ಮದುವೆಯಲ್ಲಿ ಪುಟಾಣಿಗಳ ಕೈ ತುಂಬಾ ಮೆಹಂದಿ ಚಿತ್ತಾರ, ಮಗಳಿಗೆ 10+ ಕ್ಯೂಟ್ ಡಿಸೈನ್ಸ್

Published : Jun 20, 2026, 09:37 PM IST

ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ಮೆಹಂದಿ ಹಾಕಿಸಿಕೊಳ್ಳುವುದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹಸಿರು ಮೆಹಂದಿ ಅಂಗೈಯಲ್ಲಿ ಕೆಂಪಾಗಿ ಅರಳಿದಾಗ ಅವರ ಮುಖದಲ್ಲಿ ಕಾಣುವ ಖುಷಿಯೇ ಬೇರೆ. ಮಕ್ಕಳಿಗಾಗಿ ಇಲ್ಲಿ 10+ ಸಿಂಪಲ್ ಮೆಹಂದಿ ಡಿಸೈನ್‌ಗಳನ್ನು ನೀಡಲಾಗಿದೆ.

PREV
16
10+ ಮೆಹಂದಿ ಡಿಸೈನ್‌ಗಳು

ಮದುವೆ ಸೀಸನ್‌ನಲ್ಲಿ ಮಕ್ಕಳು ಕೈಗೆ ಮೆಹಂದಿ ಹಾಕದೇ ಇರುತ್ತಾರಾ? ಅದರಲ್ಲೂ ಮಾವನ ಮದುವೆ ಅಂದ್ರೆ ಸೋದರಳಿಯ, ಸೋದರಳಿಯೆಯರ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಇಂತಹ ಸಮಯದಲ್ಲಿ ಪುಟಾಣಿ ಮಕ್ಕಳಿಗಾಗಿ ಸಿಂಪಲ್, ಕ್ಯೂಟ್ ಹಾಗೂ ಬೇಗನೆ ಹಾಕಬಹುದಾದ 10+ ಮೆಹಂದಿ ಡಿಸೈನ್‌ಗಳು ಇಲ್ಲಿವೆ. ನೀವೂ ಸುಲಭವಾಗಿ ಇದನ್ನು ಟ್ರೈ ಮಾಡಬಹುದು.

26
ಚಂದಿರನ ಮೆಹಂದಿ ಡಿಸೈನ್ಸ್

ಪುಟ್ಟ ಮಕ್ಕಳ ಅಂಗೈ ಮೇಲೆ ಚಂದಿರನ ಮೆಹಂದಿ ಡಿಸೈನ್ ತುಂಬಾ ಕ್ಯೂಟ್ ಆಗಿ ಕಾಣುತ್ತೆ. ಕೈಯ ಮುಂಭಾಗ ಮತ್ತು ಹಿಂಭಾಗ ಎರಡಕ್ಕೂ ಈ ಡಿಸೈನ್ ಹಾಕಬಹುದು. ಚಂದಿರನ ಜೊತೆ ಎಲೆ ಮತ್ತು ಹೂವಿನ ಕಾಂಬಿನೇಷನ್ ಒಂದೆಡೆಯಾದ್ರೆ, ಇನ್ನೊಂದರಲ್ಲಿ ಚಂದಿರನ ಜೊತೆ ನಕ್ಷತ್ರಗಳಿವೆ. ಎರಡೂ ಡಿಸೈನ್‌ಗಳು ತುಂಬಾ ಸುಲಭವಾಗಿದ್ದು, ನೀವೇ ಅವರ ಕೈಗಳಿಗೆ ಹಾಕಬಹುದು.

36
ಕಾರ್ಟೂನ್ ಮೆಹಂದಿ ಡಿಸೈನ್ಸ್

ಗೊಂಬೆ ಅಥವಾ ಚಿಟ್ಟೆಯಂತಹ ಕಾರ್ಟೂನ್ ಮೆಹಂದಿ ಡಿಸೈನ್‌ಗಳನ್ನು 5-7 ವರ್ಷದ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಅವರ ಅಂಗೈ ಮೇಲೆ ಇಂತಹ ಸಿಂಪಲ್ ಮೆಹಂದಿ ಡಿಸೈನ್ ಹಾಕಿ ಅವರನ್ನು ಖುಷಿಪಡಿಸಬಹುದು. ಅವರು ಎಲ್ಲೆಡೆ ಇದನ್ನು ತೋರಿಸಿಕೊಂಡು ಓಡಾಡುತ್ತಾರೆ.

46
ಹೂವಿನ ಪ್ಯಾಟರ್ನ್ ಮೆಹಂದಿ ಡಿಸೈನ್ಸ್

ನಿಮ್ಮ ಪುಟಾಣಿ ಮಗಳಿಗೆ ಕೈತುಂಬಾ ಮೆಹಂದಿ ಬೇಕೆಂದರೆ, ಈ ಹೂವಿನ ಪ್ಯಾಟರ್ನ್ ಡಿಸೈನ್ ಹಾಕಬಹುದು. ಇದನ್ನು ಚಿಕ್ಕ ಚಿಕ್ಕ ಹಾರ್ಟ್ ಶೇಪ್, ಸಣ್ಣ ಬೂಟಿಗಳಿಂದ ಅಲಂಕರಿಸಬಹುದು. ಇಲ್ಲಿ ನೀಡಿರುವ ಎರಡು ಡಿಸೈನ್‌ಗಳು ಮದುವೆ ಸಮಾರಂಭಗಳಿಗೆ ಪರ್ಫೆಕ್ಟ್ ಆಗಿ ಹೊಂದುತ್ತವೆ.

56
ಚಿಟ್ಟೆ, ಹಾರ್ಟ್ ಶೇಪ್ ಮತ್ತು ಫ್ಲೋರಲ್ ಡಿಸೈನ್ಸ್

ಕೈ ತುಂಬಾ ಹಗುರವಾದ ಮೆಹಂದಿ ಡಿಸೈನ್ ಹಾಕಬೇಕಿದ್ದರೆ, ಈ ಎರಡು ಪ್ಯಾಟರ್ನ್‌ಗಳನ್ನು ನೋಡಬಹುದು. ಚಿಟ್ಟೆ, ಚುಕ್ಕಿ ಮತ್ತು ಹಾರ್ಟ್ ಶೇಪ್ ಕಾಂಬಿನೇಷನ್‌ನಿಂದ ಮಾಡಿದ ಈ ಮೆಹಂದಿ ಡಿಸೈನ್‌ಗಳು ಕೈಯ ಮುಂಭಾಗ ಮತ್ತು ಹಿಂಭಾಗ ಎರಡಕ್ಕೂ ಚೆನ್ನಾಗಿ ಕಾಣುತ್ತವೆ.

66
ಅರೇಬಿಕ್ ಮೆಹಂದಿ ಡಿಸೈನ್ಸ್

ಸಿಂಪಲ್ ಬಳ್ಳಿ ಡಿಸೈನ್ ಮೆಹಂದಿ ಕೈಗಳಿಗೆ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ನಿಮ್ಮ ಪುಟ್ಟ ರಾಜಕುಮಾರಿಯ ಅಂಗೈಗೆ ಈ ಎರಡೂ ಡಿಸೈನ್‌ಗಳು ಪರ್ಫೆಕ್ಟ್ ಆಗಿ ಹೊಂದುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories