ಮಳೆಗಾಲದಲ್ಲಿ ಮರಿ ಹಾವುಗಳದ್ದೇ ದರ್ಬಾರ್! ನೋಡಲು ಚಿಕ್ಕದಾದ್ರೂ ಕ್ಷಣಾರ್ಧದಲ್ಲಿ ಜೀವ ತೆಗೆಯುತ್ತವೆ ಹುಷಾರ್

Published : Jul 03, 2026, 10:31 PM IST

Baby snake venom facts: ಮಳೆಗಾಲದಲ್ಲಿ ಹಾವಿನ ಮರಿ ಕಾಟ ಹೆಚ್ಚಾಗಿರುತ್ತದೆ. ಅನೇಕರು 'ಸಣ್ಣ ಹಾವಿನ ಮರಿ ತಾನೇ, ಅದರಲ್ಲಿ ವಿಷ ಏನಿರುತ್ತೆ' ಎಂಬ ಉಡಾಫೆ ಮಾತಾಡುತ್ತಾರೆ. ಆದರೆ, ಹಾವಿನ ಮರಿಗಳು ಮೊಟ್ಟೆಯಿಂದ ಹೊರಬಂದ ಕ್ಷಣದಿಂದಲೇ ಎಷ್ಟು ವಿಷಕಾರಿಯಾಗಿರುತ್ತವೆ ಎಂಬ ಸತ್ಯ ತಿಳಿದರೆ ಆಶ್ಚರ್ಯಪಡ್ತೀರಾ.

PREV
15
ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಆಘಾತಕಾರಿ ಸತ್ಯಗಳು

ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಆಘಾತಕಾರಿ ಸತ್ಯಗಳು
"ಸಣ್ಣ ಹಾವಿನ ಮರಿ ತಾನೇ, ಇದಕ್ಕೆ ವಿಷ ಎಲ್ಲಿರುತ್ತೆ? ಕಚ್ಚಿದ್ರೂ ದೊಡ್ಡದಾಗಿ ಏನೂ ಆಗಲ್ಲ" ಎಂದು ನೀವು ಅಂದುಕೊಂಡಿದ್ದರೆ ಅದು ನಿಮ್ಮ ಜೀವಕ್ಕೇ ಸಂಚಕಾರ ತರಬಲ್ಲ ದೊಡ್ಡ ತಪ್ಪು. ಹಾವಿನ ಮರಿಗಳು ಮೊಟ್ಟೆಯಿಂದ ಹೊರಬಂದ ಮರುಕ್ಷಣದಿಂದಲೇ ಎಷ್ಟು ಅಪಾಯಕಾರಿ ಎಂಬ ಸತ್ಯ ತಿಳಿದರೆ ನೀವು ಖಂಡಿತ ಬೆಚ್ಚಿಬೀಳ್ತೀರಾ. ವಿಶೇಷವಾಗಿ ಮಳೆಗಾಲದಲ್ಲಿ ಹಾವಿನ ಮರಿಗಳ ಸಂಚಾರ ಹೆಚ್ಚಿರುವುದರಿಂದ, ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಆಘಾತಕಾರಿ ಸತ್ಯಗಳು ಇಲ್ಲಿವೆ.

25
ಹುಟ್ಟಿದ ಕ್ಷಣದಿಂದಲೇ ಇವು ಅತ್ಯಂತ ಅಪಾಯಕಾರಿ!

ಹುಟ್ಟಿದ ಕ್ಷಣದಿಂದಲೇ ಇವು ಅತ್ಯಂತ ಅಪಾಯಕಾರಿ!
ಹಾವಿನ ಮರಿಗಳಿಗೆ ಚಿಕ್ಕ ವಯಸ್ಸಿನಲ್ಲಿ ವಿಷ ಇರುವುದಿಲ್ಲ ಅಥವಾ ಕಚ್ಚಿದರೂ ತೀವ್ರತೆ ಕಡಿಮೆ ಇರುತ್ತದೆ ಎನ್ನುವುದು ಕೇವಲ ಭ್ರಮೆ. ನಾಗರಹಾವು ಅಥವಾ ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯಿಂದ ಹೊರಬಂದ ತಕ್ಷಣವೇ ಪೂರ್ಣ ಪ್ರಮಾಣದ ವಿಷದ ಹಲ್ಲುಗಳನ್ನು ಹೊಂದಿರುತ್ತವೆ. 'ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿ'ಯಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಸ್ಪಷ್ಟಪಡಿಸುವಂತೆ, ಮರಿ ಹಾವುಗಳು ಹುಟ್ಟಿದ ಮೊದಲ ದಿನದಿಂದಲೇ ಕಚ್ಚುವ ಮತ್ತು ಪ್ರಾಣ ತೆಗೆಯುವ ಸಾಮರ್ಥ್ಯವನ್ನು ಹೊಂದಿರುತ್ತವೆ.

35
ದೊಡ್ಡ ಹಾವಿನ ವಿಷದಷ್ಟೇ ಪವರ್‌ಫುಲ್!

ದೊಡ್ಡ ಹಾವಿನ ವಿಷದಷ್ಟೇ ಪವರ್‌ಫುಲ್!
ಸಂಶೋಧನೆಗಳ ಪ್ರಕಾರ, ಈಗಷ್ಟೇ ಹುಟ್ಟಿದ ಹಾವಿನ ಮರಿಯ ವಿಷವು ದೊಡ್ಡ ಹಾವಿನ ವಿಷದಷ್ಟೇ ಶಕ್ತಿಯುತವಾಗಿರುತ್ತದೆ. ಹಾವಿನ ವಯಸ್ಸು ಹೆಚ್ಚಾದಂತೆ ವಿಷದ ಗುಣಮಟ್ಟ ಬದಲಾಗುವುದಿಲ್ಲ, ಕೇವಲ ಶೇಖರಣೆಯಾಗುವ ವಿಷದ ಪ್ರಮಾಣ ಮಾತ್ರ ಹೆಚ್ಚಾಗುತ್ತದೆ. ಹಾವಿನ ಮರಿಗಳು ಗಾತ್ರದಲ್ಲಿ ಚಿಕ್ಕದಾಗಿರಬಹುದು, ಆದರೆ ಅವುಗಳ ವಿಷವು ಮನುಷ್ಯನ ನರಮಂಡಲವನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಬಲ್ಲದು. ಇವು ಚಿಕ್ಕದಾಗಿರುವುದರಿಂದ ನಿಮ್ಮ ಗಮನಕ್ಕೆ ಬರುವುದು ಕಷ್ಟ, ಆದರೆ ಇವು ಕ್ಷಣಾರ್ಧದಲ್ಲಿ ತನ್ನ ಹೆಡೆಯನ್ನು ಬಿಚ್ಚಿ ಕಚ್ಚಬಲ್ಲವು.

45
ಸಂಶೋಧನೆಗಳು ಏನು ಹೇಳುತ್ತವೆ?

ಸಂಶೋಧನೆಗಳು ಏನು ಹೇಳುತ್ತವೆ?
"ಮರಿ ಹಾವುಗಳಿಗೆ ತಮ್ಮ ವಿಷವನ್ನು ನಿಯಂತ್ರಿಸಲು ಬರುವುದಿಲ್ಲ, ಹಾಗಾಗಿ ಅವು ಕಚ್ಚಿದಾಗ ದೇಹದಲ್ಲಿರುವ ಎಲ್ಲಾ ವಿಷವನ್ನು ಒಮ್ಮೆಲೇ ಹರಿಸುತ್ತವೆ" ಎಂದು ಜನ ನಂಬುತ್ತಾರೆ. ಆದರೆ 'ಲೋಮಾ ಲಿಂದಾ ವಿಶ್ವವಿದ್ಯಾಲಯ' ನಡೆಸಿದ ಅಧ್ಯಯನವು ಈ ವಾದವನ್ನು ಸುಳ್ಳೆಂದು ಸಾಬೀತುಪಡಿಸಿದೆ. ಹಾವಿನ ಮರಿಗಳು ಕೂಡ ವಿಷದ ಮೇಲೆ ನಿಯಂತ್ರಣ ಹೊಂದಿರುತ್ತವೆ. ಆದರೂ, ಅವುಗಳ ಕಡಿತವು ಅತ್ಯಂತ ಗಂಭೀರವಾದ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣದ ಚಿಕಿತ್ಸೆ ಅಗತ್ಯವಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

55
ಹಾವಿನ ಮರಿ ಕಂಡರೆ ಏನು ಮಾಡಬೇಕು?

ಹಾವಿನ ಮರಿ ಕಂಡರೆ ಏನು ಮಾಡಬೇಕು?
ಗಾಬರಿಯಾಗಬೇಡಿ, ನಿಧಾನವಾಗಿ ಹಿಂದಕ್ಕೆ ಸರಿಯಿರಿ: ಹಾವು ಅಥವಾ ಮರಿ ಕಂಡರೆ ಅಕಸ್ಮಾತ್ ಚಲಿಸಬೇಡಿ ಅಥವಾ ಓಡಬೇಡಿ. ಅದು ತನ್ನ ಆತ್ಮರಕ್ಷಣೆಗಾಗಿ ನಿಮ್ಮ ಮೇಲೆ ದಾಳಿ ಮಾಡಬಹುದು. ನಿಧಾನವಾಗಿ ಹಿಂದಕ್ಕೆ ಸರಿಯುತ್ತಾ ಹಾವಿನ ಚಲನೆಯ ಮೇಲೆ ಕಣ್ಣಿಡಿ.

ಮಕ್ಕಳನ್ನು ದೂರವಿಡಿ: ಮನೆಯಲ್ಲಿ ಅಥವಾ ಅಂಗಳದಲ್ಲಿ ಮರಿ ಹಾವು ಕಂಡರೆ ತಕ್ಷಣ ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ಆ ಜಾಗದಿಂದ ದೂರ ಕರೆದೊಯ್ಯಿರಿ.

ಸ್ವತಃ ಹಿಡಿಯಲು ಪ್ರಯತ್ನಿಸಬೇಡಿ: ಸಣ್ಣ ಮರಿ ತಾನೇ ಎಂದು ನೀವೇ ಅದನ್ನು ಹಿಡಿಯಲು, ಕೊಲ್ಲಲು ಅಥವಾ ಅಟ್ಟಲು ಹೋಗಬೇಡಿ. ಬಹುತೇಕ ಹಾವು ಕಡಿತದ ಘಟನೆಗಳು ಇಂತಹ ಸಾಹಸಗಳಿಂದಲೇ ನಡೆಯುತ್ತವೆ.

ರಾಸಾಯನಿಕ ಹಾಕಬೇಡಿ: ಹಾವಿನ ಬಿಲಗಳಿಗೆ ಫಿನಾಯಿಲ್ ಅಥವಾ ಸೀಮೆಎಣ್ಣೆ ಸುರಿಯಬೇಡಿ. ಇದರಿಂದ ಹಾವು ಹದ್ದುಬಸ್ತಿಗೆ ಬರುವ ಬದಲು ಆಕ್ರಮಣಕಾರಿಯಾಗಿ ನಿಮ್ಮ ಮೇಲೆ ಎರಗುವ ಸಾಧ್ಯತೆ ಇರುತ್ತದೆ.

ತಜ್ಞರಿಗೆ ತಿಳಿಸಿ: ಹಾವಿನ ಮರಿಗಳು ಒಂದೇ ಕಡೆ ಸಮೂಹವಾಗಿ ಇರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ನೇಕ್ ರೆಸ್ಕ್ಯೂಯರ್ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories