ಬೇಸಿಗೆಯ ಬಿಸಿ: ಛಾವಣಿ ಮೇಲಿನ ಟ್ಯಾಂಕ್‌ನಿಂದ ಬಿಸಿನೀರು ಬರ್ತಿದೆಯಾ? ಕೂಲ್ ವಾಟರ್‌ಗೆ ಹೀಗೆ ಮಾಡಿ

Published : Mar 01, 2026, 09:44 AM IST

ಬೇಸಿಗೆಯಲ್ಲಿ ಛಾವಣಿ ಮೇಲಿರುವ ನೀರಿನ ಟ್ಯಾಂಕ್ ಬಿಸಿಯಾಗುವುದು ಸಾಮಾನ್ಯ. ಸೂರ್ಯನ ನೇರ ಬಿಸಿಲು ತಾಗದಂತೆ ನೋಡಿಕೊಳ್ಳುವುದು, ಥರ್ಮಾಕೋಲ್ ಬಳಸುವುದು, ಟ್ಯಾಂಕ್‌ಗೆ ಬಿಳಿ ಬಣ್ಣ ಬಳಿಯುವುದು ಮತ್ತು ಸಣ್ಣ ಛಾವಣಿ ನಿರ್ಮಿಸುವಂತಹ ಸರಳ ವಿಧಾನಗಳಿಂದ ನೀರನ್ನು ತಂಪಾಗಿ ಇಡಬಹುದು.

PREV
15
ಛಾವಣಿ ಮೇಲೆ ಟ್ಯಾಂಕ್

ಬೇಸಿಗೆ ಆರಂಭವಾದ ಬಳಿಕ ಮುಟ್ಟಿದೆಲ್ಲವೂ ಬಿಸಿಯ ಅನುಭವ ಆಗುತ್ತದೆ. ತಣ್ಣೀರಿನಿಂದ ಮುಖ ತೊಳೆಯಲು ಹೋದರೂ ನಲ್ಲಿಯಲ್ಲಿಯೂ ಬಿಸಿನೀರು ಬರುತ್ತದೆ. ಮನೆ ಛಾವಣಿ ಮೇಲೆ ಟ್ಯಾಂಕ್ ಇರಿಸೋದರಿಂದ ಸೂರ್ಯನ ಪ್ರಖರತೆ ನೀರು ಸಹ ಕಾದಿರುತ್ತದೆ. ಆದ್ರೆ ಕೆಲವೊಂದು ಸರಳ ವಿಧಾನಗಳ ಮೂಲಕ ಛಾವಣಿ ಮೇಲಿರುವ ಟ್ಯಾಂಕ್‌ನಲ್ಲಿ ನೀರನ್ನು ತಂಪಾಗಿಸುತ್ತದೆ.

25
ಸೂರ್ಯನ ಬಿಸಿಲು

ಸೂರ್ಯನ ಬಿಸಿಲು ನೇರವಾಗಿ ಟ್ಯಾಂಕ್‌ಗೆ ತಾಗದಂತೆ ನೋಡಿಕೊಳ್ಳಿ. ಸೂರ್ಯನ ನೇರ ಬಿಸಿಲು ನೀರು ಬಿಸಿಯಾಗುವಂತೆ ಮಾಡುತ್ತದೆ. ಅದಕ್ಕಾಗಿ ಛಾವಣಿ ಮೇಲಿನ ಟ್ಯಾಂಕ್ ಮುಚ್ಚಳವನ್ನು ಮುಚ್ಚಿರುವಂತೆ ನೋಡಿಕೊಳ್ಳಿ. ಹಾಗೆಯೇ ಟ್ಯಾಂಕ್‌ ಸುತ್ತಲೂ ದಪ್ಪವಾದ ಹೊದಿಕೆ ಹಾಕಿರಿ. ಇದರಿಂದ ನೀರು ಹೆಚ್ಚು ಬಿಸಿಯಾಗಲ್ಲ.

35
ಥರ್ಮಾಕೋಲ್

ನೀರಿನ ಟ್ಯಾಂಕ್‌ ಸುತ್ತಲೂ ಥರ್ಮಾಕೋಲ್ ಅಳವಡಿಸಬಹುದು. ಥರ್ಮಾಕೋಲ್ ಅಳವಡಿಕೆಯಿಂದ ಟ್ಯಾಂಕ್‌ ನೀರು ಬಿಸಿಯಾಗೋದನ್ನು ತಡೆಯುತ್ತದೆ. ಥರ್ಮಾಕೋಲ್‌ ತೊಟ್ಟೆ ಅಥವಾ ಟ್ಯಾಂಕ್‌ಗೆ ಬಿಸಿಲು ತಾಗೋದನ್ನು ತಡೆಯುತ್ತದೆ.

45
ಛಾವಣಿ

ನೀರಿನ ಟ್ಯಾಂಕ್ ಮೇಲೆ ಛಾವಣಿಯನ್ನು ಮಾಡಿಸಬಹುದು. ಇದರಿಂದ ಪರ್ಮ್‌ನೆಂಟ್‌ ಪರಿಹಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯ ಮೇಲ್ಛಾವಣೆ ಮೇಲೆ ಟ್ಯಾಂಕ್ ನೆರಳಿಗಾಗಿ ತಗಡು ಅಥವಾ ಶೀಟ್‌ ಛಾವಣೆ ಅಳವಡಿಸುತ್ತಿರೋದನ್ನು ಕಾಣಬಹುದು. ಇದು ಸಹ ನೀರು ಬಿಸಿಯಾಗೋದನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

55
ಟ್ಯಾಂಕ್‌ನ ಕಪ್ಪು ಬಣ್ಣ

ಸಾಮಾನ್ಯವಾಗಿ ನೀರಿನ ಟ್ಯಾಂಕ್‌ನ ಕಪ್ಪು ಬಣ್ಣದಾಗಿರುತ್ತದೆ. ಟ್ಯಾಂಕ್‌ನ್ನ ಬಿಳಿ ಬಣ್ಣಕ್ಕೆ ಬದಲಾವಣೆ ಮಾಡೋದರಿಂದ ನೀರು ಬಿಸಿಯಾಗೋದನ್ನು ನಿಯಂತ್ರಿಸಬಹುದು. ನೈಸರ್ಗಿಕವಾಗಿ ಬಿಳಿ ಬಣ್ಣ ಸೂರ್ಯನ ಬಿಸಿಲು ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.

ಇದನ್ನೂ ಓದಿ: ವಯಸ್ಸಾದರೂ ಮುಖ ನಳನಳಿಸಬೇಕಾ? ಸಿಂಪಲ್​ ಹೋಮ್ ರೆಮಿಡಿ ಹೇಳಿದ ಡಾ.ಗೌರಿಯಮ್ಮ- ವಿಡಿಯೋ ಇಲ್ಲಿದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories