Glass Wall Decor: ನಿಮ್ಮ ಹೊಸ ಮನೆಗೆ ರಾಯಲ್ ಲುಕ್ ಬೇಕಾ? ಲಿವಿಂಗ್ ರೂಮ್‌ಗೆ ಗ್ಲಾಸ್ ವಾಲ್ ಡಿಸೈನ್ ಹೀಗಿರಲಿ!

Published : Jun 10, 2026, 12:37 PM IST

ಲಿವಿಂಗ್ ರೂಂ ಗೋಡೆಗೆ ಯಾವ ರೀತಿಯ ಗ್ಲಾಸ್ ವಾಲ್ ವಿನ್ಯಾಸಗಳು ಹೆಚ್ಚು ಜನಪ್ರಿಯ? ಗ್ಲಾಸ್ ವಾಲ್ ಆರ್ಟ್ ಆಯ್ಕೆ ಮಾಡುವಾಗ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಡಬೇಕು? ಸಣ್ಣ ಲಿವಿಂಗ್ ರೂಂಗಳಿಗೆ ಗ್ಲಾಸ್ ಮಿರರ್ ಮತ್ತು ಸ್ಟೇನ್ಡ್ ಗ್ಲಾಸ್ ಡೆಕೋರ್‌ಗಳು ಸೂಕ್ತವೇ?

PREV
16

ಮನೆಗೆ ಅತಿಥಿಗಳು ಬಂದಾಗ ಮೊದಲು ಒಳಬರುವುದೇ ಲಿವಿಂಗ್ ರೂಮ್‌ಗೆ. ಅಲ್ಲಿನ ಪ್ರತಿಯೊಂದನ್ನು ಗಮನಿಸಲು ಶುರು ಮಾಡುತ್ತಾರೆ. ಲಿವಿಂಗ್ ರೂಂ ವಿನ್ಯಾಸವನ್ನ ಇಂಟಿರಿಯಲ್ ಡಿಸೈನ್. ಹಾಗಾಗಿ ಅದರ ಅಲಂಕಾರಕ್ಕೆ ವಿಶೇಷ ಗಮನ ಕೊಡುವುದು ಮುಖ್ಯ. ನಿಮ್ಮ ಲಿವಿಂಗ್ ರೂಂಗೆ ಸ್ಟೈಲಿಶ್ ಆಗಿರಬೇಕು, ಐಷಾರಾಮಿ ಲುಕ್ ನೀಡಬೇಕೆಂದರೆ ಗ್ಲಾಸ್ ವಾಲ್ ಡೆಕೋರ್ ಮಾಡೋದು ಉತ್ತಮ. ಗಾಜಿನಿಂದ ಮಾಡಿದ ಸುಂದರವಾದ ಮಾಸ್ಟರ್‌ಪೀಸ್‌ಗಳು ಗೋಡೆಗಳ ಅಂದವನ್ನು ಹೆಚ್ಚಿಸುವುದಲ್ಲದೆ, ಇಡೀ ಕೋಣೆಗೆ ಆಧುನಿಕ ಸ್ಪರ್ಶ ನೀಡುತ್ತವೆ. ಇಲ್ಲಿ ಅಂತಹ 5 ಅದ್ಭುತ ಗ್ಲಾಸ್ ವಾಲ್ ಡೆಕೋರ್ ಐಡಿಯಾಗಳಿವೆ.

26

ಮಿರರ್ ಬಟರ್‌ಫ್ಲೈ ಡಿಸೈನ್

ಇದು ಎಲ್ಲಿ ಹಾಕಬೇಕು ಅಂತಾ ಯೋಚಿಸ್ತಿದ್ದೀರಾ? ಸಿಂಪಲ್, ನಿಮ್ಮ ಮನೆಯ ಸೋಫಾದ ಹಿಂದಿನ ಗೋಡೆ ಇದೆಯಲ್ಲ ಅಲ್ಲಿ ಮೀರರ್ ಬಟರ್ ಫ್ಲೈ ಡಿಸೈನ್ ಹಾಕಿದ್ರೆ ಇಡೀ ಲಿವಿಂಗ್ ಸೋಫಾದ ಹಿಂದಿನ ಗೋಡೆಯ ಮೇಲೆ ಮಿರರ್ ಬಟರ್‌ಫ್ಲೈ ಡಿಸೈನ್ ಹಾಕಿದರೆ, ಇಡೀ ಲಿವಿಂಗ್ ರೂಂಗೆ ಒಂದು ಐಷಾರಾಮಿ ಲುಕ್ ಸಿಗುತ್ತದೆ. ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಇದು ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ. ಅವರು ಸೋಫಾದ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆಯುವುದಿಲ್ಲ.

36

ಮಿರರ್ ಮೊಸಾಯಿಕ್ ವಾಲ್ ಆರ್ಟ್

ಸಣ್ಣ ಸಣ್ಣ ಮೀರರ್ ತುಣುಕುಗಳಿಂದ ತಯಾರಿಸಿದ ಮೊಸಾಯಿಕ್ ಆರ್ಟ್, ಲಿವಿಂಗ್ ರೂಂಗೆ ನೋಡೋಕೂ ಚೆಂದ, ಒಂಥರಾ ರಾಯಲ್ ಲುಕ್ ನೀಡುತ್ತೆ. ಇದು ಗೋಡೆಯನ್ನು ದೊಡ್ಡದಾಗಿ ಮತ್ತು ಹೆಚ್ಚು ಬೆಳಕಿನಿಂದ ಕೂಡಿದಂತೆ ಕಾಣುವಂತೆ ಮಾಡುತ್ತದೆ. ಈ ರೀತಿಯ ಆರ್ಟ್ ಪೀಸ್‌ಗಳು ಸ್ಟಿಕ್ಕರ್ ಮಾದರಿಯಲ್ಲಿ ಬರುತ್ತವೆ, ಅದನ್ನು ನೀವೇ ಮನೆಯಲ್ಲಿ ಅಂಟಿಸಬಹುದು. ಇವುಗಳು ನಿಮಗೆ 1500 ರಿಂದ 5 ಸಾವಿರ ರೂಪಾಯಿಗಳ ಒಳಗೆ ಸಿಗುತ್ತವೆ. ಇದರ ಬೆಲೆ ಗಾತ್ರವನ್ನು ಅವಲಂಬಿಸಿರುತ್ತದೆ.

46

ಲೀಫ್ ಕಟ್ ಗ್ಲಾಸ್ ವಾಲ್ ಡೆಕೋರ್

3D ಮಾದರಿಯಲ್ಲಿ ಮಾಡಿದ ಲೀಫ್ ಕಟ್ ನಿಮ್ಮ ಲಿವಿಂಗ್ ರೂಂಗೆ ಹಾಕಿದರೆ ಮನೆಗೆ ಬಂದ ಅತಿಥಿಗಳ ತಮ್ಮ ಕಣ್ಣುಗಳನ್ನು ಬೇರೆಡೆ ತಿರುಗಿಸುವುದು ಕಷ್ಟ. ಗೋಡೆಯ ಮೇಲೆ ದೊಡ್ಡ ಗಾತ್ರದ ಲೀಫ್ ಕಟ್ ಡಿಸೈನ್ ಹಾಕಿದಾಗ, ಇಡೀ ಕೋಣೆಯ ನೋಟವೇ ಬದಲಾಗುತ್ತದೆ. ಸರಳವಾದ ಸೋಫಾದೊಂದಿಗೆ ಈ ರೀತಿಯ ಗ್ಲಾಸ್ ವಾಲ್ ಆರ್ಟ್ ಹಾಕಿದರೆ, ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ.

56

ಎಚ್ಚಿಂಗ್ ಮಾಡಿದ ಗ್ಲಾಸ್ ಆರ್ಟ್‌ವರ್ಕ್

ಇನ್ನೊಂದು ರೀತಿ ವಿನ್ಯಾಸಗೊಳಿಸಬಹುದು ಹೇಗೆಂದರೆ ಹೂವಿನ, ಜ್ಯಾಮಿತೀಯ ಅಥವಾ ಪ್ರಕೃತಿಯಿಂದ ಪ್ರೇರಿತವಾದ ಮಾದರಿಗಳನ್ನು ಹೊಂದಿರುವ ಎಚ್ಚಿಂಗ್ ಗ್ಲಾಸ್ ಆರ್ಟ್‌ವರ್ಕ್ ನಿಂದ. ಇದು ಇಡೀ ಲಿವಿಂಗ್ ರೂಂಗೆ ವಿಶಿಷ್ಟ ಮತ್ತು ಕ್ಲಾಸಿ ಲುಕ್ ನೀಡುತ್ತದೆ. ಇದರ ಫಿನಿಶಿಂಗ್ ತುಂಬಾ ಅದ್ಭುತವಾಗಿ ಕಾಣುತ್ತದೆ. ಇಲ್ಲಿ ಎರಡು ವಿನ್ಯಾಸಗಳನ್ನು ತೋರಿಸಲಾಗಿದೆ. ಈ ರೀತಿಯ ಆರ್ಟ್‌ಪೀಸ್‌ಗಳನ್ನು ನೀವು 2-5 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದು.

66

ಮಿರರ್ ಟ್ರೀ ವಾಲ್ ಆರ್ಟ್

ಅದೆಲ್ಲ ಎಂದರೆ ನೀವು ಲಿವಿಂಗ್ ರೂಂನಲ್ಲಿ ಗಿಡಗಳನ್ನು ಇಡುತ್ತಿದ್ದರೆ ಅದರ ಹಿಂದೆ ಈ ರೀತಿಯ ಮಿರರ್ ಟ್ರೀಯನ್ನು ಖಂಡಿತಾ ಹಾಕಿ. ಇದು ನೋಡೋಕೂ ತುಂಬಾ ಚೆಂದವಾಗಿ ಕಾಣಿಸುತ್ತದೆ. ಮನೆಗೆ ಬಂದ ಅತಿಥಿಗಳು ಇದನ್ನ ಕಣ್ಣರಳಿಸಿ ನೋಡದೆ ಇರಲಾರರು. ಇದು ನಿಮ್ಮ ಲಿವಿಂಗ್ ವಾಲ್‌ಗೆ ಒಂದು ಅದ್ಭುತವಾದ ಲುಕ್ ನೀಡುತ್ತೆ ಅಷ್ಟೇ ಅಲ್ಲದೇ ಮನೆ ಮಾಡರ್ನ್ ಐಷಾರಾಮಿಯಾಗಿ ಕಾಣುವಂತೆ ಮಾಡುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories