ಗದ್ದೆಯಿಂದ 100 ಕೆಜಿ ಭತ್ತ ತಂದು ಮಿಲ್‌ನಲ್ಲಿ ಅಕ್ಕಿ ಮಾಡಲು ಕೊಟ್ಟರೆ ಎಷ್ಟು ಕೆಜಿ ಅಕ್ಕಿ ಸಿಗುತ್ತೆ? ಇಷ್ಟೇ ಅಲ್ಲ ಬ್ರೌನ್ ರೈಸ್ ಮೊದಲು ತಯಾರಾಗುತ್ತೋ, ವೈಟ್ ರೈಸ್ ಮೊದಲೋ? ಈ ಕುತೂಹಲಗಳಿಗೆ ಇಲ್ಲಿದೆ ಉತ್ತರ.
ನಾವು ಪ್ರತಿನಿತ್ಯ ಊಟ ಮಾಡುವ ಅಕ್ಕಿ ರೈತ ಬೆಳೆದ ಬೆಳೆ. ಹೊಲದಲ್ಲಿ ರೈತ ಬಳೆದ ಭತ್ತವನ್ನು ತಂದು ರೈಸ್ ಮಿಲ್‌ಗೆ ನೀಡಿದರೆ ಅದರಿಂದ ಸಿಗುವ ಭತ್ರದಲ್ಲಿ ಭಾರಿ ವ್ಯತ್ಯಾಸವಾಗಲಿದೆ. ರೈತರಿಂದ ಭತ್ತವನ್ನು ಖರೀದಿಸಿದ ಬಳಿಕ ರೈಲ್ ಮಿಲ್‌ನಲ್ಲಿ ಸಂಸ್ಕರಣೆಯಾಗಿ ಶಾಪ್‌ಗಳಿಗೆ, ಮನೆ ಮನೆಗೆ ತಲುಪುವಾಗ ತೂಕದಲ್ಲಿ ವ್ಯತ್ಯಾಸವಾಗಲಿದೆ. ನಾವು ಖರೀದಿಸುವ ಅಕ್ಕಿ ಚೀಲ ಇಂತಿಷ್ಟು ಕೆಜಿ ಎಂದು ನಿಖರವಾಗಿರುತ್ತದೆ. ಆದರೆ 100 ಕೆಜಿ ಭತ್ತದಿಂದ ಸಂಸ್ಕರಣೆಯಾಗಿ ಬರವು ಅಕ್ಕಿ ಕಡಿಮೆ.
26
100 ಕೆಜಿ ಭತ್ತದಿಂದ ಸಿಗುವ ಅಕ್ಕಿ ಎಷ್ಟು
100 ಕೆಜಿ ಭತ್ತವನ್ನು ರೈಸ್ ಮಿಲ್‌ನಲ್ಲಿ ಸಂಸ್ಕರಣೆ ಮಾಡಲು ನೀಡಿದರೆ ಗರಿಷ್ಠ 65 ರಿಂದ 70 ಕೆಜಿ ಅಕ್ಕಿ ಮಾತ್ರ ಸಿಗಲಿದೆ. ಇನ್ನುಳಿದ 30 ರಿಂದ 33 ಕೆಜಿ ಅಕ್ಕಿ ಉಪ ಉತ್ಪನ್ನಗಳಾಗಿ, ತ್ಯಾಜ್ಯವಾಗುತ್ತದೆ.ಮಿಲ್‌ನಲ್ಲಿ ಹಲವು ಹಂತದ ಮೂಲಕ ಭತ್ತದಿಂದ ಅಕ್ಕಿ ಸಂಸ್ಕರಣೆ ಮಾಡಲಾಗುತ್ತದೆ. ಈ ಸಂಸ್ಕರಣೆಯಲ್ಲಿ ಭತ್ತದಲ್ಲಿರುವ ಹುಲ್ಲು, ಧೂಳು ಹಾಗೂ ಜೊಳ್ಳು ಕಾಳುಗಳು ಬೇರ್ಪಡಿಸಲಾಗುತ್ತದೆ. ಸಂಸ್ಕರಣೆ ವೇಳೆ ಸಣ್ಣ ಸಣ್ಣ ಕಲ್ಲುಗಳನ್ನು ಯಂತ್ರದ ಮೂಲಕ ಬೇರ್ಪಡಿಸಲಾಗುತ್ತದೆ.
36
ವೈಟ್ ರೈಸ್ ಮೊದಲೋ, ಬ್ರೌನ್ ರೈಸ್ ಮೊದಲೋ
ಭತ್ತದ ಹೊಟ್ಟು ತೆಗೆದಾಗ ಸಿಗುವುದು ವೈಟ್ ರೈಸ್ ಅಥವಾ ಬ್ರೌನ್ ರೈಸ್? ಈ ಪ್ರಶ್ನೆಗೆ ಅಚ್ಚರಿ ಉತ್ತರವಿದೆ. ಮೊದಲಿಗೆ ಸಿಗುವುದು ಬ್ರೌನ್ ರೈಸ್. ಭತ್ತದ ಹೊಟ್ಟು ತೆಗೆದಾಗ ಕೆಂಪು ಅಕ್ಕಿ ಲಭ್ಯವಾಗುತ್ತದೆ. ಬಳಿಕ ಈ ಕಂದು ಬಣ್ಣದ ಅಕ್ಕಿಯನ್ನು ಪಾಲಿಶ್ ಮಾಡಲಾಗುತ್ತದೆ. ಕಂದು ಬಣ್ಣದ ಅಕ್ಕಿಯ ಮೇಲಿನ ತವುಡು ತೆಗೆದು ಪಾಲಿಶ್ ಮಾಡಿದಾಗ ಬಿಳಿ ಅಕ್ಕಿ ಲಭ್ಯವಾಗುತ್ತದೆ.
ಭತ್ತದ ಹೊಟ್ಟು ತೆಗೆದಾಗ 100 ಕೆಜಿಯಲ್ಲಿ ಸುಮಾರು 20 ಕೆಜಿ ಕಡಿಮೆಯಾಗುತ್ತದೆ. ಬ್ರೌನ್ ರೈಸ್‌ನ ಪಾಲಿಶ್ ಮಾಡಿ ವೈಟ್ ರೈಸ್ ಮಾಡಿದಾಗ 8 ರಿಂದ 10 ಕೆಜಿ ಕಡಿಮೆಯಾಗುತ್ತದೆ. ಇನ್ನು ಹಾಳಾದ ಕಾಳುಗಳು, ನುಚ್ಚು ಬೇರ್ಪಡಿಸಿದಾಗ ಮತ್ತೆ ತೂಕ ಕಡಿಮೆಯಾಗುತ್ತದೆ. ಪ್ರತಿ ಸಂಸ್ಕರಣೆಯಲ್ಲೂ ತೂಕ ಕಡಿಮೆಯಾಗಿ 65 ರಿಂದ 70 ಕೆಜಿ ಅಕ್ಕಿ ಲಭ್ಯವಾಗುತ್ತದೆ. ಸರ್ಕಾರಿ ಖರೀದಿ ನಿಯಮದಲ್ಲಿ ಪ್ರತಿ 100 ಕೆಜಿ ಭತ್ತಕ್ಕೆ ಸರಾಸರಿ 67 ಕೆಜಿ ಎಂದು ನಿಗದಿಪಡಿಸಲಾಗಿದೆ.
56
30 ರಿಂದ 35 ಕೆಜಿ ತ್ಯಾಜ್ಯ ಉತ್ಪನ್ನಕ್ಕೆ ಭಾರಿ ಬೇಡಿಕೆ
ಭತ್ತದಿಂದ ತೆಗೆಯುವ ಪ್ರತಿಯೊಂದು ತ್ಯಾಜ್ಯ ಹಾಗೂ ಉಪ ಉತ್ಪನ್ನಕ್ಕೆ ಬೇಡಿಕೆ ಇದೆ. ಭತ್ತದ ಹೊಟ್ಟನ್ನು ಕಾರ್ಖಾನೆಗಳಲ್ಲಿ ಬಾಯ್ಲರ್‌ಗಳಲ್ಲಿ, ಇಟ್ಟಿಗೆ ಫ್ಯಾಕ್ಟರಿಗಳಲ್ಲಿ ಸೇರಿದಂತೆ ಹಲವೆಡೆ ಇಂಧನವಾಗಿ ಬಳಸಲಾಗುತ್ತದೆ. ಕೋಳಿ ಫಾರಂಗಳಲ್ಲಿ ನೆಲದ ಮೇಲೆ ಹಾಸರು ಇದೇ ಹೊಟ್ಟನ್ನು ಬಳಸುತ್ತಾರೆ. ಪ್ರತಿ ಕೆಜಿಗೆ ಇಂತಿಷ್ಟು ಎಂದು ರೈಸ್ ಮಿಲ್ ಈ ಹೊಟ್ಟನ್ನು ಮಾರಾಟ ಮಾಡುತ್ತದೆ.
66
ಬ್ರೌನ್ ರೈಸ್ ಎಣ್ಣೆ
ಇನ್ನು ನುಚ್ಚು ಅಕ್ಕಿಯನ್ನು ಕೋಳಿ ಹಾಗೂ ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಇನ್ನು ಪಾಲಿಶ್ ಮಾಡುವಾಗ ಸಿಗುವ ತವುಡಿನಿಂದ ಬ್ರೌನ್ ರೈಸ್ ಎಣ್ಣೆ ತಯಾರಿಸಲಾಗುತ್ತದೆ. ಬ್ರೌನ್ ರೈಸ್ ಎಣ್ಣೆಗೆ ಭಾರಿ ಬೇಡಿಕೆ ಮಾತ್ರವಲ್ಲ, ದುಬಾರಿ ಬೆಲೆ ಇದೆ. ಹೀಗಾಗಿ ಅಕ್ಕಿಯಿಂದ ಕೆಲ ಉತ್ಪನ್ನಗಳು ಹಾಗೂ ತಾಜ್ಯಕ್ಕೂ ಭಾರಿ ಬೇಡಿಕೆ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.