ಮಳೆಗಾಲದಲ್ಲಿ ಮನೆಗೆ ಹಾವುಗಳು ಬರಲು ಇವೇ ಮುಖ್ಯ ಕಾರಣ! ಈ ವಸ್ತುಗಳ ವಾಸನೆಗೆ ಆಕರ್ಷಿತವಾಗುತ್ತವೆ

Published : Sep 13, 2026, 02:23 PM IST

ಮಳೆಗಾಲ ಆರಂಭವಾದಾಗ ಹಾವುಗಳು ಮನೆ, ಗ್ಯಾರೇಜ್, ತೋಟ ಸೇರಿದಂತೆ ಜನವಸತಿ ಪ್ರದೇಶಗಳಿಗೆ ಬರುವ ಘಟನೆಗಳು ಹೆಚ್ಚಾಗುತ್ತವೆ. ಮಳೆ ಮತ್ತು ತೇವಾಂಶದಿಂದ ಹಾವುಗಳಿಗೆ ಆಶ್ರಯ ಸಿಗುವುದರ ಜೊತೆಗೆ, ಮನೆಯ ಸುತ್ತಮುತ್ತ ಇರುವ ಕೆಲವು ವಸ್ತುಗಳು ಅವುಗಳ ಬೇಟೆಯನ್ನು ಆಕರ್ಷಿಸಬಹುದು.

PREV
15
ಮಳೆಗಾಲದಲ್ಲಿ ಮನೆಗೆ ಹಾವು

ಮಳೆಗಾಲ ಆರಂಭವಾದಾಗ ಹಾವುಗಳು ಮನೆ, ಗ್ಯಾರೇಜ್, ತೋಟ ಸೇರಿದಂತೆ ಜನವಸತಿ ಪ್ರದೇಶಗಳಿಗೆ ಬರುವ ಘಟನೆಗಳು ಹೆಚ್ಚಾಗುತ್ತವೆ. ಮಳೆ ಮತ್ತು ತೇವಾಂಶದಿಂದ ಹಾವುಗಳಿಗೆ ಆಶ್ರಯ ಸಿಗುವುದರ ಜೊತೆಗೆ, ಮನೆಯ ಸುತ್ತಮುತ್ತ ಇರುವ ಕೆಲವು ವಸ್ತುಗಳು ಅವುಗಳ ಬೇಟೆಯನ್ನು ಆಕರ್ಷಿಸಬಹುದು. ಹೀಗಾಗಿ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ.

ಹಾವುಗಳು ಸಾಮಾನ್ಯವಾಗಿ ಆಹಾರ ಮತ್ತು ಸುರಕ್ಷಿತ ಅಡಗುದಾಣವನ್ನು ಹುಡುಕುತ್ತವೆ. ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಇಲಿಗಳು, ಕಪ್ಪೆಗಳು, ಹಲ್ಲಿಗಳು ಸೇರಿದಂತೆ ಸಣ್ಣ ಜೀವಿಗಳು ಹೆಚ್ಚಾದರೆ, ಅವುಗಳನ್ನು ಹಿಂಬಾಲಿಸಿ ಹಾವುಗಳು ಕೂಡ ಅಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

25
ತೆರೆದಿಟ್ಟ ಆಹಾರ ಮತ್ತು ಆಹಾರದ ತ್ಯಾಜ್ಯ

ಮನೆಯಲ್ಲೇ ತೆರೆದಿಟ್ಟ ಆಹಾರ, ಉಳಿದ ಊಟ ಅಥವಾ ಕಸದ ಅವಶೇಷಗಳು ಮೊದಲು ಇಲಿಗಳು ಹಾಗೂ ಇತರ ಸಣ್ಣ ಜೀವಿಗಳನ್ನು ಆಕರ್ಷಿಸಬಹುದು. ಇಂತಹ ಜೀವಿಗಳ ಉಪಸ್ಥಿತಿ ಹಾವುಗಳಿಗೆ ಆಹಾರದ ಮೂಲವಾಗಬಹುದು. ಆದ್ದರಿಂದ ಊಟದ ನಂತರ ಉಳಿದ ಆಹಾರವನ್ನು ತೆರೆದಿಡದೆ, ಕಸವನ್ನು ಕೂಡಲೇ ವಿಲೇವಾರಿ ಮಾಡುವುದು ಉತ್ತಮ.

ಸಾಕುಪ್ರಾಣಿಗಳ ಆಹಾರ

ಪಕ್ಷಿಗಳಿಗೆ ಹಾಕುವ ಕಾಳು, ಕೋಳಿ ಆಹಾರ ಅಥವಾ ಇತರ ಸಾಕುಪ್ರಾಣಿಗಳ ದಾಣ್ಯಗಳು ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಇಲಿಗಳು, ಕೀಟಗಳು ಮತ್ತು ಇತರ ಸಣ್ಣ ಜೀವಿಗಳು ಬರಬಹುದು. ಇದರಿಂದ ಹಾವುಗಳು ಬರುವ ಸಾಧ್ಯತೆಯೂ ಹೆಚ್ಚಾಗಬಹುದು.

35
ಮನೆಯ ಸುತ್ತಮುತ್ತ ನೀರು ನಿಲ್ಲುವುದು

ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ನೀರು ನಿಂತಿದ್ದರೆ ತೇವಾಂಶ ಹೆಚ್ಚಾಗುತ್ತದೆ. ಚಳಿ ಮತ್ತು ತೇವದ ಪ್ರದೇಶಗಳು ಕೆಲವು ಹಾವುಗಳಿಗೆ ಆಶ್ರಯವಾಗಬಹುದು. ಹೀಗಾಗಿ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ.

ಒಣ ಎಲೆಗಳು, ಕಸ ಮತ್ತು ಮರದ ರಾಶಿ

ಮನೆಯ ಹಿಂಭಾಗ ಅಥವಾ ತೋಟದಲ್ಲಿ ಒಣ ಎಲೆಗಳು, ಮರದ ತುಂಡುಗಳು, ಹಳೆಯ ವಸ್ತುಗಳು ಮತ್ತು ಕಸದ ರಾಶಿಯನ್ನು ಹಾಗೆಯೇ ಬಿಟ್ಟರೆ ಅವು ಹಾವುಗಳಿಗೆ ಅಡಗಿಕೊಳ್ಳಲು ಸೂಕ್ತ ಸ್ಥಳವಾಗಬಹುದು. ಇಂತಹ ಪ್ರದೇಶಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ.

45
ಮೊಟ್ಟೆಗಳಿರುವ ಪ್ರದೇಶ

ಮನೆಯ ಸುತ್ತಮುತ್ತ ಪಕ್ಷಿಗಳ ಗೂಡು ಅಥವಾ ಕೋಳಿಗಳನ್ನು ಸಾಕುತ್ತಿದ್ದರೆ ಅಲ್ಲಿ ಮೊಟ್ಟೆಗಳು ಮತ್ತು ಆಹಾರದ ವಾಸನೆ ಇರಬಹುದು. ಇಂತಹ ಪ್ರದೇಶಗಳಲ್ಲಿ ಸಣ್ಣ ಜೀವಿಗಳು ಕೂಡ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ಹಾವುಗಳು ಅತ್ತ ಬರಬಹುದು.

55
ಹಾವುಗಳು ಮನೆಗೆ ಬರದಂತೆ ಏನು ಮಾಡಬೇಕು?

ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ. ಉಳಿದ ಆಹಾರ ಮತ್ತು ಕಸವನ್ನು ತೆರೆದಿಡಬೇಡಿ. ಸಾಕುಪ್ರಾಣಿಗಳ ಆಹಾರವನ್ನು ನೆಲದಲ್ಲಿ ಚೆಲ್ಲದಂತೆ ನೋಡಿಕೊಳ್ಳಿ. ಮಳೆನೀರು ನಿಲ್ಲದಂತೆ ವ್ಯವಸ್ಥೆ ಮಾಡಿ. ತೋಟದಲ್ಲಿರುವ ಒಣ ಎಲೆಗಳು, ಕಸ ಮತ್ತು ಮರದ ರಾಶಿಯನ್ನು ತೆರವುಗೊಳಿಸಿ.

ಮನೆಯ ಬಾಗಿಲು, ಕಿಟಕಿ, ಚರಂಡಿ ಅಥವಾ ಗೋಡೆಯ ಸಣ್ಣ ಬಿರುಕುಗಳಿದ್ದರೆ ಅವುಗಳನ್ನು ಪರಿಶೀಲಿಸಿ ಮುಚ್ಚುವುದು ಕೂಡ ಸಹಾಯಕ.

ಮುಖ್ಯವಾಗಿ, ಮನೆಯಲ್ಲಿ ಹಾವು ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಸುರಕ್ಷಿತ ಅಂತರ ಕಾಯ್ದುಕೊಂಡು ಸ್ಥಳೀಯ ಹಾವು ರಕ್ಷಣಾ ತಂಡ ಅಥವಾ ತರಬೇತಿ ಪಡೆದ ರೆಸ್ಕ್ಯೂ ಸಿಬ್ಬಂದಿಯ ನೆರವು ಪಡೆಯುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories