ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಬಳಸಿ ನಿಮ್ಮ ಮದುವೆ ಬೇಗ ಆಗುತ್ತದೆಯೇ ಅಥವಾ ತಡವಾಗುತ್ತದೆಯೇ ಎಂದು ತಿಳಿಯುವುದು ಹೇಗೆ? ಈ ಲೇಖನದಲ್ಲಿ ವಿವರವಾಗಿ ನೋಡೋಣ ಬನ್ನಿ.
ನಮ್ಮೆಲ್ಲರ ಮನಸ್ಸಿನಲ್ಲೂ ಮದುವೆ ಬಗ್ಗೆ ನೂರಾರು ಪ್ರಶ್ನೆಗಳಿರುತ್ತವೆ. ಅದರಲ್ಲಿ ಮುಖ್ಯವಾದ ಪ್ರಶ್ನೆ, 'ನನಗೆ ಬೇಗ ಮದುವೆ ಆಗುತ್ತಾ ಅಥವಾ ತಡವಾಗುತ್ತಾ?' ಅನ್ನೋದು. ಈ ಪ್ರಶ್ನೆಗೆ ಸಂಖ್ಯಾಶಾಸ್ತ್ರದಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ನಿಮ್ಮ ಜನ್ಮ ದಿನಾಂಕದ ಸಂಖ್ಯೆಗಳನ್ನು ಕೂಡಿಸಿ ಬರುವ ಮೂಲಾಂಕವನ್ನು (Moolank) ಇಟ್ಟುಕೊಂಡು, ನಿಮ್ಮ ಮದುವೆ ಯಾವ ವಯಸ್ಸಿನಲ್ಲಿ ಆಗಬಹುದು ಎಂದು ಅಂದಾಜಿಸಬಹುದು. ಬನ್ನಿ, ನಿಮ್ಮ ಜನ್ಮ ದಿನಾಂಕದ ಪ್ರಕಾರ ಮದುವೆ ಯೋಗ ಯಾವಾಗ ಬರುತ್ತೆ ಅಂತ ನೋಡೋಣ.
25
ಮೂಲಾಂಕವನ್ನು ಲೆಕ್ಕ ಹಾಕುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಸಂಪೂರ್ಣ ಜನ್ಮ ದಿನಾಂಕವನ್ನು (ದಿನ, ತಿಂಗಳು, ವರ್ಷ) ಕೂಡಿಸಿ, ಬರುವ ಸಂಖ್ಯೆಯನ್ನು ಒಂದೇ ಅಂಕಿಗೆ ಇಳಿಸಬೇಕು. ಉದಾಹರಣೆಗೆ, ಒಬ್ಬರ ಜನ್ಮ ದಿನಾಂಕ 15-08-1998 ಎಂದು ಇಟ್ಟುಕೊಳ್ಳೋಣ. ಅದನ್ನು ಹೀಗೆ ಕೂಡಿಸಬೇಕು:
1+5+0+8+1+9+9+8 = 41 ಈಗ ಈ 41 ಅನ್ನು ಮತ್ತೆ ಕೂಡಿಸಬೇಕು: 4+1 = 5 ಹೀಗೆ ಬರುವ ಮೂಲಾಂಕ ಅಥವಾ ಅದೃಷ್ಟ ಸಂಖ್ಯೆಯನ್ನು ಇಟ್ಟುಕೊಂಡು ಸಾಮಾನ್ಯ ಫಲಗಳನ್ನು ನೋಡುತ್ತಾರೆ.
35
ಮೂಲಾಂಕ 1 ಮತ್ತು 2
ಈ ಸಂಖ್ಯೆಗಳನ್ನು ಹೊಂದಿರುವವರು ಸಂಬಂಧಗಳಲ್ಲಿ ಸ್ಥಿರತೆಯನ್ನು ಬಯಸುತ್ತಾರೆ. ಮದುವೆ ವಿಷಯದಲ್ಲಿ ತುಂಬಾ ಯೋಚಿಸಿ, ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಜೀವನ ಸಂಗಾತಿಯನ್ನು ಅಷ್ಟು ಸುಲಭವಾಗಿ ಆಯ್ಕೆ ಮಾಡುವುದಿಲ್ಲ. ಇದರಿಂದ, ಇವರ ಮದುವೆಗೆ ಸ್ವಲ್ಪ ತಡವಾಗಬಹುದು. ಸಾಮಾನ್ಯವಾಗಿ, ಈ ಸಂಖ್ಯೆಗಳಲ್ಲಿ ಜನಿಸಿದವರಿಗೆ 25 ರಿಂದ 30 ವರ್ಷದೊಳಗೆ ಮದುವೆ ನಡೆಯುವ ಸಾಧ್ಯತೆ ಇದೆ.
45
ಮೂಲಾಂಕ 3 ಮತ್ತು 4
ಈ ಸಂಖ್ಯೆಗಳಲ್ಲಿ ಜನಿಸಿದವರ ಗಮನ ಹೆಚ್ಚಾಗಿ ತಮ್ಮ ವೃತ್ತಿ ಅಥವಾ ಕೆಲಸದ ಮೇಲೆ ಇರುತ್ತದೆ. ಜೀವನದಲ್ಲಿ ಚೆನ್ನಾಗಿ ಸೆಟಲ್ ಆದ ನಂತರವೇ ಮದುವೆ ಬಗ್ಗೆ ಯೋಚಿಸುತ್ತಾರೆ. ಇದರಿಂದ, ಇವರ ಮದುವೆಯೂ ಸ್ವಲ್ಪ ತಡವಾಗಬಹುದು. ಇವರಿಗೆ 27 ರಿಂದ 32 ವರ್ಷದೊಳಗೆ ಮದುವೆ ನಡೆಯುವ ಯೋಗ ಹೆಚ್ಚಾಗಿ ಇದೆ.
55
ಮೂಲಾಂಕ 5 ಮತ್ತು 6
ಸಂಖ್ಯಾಶಾಸ್ತ್ರದಲ್ಲಿ ಈ ಎರಡು ಸಂಖ್ಯೆಗಳನ್ನು ಸಂಬಂಧಗಳು ಮತ್ತು ಆಕರ್ಷಣೆಯೊಂದಿಗೆ ಜೋಡಿಸಿ ನೋಡುತ್ತಾರೆ. ಇವರು ಪ್ರೀತಿಯ ವಿಷಯಗಳಲ್ಲಿ ತುಂಬಾ ಭಾವನಾತ್ಮಕವಾಗಿರುತ್ತಾರೆ. ಇದೇ ಕಾರಣಕ್ಕೆ, ಇವರಿಗೆ ಚಿಕ್ಕ ವಯಸ್ಸಿನಲ್ಲಿ, ಅಂದರೆ 25 ವರ್ಷಕ್ಕಿಂತ ಮೊದಲೇ ಮದುವೆ ಆಗಿಬಿಡುತ್ತದೆ.
ಮೂಲಾಂಕ 7, 8 ಮತ್ತು 9
ಈ ಸಂಖ್ಯೆಗಳನ್ನು ಹೊಂದಿರುವವರು ಜೀವನವನ್ನು ತುಂಬಾ ಗಂಭೀರವಾಗಿ, ವೃತ್ತಿಪರವಾಗಿ ನೋಡುತ್ತಾರೆ. ಹಲವು ಬಾರಿ, ಸರಿಯಾದ ವ್ಯಕ್ತಿ ಸಿಗುವವರೆಗೂ ಕಾಯಲು ಇಷ್ಟಪಡುತ್ತಾರೆ. 'ಇವರೇ ನನ್ನ ಜೀವನ ಸಂಗಾತಿಯಾಗಲು ಅರ್ಹರು' ಎಂದು ಪೂರ್ಣ ನಂಬಿಕೆ ಬರುವವರೆಗೂ ಮದುವೆ ಮಾಡಿಕೊಳ್ಳುವುದಿಲ್ಲ. ಇದರಿಂದ, ಇವರಿಗೆ ಹೆಚ್ಚಾಗಿ 35 ವರ್ಷದ ನಂತರವೇ ಮದುವೆ ನಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.