ನಟಿ ಶಿಲ್ಪಾ ಶೆಟ್ಟಿ 10 ವರ್ಷದ ಮಗ ವಿಯಾನ್ ಜೊತೆಗೆ ಕಾಣಿಸಿಕೊಂಡಿರುವ ಅಪರೂಪದ ವಿಡಿಯೋ ವೈರಲ್ ಆಗಿದೆ. ತಮ್ಮ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ನಟಿ.
ನಟಿ ಶಿಲ್ಪಾ ಶೆಟ್ಟಿ ಎಂದರೇನೇ ವಯಸ್ಸೇ ಆಗದ ನಟಿಯ ಪೈಕಿ ಒಬ್ಬರು ಎಂದು ಗುರುತಿಸಿಕೊಳ್ಳುವವರು. ಕಳೆದ ಜೂನ್ಗೆ ನಟಿಗೆ 51 ವರ್ಷ ಮುಗಿದಿದೆ. ಇದರ ಹೊರತಾಗಿಯೂ ನಟಿ ಇನ್ನೂ 25-30ರ ಚೆಲುವೆಯಂತೆ ಕಂಗೊಳಿಸುತ್ತಾರೆ. ಮೇಕಪ್ಗಿಂತಲೂ ಹೆಚ್ಚಾಗಿ ನಟಿಯ ಸೌಂದರ್ಯದ ರಹಸ್ಯ ಡಯೆಟ್ ಜೊತೆ ಯೋಗ ಮತ್ತು ಧ್ಯಾನ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ಮದುವೆಗೆ ಈಗ 17 ವರ್ಷಗಳ ಸಂಭ್ರಮ. 2009ರಲ್ಲಿ ಮದುವೆಯಾಗಿದ್ದ ಜೋಡಿ 2012 ರಲ್ಲಿ ತಮ್ಮ ಮೊದಲ ಮಗು ವಿಯಾನ್‌ಗೆ ಅಪ್ಪ-ಅಮ್ಮ ಆದರು. ವಿಯಾನ್‌ಗೆ ಈಗ 14 ವರ್ಷ. ಬಳಿಕ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸಮೀಶಾ ಎಂಬ ಮಗಳನ್ನು ದಂಪತಿ ಪಡೆದುಕೊಂಡಿದ್ದಾರೆ. ಈ ಪುಟಾಣಿಗೆ ಈಗ ಆರು ವರ್ಷ ವಯಸ್ಸು.
26
ಮಗನ ಜೊತೆ ವಿಡಿಯೋ
ಶಿಲ್ಪಾ ಶೆಟ್ಟಿ ಅವರು ಮಕ್ಕಳ ಜೊತೆ ಓಪನ್ ಆಗಿ ಕಾಣಿಸಿಕೊಳ್ಳುವುದು ಅಪರೂಪ. ಕೆಲ ದಿನಗಳ ಹಿಂದೆ ಅವರು ಮಗಳ ಜೊತೆ ಕಾಣಿಸಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಅವರು ಮಗ ವಿಯಾನ್ ಜೊತೆ ಕಾಣಿಸಿಕೊಂಡಿದ್ದು, ಇದರ ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
36
10ನೇ ವಯಸ್ಸಲ್ಲೇ ಉದ್ಯಮಿ
ಅಂದಹಾಗೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮಗ ವಿಯಾನ್ ತನ್ನ 10ನೇ ವಯಸ್ಸಿನಲ್ಲಿಯೇ ಬಿಜಿನೆಸ್ ಪ್ರಾರಂಭಿಸಿದ್ದಾನೆ. ಶಿಲ್ಪಾ ಅವರು ಈ ಕುರಿತು ಅಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ತನ್ನ ಮಗನ ಸ್ಟಾರ್ಟ್ಅಪ್ ಕಲ್ಪನೆಯನ್ನು ಘೋಷಿಸುವ ಮತ್ತು ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನೀಕರ್ಸ್ ಜೋಡಿಯನ್ನು ಪ್ರದರ್ಶಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.
ವಿಯಾನ್ 4,999 ರೂಪಾಯಿಂದ ಪ್ರಾರಂಭವಾಗುವ VR KICKSS ಹೆಸರಿನಲ್ಲಿ ಕಸ್ಟಮೈಸ್ ಮಾಡಿದ ಸರಕುಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಲ್ಪಾ "ನನ್ನ ಮಗ ವಿಯಾನ್ ರಾಜ್, ಬಿಜಿನೆಸ್ ಆರಂಭಿಸಿದ್ದಾನೆ. ಪುಟ್ಟ ಮಕ್ಕಳು ಮತ್ತು ಅವರ ದೊಡ್ಡ ಕನಸುಗಳನ್ನು ಯಾವಾಗಲೂ ಪ್ರೋತ್ಸಾಹಿಸಬೇಕು ಎನ್ನುವುದು ಇದರ ಉದ್ದೇಶ. ಸಾಹಸೋದ್ಯಮದ ಕಲ್ಪನೆ ಮತ್ತು ಪರಿಕಲ್ಪನೆಯಿಂದ ವಿನ್ಯಾಸಗಳವರೆಗೆ, ಮತ್ತು ವಿಡಿಯೋ ಕೂಡ ಎಲ್ಲವೂ ಮಗನದ್ದೇ ಎಂದಿದ್ದಾರೆ.
56
ಎರಡನೆ ಮಗುವಿಗಾಗಿ ಪ್ರಯತ್ನ
ಅಷ್ಟಕ್ಕೂ ನಟಿ ಬಾಡಿಗೆ ತಾಯ್ತನದ ಮೂಲಕ ಇನ್ನೊಂದು ಮಗುವನ್ನು ಪಡೆದಿರುವ ಬಗ್ಗೆ ಈ ಹಿಂದೆ ಹೇಳಿಕೊಂಡಿದ್ದರು. ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ. ಆದರೆ ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಬಾಡಿಗೆ ತಾಯ್ತನತದ ಮೂಲಕ ಮಗುವನ್ನು ಪಡೆದುಕೊಂಡೆ ಎಂದಿದ್ದರು. 2012ರಲ್ಲಿ ವಿಹಾನ್ ಹುಟ್ಟಿದ ಬಳಿಕ ನಾವೆಲ್ಲರೂ ತುಂಬಾ ಖುಷಿಯಾಗಿದ್ದೆವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ಆ ಸಮಯದಲ್ಲಿ ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಮುಂದೂಡಿದ್ದೆ. ಆದರೆ ಮಗು ಹುಟ್ಟುವುದು ಸಾಧ್ಯವಾಗಲಿಲ್ಲ. ಅನಾರೋಗ್ಯದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ನನ್ನ ದೇಹವು ಗರ್ಭಧಾರಣೆಗೆ ಸ್ಪಂದಿಸುತ್ತಿರಲಿಲ್ಲ. ಇನ್ನೊಂದು ಮಗುವನ್ನು ಪಡೆಯಲು ಆಟೋ ಇಮ್ಯೂನೋ ಡಿಸೀಸ್ (APLC) ಎನ್ನವ ಕಾಯಿಲೆ ಅಡ್ಡಿಯಾಯಿತು. ಈ ಸಮಸ್ಯೆಯಿಂದ ಹಲವಾರು ಬಾರಿ ಗರ್ಭಪಾತವಾಗಿತ್ತು ಎಂದು ಶಿಲ್ಪಾ ಶೆಟ್ಟಿ ತಿಳಿಸಿದರು.
66
ಬಾಡಿಗೆ ತಾಯ್ತನ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.