ಇದನ್ನ ಕೇಳಿದ ಗಂಡ, ಹೆಂಡ್ತಿನ ನಡೆಸಿಕೊಂಡು ಹೋಗಿ ತಾನು ಕತ್ತೆ ಮೇಲೆ ಕೂರ್ತಾನೆ. ಸ್ವಲ್ಪ ದೂರ ಹೋದ್ಮೇಲೆ ಮತ್ತೊಂದು ಊರಿನ ಜನ ಗಂಡನಿಗೆ ಬೈಯ್ಯೋಕೆ ಶುರು ಮಾಡ್ತಾರೆ. 'ಗಂಡಸಾಗಿ ಹೆಣ್ಣನ್ನ ನಡೆಸಿಕೊಂಡು ಹೋಗ್ತಾ ಇದ್ದಾನೆ. ಇವನು ಮನುಷ್ಯನಾ' ಎಂದು ಹೇಳಿದ್ದಾರೆ. ಆಗ ಗಂಡ ಹೆಂಡ್ತಿ ಇಬ್ರೂ ಕತ್ತೆನ ನಡೆಸಿಕೊಂಡು ಹೋಗ್ತಾರೆ.
ಮತ್ತೊಂದು ಊರಿಗೆ ಹೋದಾಗ ಅಲ್ಲಿನ ಜನ, 'ಇವ್ರಿಗೆ ಬುದ್ದಿ ಇದ್ಯಾ.? ಕತ್ತೆ ಇದ್ರೂ ನಡ್ಕೊಂಡು ಹೋಗ್ತಾ ಇದ್ದಾರೆ. ಇವ್ರು ಎಂಥಾ ಮೂರ್ಖರು' ಅಂತ ಬೈಯ್ಯುತ್ತಾರೆ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ನೀತಿ: ಈ ಕಥೆಯಲ್ಲಿ ಒಂದು ಒಳ್ಳೆ ಸಂದೇಶ ಇದೆ. ನಾವು ಏನ್ ಮಾಡಿದ್ರೂ ಏನಾದ್ರೂ ಮಾತಾಡೋ ಜನ ಇರ್ತಾರೆ. ಅದಕ್ಕೆ ಜನರ ಮಾತು ಕೇಳ್ಕೊಳ್ಳದೆ ನಿಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ಮಾಡಿ. ಆದ್ರೆ ಯಾರಿಗೂ ತೊಂದ್ರೆ ಆಗದ ಹಾಗೆ, ಪ್ರಾಮಾಣಿಕವಾಗಿ ಬದುಕಿ.