ಕೈ ತಪ್ಪಿ ಸೋಫಾ ಮೇಲೆ ಟೀ ಬಿದ್ಬಿಡ್ತಾ? ಟೆನ್ಷನ್‌ ಮಾಡ್ಕೊಳ್ಬೇಡಿ, ಎಷ್ಟೇ ಹಳೆ ಕಲೆಯಾದ್ರೂ ಇದ್ರಿಂದ ಮಂಗಮಾಯ

Published : Sep 21, 2026, 11:42 AM IST

ಚಹಾ ಕುಡಿಯುವಾಗ ಕೈಜಾರಿ ಸೋಫಾ ಮೇಲೆ ಬೀಳೋದು ಸಾಮಾನ್ಯ. ಟೀ ಬಿದ್ದ ತಕ್ಷಣ ಸ್ವಚ್ಛ ಮಾಡದಿದ್ರೆ ಅದ್ರ ಕಲೆ ಬಟ್ಟೆಯ ಮೇಲೆ ಗಾಢವಾಗಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ತಿಳಿ ಬಣ್ಣದ ಸೋಫಾ ಆಗಿದ್ದರೆ ಕಲೆ ಎದ್ದು ಕಾಣುತ್ತೆ. ಸೋಫಾ ಮೇಲಾಗುವ ಟೀ ಕಲೆ ತೆಗೆಯೋದು ಹೇಗೆ ಗೊತ್ತಾ?

PREV
14
ಮೊದಲು ಹೀಗೆ ಮಾಡಿ

ಟೀ ಈಗಷ್ಟೇ ಬಿದ್ದಿದ್ದರೆ, ಮೊದಲು ಒಣ ಬಟ್ಟೆ ಅಥವಾ ಟಿಶ್ಯೂ ತೆಗೆದುಕೊಂಡು ಕಲೆ ಇರುವ ಜಾಗವನ್ನು ನಿಧಾನವಾಗಿ ಒತ್ತಿ ಚಹಾವನ್ನು ಹೀರಿಸಿಕೊಳ್ಳಿ. ಆದರೆ ಬಟ್ಟೆಯಿಂದ ಉಜ್ಜಬೇಡಿ. ಉಜ್ಜಿದರೆ ಚಹಾ ಬಟ್ಟೆಯೊಳಗೆ ಇನ್ನಷ್ಟು ಹೋಗಿ ಕಲೆ ದೊಡ್ಡದಾಗಬಹುದು. ಹಾಗಾಗಿ ಮೊದಲು ಹೆಚ್ಚುವರಿ ಚಹಾವನ್ನು ಸಾಧ್ಯವಾದಷ್ಟು ಬೇಗ ಹೀರಿಸಿಕೊಳ್ಳೋದು ಮುಖ್ಯ.

24
ನೀರು ಮತ್ತು ಸೋಪ್ ಸಾಕು

ಒಂದು ಬಟ್ಟಲಿಗೆ ಸ್ವಲ್ಪ ಉಗುರುಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಲಿಕ್ವಿಡ್ ಸೋಪ್ ಅಥವಾ ಡಿಶ್ವಾಶಿಂಗ್ ಲಿಕ್ವಿಡ್ ಹಾಕಿ. ಈಗ ಸ್ವಚ್ಛವಾದ ಬಟ್ಟೆಯನ್ನು ಅದರಲ್ಲಿ ಸ್ವಲ್ಪ ಒದ್ದೆ ಮಾಡಿಕೊಂಡು ಕಲೆ ಇರುವ ಜಾಗಕ್ಕೆ ನಿಧಾನವಾಗಿ ಹಚ್ಚಿ. ಬಟ್ಟೆ ತುಂಬಾ ಒದ್ದೆಯಾಗಿರಬಾರದು. ಸೋಫಾದೊಳಗೆ ಹೆಚ್ಚು ನೀರು ಹೋದರೆ ಒಣಗೋಕೆ ಸಮಯ ಹಿಡಿಯುತ್ತೆ. ಕಲೆ ಕಡಿಮೆಯಾಗುವವರೆಗೆ ನಿಧಾನವಾಗಿ ಇದೇ ರೀತಿ ಮಾಡಬಹುದು.

34
ಹಳೆಯ ಕಲೆ ಇದ್ರೆ ವಿನೆಗರ್ ಬಳಸಿ

ಕಲೆ ಹಳೆಯದಾಗಿದ್ದರೆ ನೀರು ಮತ್ತು ಬಿಳಿ ವಿನೆಗರ್ ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಬಳಸಬಹುದು. ಆದರೆ ಇದನ್ನು ನೇರವಾಗಿ ಕಲೆ ಮೇಲೆ ಹಾಕುವ ಮೊದಲು ಸೋಫಾದ ಕಾಣದ ಜಾಗದಲ್ಲಿ ಸ್ವಲ್ಪ ಹಾಕಿ ಪರೀಕ್ಷಿಸಿ. ಬಟ್ಟೆಯ ಬಣ್ಣದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ ಮಾತ್ರ ಕಲೆ ಇರುವ ಜಾಗಕ್ಕೆ ಹಚ್ಚಿ. ನಂತರ ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಆ ಜಾಗವನ್ನು ಒರೆಸಿ.

44
ಸೋಫಾ ಚೆನ್ನಾಗಿ ಒಣಗಿಸಿ

ಕಲೆ ಸ್ವಚ್ಛ ಮಾಡಿದ ನಂತರ ಸೋಫಾವನ್ನು ಚೆನ್ನಾಗಿ ಒಣಗಿಸಬೇಕು. ಕಿಟಕಿ ತೆರೆದು ಗಾಳಿ ಬರುವಂತೆ ಮಾಡಬಹುದು ಅಥವಾ ಫ್ಯಾನ್ ಹಾಕಬಹುದು. ಸೋಫಾ ಮೇಲೆ ಹೆಚ್ಚು ನೀರು ಹಾಕಿ ಸ್ವಚ್ಛ ಮಾಡುವುದನ್ನು ತಪ್ಪಿಸಿ. ಒಳಗೆ ತೇವ ಉಳಿದರೆ ನಂತರ ದುರ್ವಾಸನೆ ಬರಬಹುದು. ಯಾವುದೇ ಮನೆಮದ್ದನ್ನು ಬಳಸುವ ಮೊದಲು ಸೋಫಾದ ಬಟ್ಟೆಗೆ ಏನು ಸೂಕ್ತ ಅನ್ನೋದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories