ಭಾರತದಲ್ಲಿ ಪ್ರಾಣಿ ಪೂಜೆ ಒಂದು ವಿಶಿಷ್ಟ ಆಚರಣೆಯಾಗಿದೆ. ಹಳ್ಳಿಗಳಲ್ಲಿ ಇಂದಿಗೂ ಈ ಪದ್ಧತಿ ಮುಂದುವರಿದಿರುವುದು ದೊಡ್ಡ ಸಂಗತಿ. ಆದರೆ ನಗರಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಯಾವುದೇ ವಿಶೇಷ ಸಂದರ್ಭಗಳಲ್ಲಿ, ಮರಗಳು ಮತ್ತು ಪ್ರಾಣಿಗಳನ್ನು ಪೂಜಿಸಲಾಗುತ್ತದೆ. ಪ್ರಾಣಿಗಳು ದೇವರೊಂದಿಗೆ ಸಂಬಂಧ ಹೊಂದಿವೆ ಎಂದು ಅನೇಕ ಜನರು ನಂಬುತ್ತಾರೆ. ಭಾರತದಲ್ಲಿ ಪ್ರಕೃತಿಯನ್ನು ದೇವರೆಂದು ಪರಿಗಣಿಸಲಾಗಿದೆ. ಈ ಪ್ರಾಣಿಗಳು ಪ್ರಕೃತಿಯ ಭಾಗವೆಂದು ನಂಬಲಾಗಿದೆ. ಅಂತಹ ಕೆಲವು ಪ್ರಮುಖ ಪ್ರಾಣಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಹಸು: ಹಿಂದೂಗಳು ಗೋವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ. ಹಸುಗಳನ್ನು ಗೋಮಾತೆ ಮತ್ತು ಕಾಮಧೇನು ಎಂದು ಪೂಜಿಸಲಾಗುತ್ತದೆ. ಗೋವು ಶ್ರೀಕೃಷ್ಣನ ನೆಚ್ಚಿನ ಪ್ರಾಣಿ ಎಂದು ಭಕ್ತರು ನಂಬುತ್ತಾರೆ. ಇದಲ್ಲದೆ, ಹಸುವಿನ ಹಾಲು, ಸಗಣಿ ಮತ್ತು ಮೂತ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಭಕ್ತರು ಹಸುವನ್ನು ರಕ್ಷಿಸಲು ಮತ್ತು ಅದನ್ನು ಪೋಷಿಸಲು ಇಷ್ಟಪಡುತ್ತಾರೆ. ಕೆಲವರು ವಿಶೇಷವಾಗಿ ಗೋವುಗಳನ್ನು ಹಿಂಸಿಸಬಾರದು ಎಂದು ಗೋಶಾಲೆಗಳನ್ನು ಆರಂಭಿಸುತ್ತಾರೆ. ಹಲವು ಪ್ರದೇಶಗಳಲ್ಲಿ ಗೋವುಗಳಿಗೂ ಸೀಮಂತಗಳನ್ನು ಮಾಡಲಾಗುತ್ತದೆ. ಗೋಕುಲ ಅಷ್ಟಮಿಯ ದಿನದಂದು ಹಸುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.