ಸೋನಿಯಾ ಗಾಂಧಿ ಧರಿಸಿದ 300 ವರ್ಷ ಇತಿಹಾಸದ ಬಲುಚರಿ ಸೀರೆ ಭಾರಿ ಚರ್ಚೆ,ಏನಿದರ ವಿಶೇಷತೆ?

Published : Nov 18, 2026, 12:43 PM IST

ಸೋನಿಯಾ ಗಾಂಧಿ ತಮ್ಮ ಆತ್ಮಕತೆ ಪುಸ್ತಕ ಬಿಡುಗಡೆ ವೇಳೆ ಶತಮಾನಗಳ ಇತಿಹಾಸವಿರುವ ಬಲುಚರಿ ಸೀರೆ ಧರಿಸಿದ್ದರು. ಬರೋಬ್ಬರಿ 300 ವರ್ಷಗಳ ಇತಿಹಾಸವಿರುವ ಈ ಸೀರೆಯ ವಿಶೇಷತೆ ಏನು? ರಾಜಭವೈದ ಈ ಸೀರೆ ವಿಶೇಷತೆ ಇಲ್ಲಿದೆ.

PREV
16
ಬಲುಚರಿ ಸೀರೆ ಧರಿಸಿದ ಸೋನಿಯಾ ಗಾಂಧಿ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆತ್ಮಕತೆ ಬಿಲಾಂಗಿಂಗ್, ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಧರಿಸಿದ ಸೀರೆ ಇದೀಗ ಭಾರಿ ಚರ್ಚೆಯಾಗುತ್ತಿದೆ. ಬರೋಬ್ಬರಿ 300 ವರ್ಷಗಳ ಇತಿಹಾಸ ಇರುವ ಬಲುಚರಿ ಸೀರೆಯನ್ನು ಸೋನಿಯಾ ಗಾಂಧಿ ಧರಿಸಿದ್ದರು. ರಾಜವೈಭದ ರೇಷ್ಮೆ ಸೀರೆಯ ಶುದ್ಧ ಮಾಲ್ಡಾ ರೇಷ್ಮೆಯಿಂದ ನೇಯ್ದ ಸೀರೆಯಾಗಿದೆ. ಇದು ಬನಾರಸಿ ಬಲುಚರಿ ಶೈಲಿಯ ಸೀರೆಯಾಗಿದೆ.

26
ರಾಜವೈಭವದ ಇತಿಹಾಸ

ಸೋನಿಯಾ ಗಾಂಧಿ ಧರಿಸಿದ ಬಲುಚರಿ ಸೀರೆ ಮಾಲ್ಡಾ ರೇಷ್ಮೆಯ ಬೂಟೆದಾರ್ ಸೀರೆ. ಗೋಲಾನಿ ತಂತ್ರಜ್ಞಾನ ಬಳಸಿ ಈ ಸೀರೆ ನೇಯ್ಗೆ ಕೆಲಸಗಳನ್ನು ಮಾಡಲಾಗಿದೆ. ಬಲುಚರಿ ಪಶ್ಚಿಮ ಬಂಗಾಳದ ವಿಶೇಷ ಕೈಮಗ್ಗ ಸೀರೆ ಇದಾಗಿದೆ. ಪಶ್ಚಿಮ ಬಂಗಾಳದಲ್ಲಿ ಬೆಳೆಯುಲ ಮಲ್ಬುರಿ ರೇಷ್ಮೆಯ ಉಣ್ಣೆಯಿಂದ ಈ ಸೀರೆ ತಯಾರಿಸಲಾಗುತ್ತದೆ. ಇನ್ನು ಸೀರೆಯ ಸೆರಗಿನಲ್ಲಿ ಸೂಕ್ಷ್ಮವಾದ ಬ್ರೋಕೇಡ್ ಕಸೂತಿ ಕೆಲಸ ಸ್ಪಷ್ಟವಾಗಿ ಕಾಣುತ್ತದೆ

36
ಬಲುಚರ್ ಪ್ರದೇಶದಿಂದ ಹುಟ್ಟಿದ ಹೆಸರು

1717ರಿಂದ 1727ರ ವರೆಗೆ ಬಂಗಾಳದ ನವಾಬ ಮುರ್ಷಿದ್ ಕುಲಿ ಖಾನ್ ಬಲುಚರಿ ಸೀರೆ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ತನ್ನ ರಾಜಧಾನಿಯನ್ನು ಢಾಕದಿಂದ ಮುರ್ಷಿದಾಬಾದ್‌ಗೆ ವರ್ಗಾಯಿಸಿದ್ದ. ಈ ವೇಳೆ ಢಾಕಾದ ನೇಕಾರರು ಬಲುಚರ್ ಪ್ರದೇಶಕ್ಕೆ ಬಂದು ನೆಲೆಸಿದರು. ಇಲ್ಲಿ ಹೊಸದಾಗಿ ಆರಂಭಗೊಂಡ ಸೀರೆಯೇ ಮುಂದೆ ಬಲುಚರ್ ಸೀರೆಯಾಗಿ ಖ್ಯಾತಿ ಪಡೆಯಿತು.

46
ವಿನ್ಯಾಸದಲ್ಲಿ ಹಲವು ವಿಶೇಷತೆಗಳಿವೆ

ಈ ಸೀರೆಯ ವಿನ್ಯಾಸ, ಅದರ ಮೇಲಿರುವ ಕಲೆಯಲ್ಲಿ ಕೆಲ ವಿಶೇಷತೆಗಳಿವೆ. ಎಲ್ಲಾ ಕಸೂತಿಗಳಲ್ಲಿ ಈ ಸೀರೆ ಉತ್ಪಾದನೆ ಇಲ್ಲ.ಪ್ರಮುಖವಾಗಿ ಮಾವಿನಕಾಯಿ ವಿನ್ಯಾಸ, ಹುಕ್ಕಾ ಸೇದುವ ಶ್ರೀಮಂತರು, ನವಾಬರ ಆಸ್ಥಾನದ ದೃಶ್ಯಗಳನ್ನು ಸೀರೆಗಳಲ್ಲಿ ದಾಖಿಸಲಾಗುತ್ತದೆ. 1757ರ ಪ್ಲಾಸಿ ಕದನದ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ತೆಕ್ಕೆಗೆ ಪಡೆದುಕೊಂಡಿತು.

56
ಕನ್ನಡಿ ನೋಡುತ್ತಾ ಸೀರೆ ನೇಯ್ಗೆ

ಬಲುಚರಿ ಸೀರೆ ವಿಶೇಷವಾಗಿ ಗಾಢ ಬಣ್ಣದಲ್ಲಿ ಲಭ್ಯವಿದೆ. ಕಡು ನೀಲಿ, ನೇರಳೆ, ಗಾಢ ಹಸಿರು, ಮೆರೂನ್ ಸೇರಿದಂತೆ ಇತರ ಕೆಲ ಬಣ್ಣಗಳಲ್ಲಿ ಈ ಸೀರೆ ಲಭ್ಯವಿದೆ. ಇದರಲ್ಲಿ ರೇಷ್ಮೆ ದಾರಗಳಿಂದಲೇ ಚಿತ್ರಕಲೆ ರೀತಿಯ ವಿನ್ಯಾಸದ ಸೆರಗುಗಳು ಲಭ್ಯವಿದೆ. ಇದನ್ನು ನೇಯ್ಗೆ ಮಾಡುವುದು ಕಠಿಣ ಕೆಲಸ. ಸೀರೆಯನ್ನು ಹಿಮ್ಮುಖವಾಗಿಟ್ಟು ಕನ್ನಡಿ ನೋಡುತ್ತಾ ನೇಯ್ಗೆ ಮಾಡುತ್ತಾರೆ.

66
ಬಂಕುರಾದ ಸೀರೆ ಮಾತ್ರ ಒರಿಜಿನಲ್

ಹಲವು ಭಾಗದಲ್ಲಿ ಬಲುಚರಿ ಸೀರೆ ಎಂದು ಉತ್ಪಾದನೆ ಮಾಡಲಾಗುತ್ತದೆ. ಆದರೆ 2011ರಲ್ಲಿ ಬಲುಚರಿ ಸೀರೆಗೆ ಜಿಐ ಟ್ಯಾಗ್ ಮಾನ್ಯತೆ ಸಿಕ್ಕಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ತಯಾರಾಗುವ ಸೀರೆ ಮಾತ್ರ ಬಲುಚರಿ ಒರಿಜಿನನ್ ಎಂದು ಮಾನ್ಯತೆ ಪಡೆದಿದೆ. ಹೀಗಾಗಿ ಬಲುಚರಿ ಎಂದರೆ ಎಲ್ಲಿ ತಯಾರಾಗಿದೆ ಎಂಬುದನ್ನು ಪರಿಶೀಲಿಸಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories