕಿವಿ ಕೇಳದ ನಾನು ಮಿಸ್ ಡೆಫ್ ವರ್ಲ್ಡ್ 2019 ಆಗಿ ಹೊರಹೊಮ್ಮಿದ ಕ್ಷಣ ಜೀವನ ಪರ್ಯಂತ ಮರೆಯಲಾರೆ. ಹಲವಾರು ಕಾರಣಗಳಿಂದ ಈ ಗೆಲುವು ನನಗೆ ಹಲವಾರು ಕಾರಣಗಳಿಂದ ಮಹತ್ವಪೂರ್ಣವಾಗಿದೆ
undefined
ಮನೆ ಬಾಗಿಲಿನ ಡೋರ್ ಬೆಲ್ ಕೇಳಲಾಗದ ಮಗು ಎಂದು ಹಲವಾರು ಬಾರಿ ಕಡೆಗಣಿಸಲಾಗಿದೆ
undefined
ಆದರೆ ಕ್ರೀಡಾ ಕ್ಷೇತ್ರದಲ್ಲಿ ಪುಟಿದೆದ್ದು ದೇಶಕ್ಕೆ ಕೀರ್ತಿ ತಂದ ಬಳಿಕ ಉಸಿರಾಡುವಂತಾಯಿತು. ಆದರೆ ಬಳಿಕ ಗಾಯಾಳುವಾದ ನನ್ನ ನಿರೀಕ್ಷೆಗಳು ಮತ್ತೆ ಕಮರಿ ಹೋದವು.
undefined
ಬದುಕಲು ನನ್ನ ಬಳಿ ಕಾರಣಗಳಿರಲಿಲ್ಲ. ಆದರೆ ನನ್ನ ಕುಟುಂಬ ನನ್ನೊಂದಿಗಿತ್ತು ಹೀಗಾಗಿ ಸೋಲೊಪ್ಪಲಿಲ್ಲ.
undefined
ಆದರೀಗ ಮಿಸ್ ಡೆಫ್ ವರ್ಲ್ಡ್ 2019 ಆಗಿ ಹೊರ ಹೊಮ್ಮಿದ್ದೇನೆ. ಸೌಂದರ್ಯದ ಜಗತ್ತಿನ ಧ್ವನಿಯಾಗಿದ್ದೇನೆ. ಏನು ಬೇಕೆಂದು ಅರಿತ ನಾನು ಗೆದ್ದಿದ್ದೇನೆ.
undefined
click me!