Monsoon Tips: ಮಳೆಗಾಲ್ದಲ್ಲಿ ಚಪ್ಪಲಿ ಜಾರಿ ಕೆಳಗೆ ಬೀಳೋ ಭಯ ಬೇಡ, ಗ್ರಿಪ್‌ ಕಾಪಾಡೋಕೆ ಇಲ್ಲಿದೆ ಟಿಪ್ಸ್

Published : Jul 13, 2026, 02:27 PM IST

ಮಳೆಗಾಲ ಶುರುವಾಗ್ತಿದ್ದಂತೆ ರಸ್ತೆ, ಮೆಟ್ಟಿಲು ಜಾರೋಕೆ ಶುರುವಾಗುತ್ತೆ. ಅನೇಕರು ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ತಾರೆ. ಇದಕ್ಕೆ ಕಾರಣ ಬರೀ ರಸ್ತೆ ಅಲ್ಲ. ನೀವು ಧರಿಸುವ ಚಪ್ಪಲಿ ಕೂಡ ಕಾರಣ ಆಗುತ್ತೆ. ಹಾಗಾಗಿ ಮಳೆಗಾಲದಲ್ಲಿ ನೀವು ಸರಿಯಾದ ಚಪ್ಪಲಿ ಧರಿಸುವ ಜೊತೆಗೆ ಕೆಲ ಟಿಪ್ಸ್‌ ಫಾಲೋ ಮಾಡ್ಬೇಕು.

PREV
15
ಮಳೆಗಾಲದಲ್ಲಿ ಚಪ್ಪಲಿ ಆಯ್ಕೆ

ಹಿಂದೆ ಮಳೆಗಾಲಕ್ಕೆ ಅಂತಾನೇ ಪ್ರತ್ಯೇಕ ಚಪ್ಪಲಿಗಳು ಸಿಗ್ತಿದ್ವು. ಇತ್ತೀಚಿನ ದಿನಗಳಲ್ಲಿ ಮಳೆಗಾಲಕ್ಕೆ ಅಂತ ಜನ ಚಪ್ಪಲಿ ಖರೀದಿಸೋದು ಅಪರೂಪ. ಆದ್ರೆ ಮಳೆಗಾಲ ಶುರುವಾಗ್ತಿದ್ದಂತೆ ನೀವು ಚಪ್ಪಲಿ ಬಗ್ಗೆ ವಿಶೇಷ ಗಮನ ಹರಿಸಿದ್ರೆ ಒಳ್ಳೆಯದು. ಬೇಸಿಗೆಯಲ್ಲಿ ಧರಿಸುವ ಕೆಲ ಚಪ್ಪಲಿ ಮಳೆಗಾಲಕ್ಕೆ ಸೂಕ್ತವಲ್ಲ. ಒಳ್ಳೆ ಗ್ರಿಪ್ ಇರುವ, ಸೋಲ್ ಹೊಂದಿರುವ ರಬ್ಬರ್ ಚಪ್ಪಲಿಗಳನ್ನು ಬಳಸುವುದು ಉತ್ತಮ. ಇವು ಒದ್ದೆಯಾದ ನೆಲದಲ್ಲೂ ಉತ್ತಮ ಗ್ರಿಪ್ ನೀಡುತ್ತವೆ.

25
ಸ್ಯಾಂಡ್‌ ಪೇಪರ್

ನಮ್ಮ ಚಪ್ಪಲಿ ಹಳೆಯದಾಗಿದ್ರೆ ಇಲ್ಲ, ಕೆಳಭಾಗ ನಯವಾಗಿದ್ರೆ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಚಪ್ಪಲಿ ಜಾರುವಂತಿದ್ದರೆ ಅದರ ಮೇಲೆ ಸ್ಯಾಂಡ್ಪೇಪರ್ನಿಂದ ಸ್ವಲ್ಪ ಉಜ್ಜಿ. ಇದ್ರಿಂದ ಚಪ್ಪಲಿ ಕೆಳಭಾಗ ಹಾಗೂ ಮೇಲ್ಮೈ ಒರಟಾಗಿ ಹಿಡಿತ ಹೆಚ್ಚಾಗುತ್ತದೆ.

35
ಸ್ವಚ್ಛತೆ

ಮಳೆಗಾಲದಲ್ಲಿ ಚಪ್ಪಲಿ ಧರಿಸುವ ಮೊದಲು ಚಪ್ಪಲಿಯ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಚಪ್ಪಲಿ ಕೆಳಭಾಗವನ್ನು ಸ್ವಚ್ಛವಾಗಿಡಬೇಕು. ಮಣ್ಣು, ಕಸ ಅಥವಾ ಎಣ್ಣೆಯಂತಹ ಪದಾರ್ಥಗಳು ಅಂಟಿಕೊಂಡರೆ ಗ್ರಿಪ್ ಕಡಿಮೆಯಾಗುತ್ತದೆ. ಆಗಾಗ ಚಪ್ಪಲಿ ತೊಳೆದು ಬ್ರಷ್ನಿಂದ ಸ್ವಚ್ಛಗೊಳಿಸಿ.

45
ಎಚ್ಚರಿಕೆ ಹೆಜ್ಜೆ

ಮಳೆಯ ಸಮಯದಲ್ಲಿ ಎಷ್ಟೇ ಉತ್ತಮ ಚಪ್ಪಲಿ ಧರಿಸಿದ್ರೂ ವೇಗವಾಗಿ ಓಡಬೇಡಿ. ಎಚ್ಚರಿಕೆಯ ಹೆಜ್ಜೆ ಇಡುವುದು ಒಳ್ಳೆಯದು. ವಿಶೇಷವಾಗಿ ಟೈಲ್ಸ್, ಮಾರ್ಬಲ್ ಮತ್ತು ಮೆಟ್ಟಿಲುಗಳ ಮೇಲೆ ನಿಧಾನವಾಗಿ ನಡೆಯುವುದು ಸುರಕ್ಷಿತ. ಕೆಲವೊಮ್ಮೆ ಟೈಲ್ಸ್‌ ಜಾರುತ್ತದೆ. ನಿಮಗೆ ಅದ್ರ ಅರಿವಿಲ್ಲದೆ ವೇಗವಾಗಿ ನಡೆದಾಗ ಜಾರುವ ಅಪಾಯ ಇರುತ್ತದೆ.

55
ಚಪ್ಪಲಿ ಬದಲಿಸಿ

ನಿಮ್ಮ ಚಪ್ಪಲಿ ತುಂಬಾ ಹಳೆಯದಾಗಿದೆ, ಚಪ್ಪಲಿಯ ಸೋಲ್ ಸಂಪೂರ್ಣವಾಗಿ ಸವೆದುಹೋಗಿದೆ ಅಥವಾ ಬಿರುಕು ಬಿಟ್ಟಿದ್ದರೆ ಅದನ್ನು ಬಳಸುವುದನ್ನು ನಿಲ್ಲಿಸಿ. ಹೊಸ ಚಪ್ಪಲಿ ಖರೀದಿಸುವುದು ಗಾಯದ ಚಿಕಿತ್ಸೆಗೆ ಹಣ ಖರ್ಚು ಮಾಡುವುದಕ್ಕಿಂತ ಉತ್ತಮ. ಮಳೆಗಾಲದಲ್ಲಿ ಸ್ಟೈಲ್ಗಿಂತ ಸುರಕ್ಷತೆಯೇ ಮುಖ್ಯ. ಸರಿಯಾದ ಚಪ್ಪಲಿಯನ್ನು ಆಯ್ಕೆ ಮಾಡಿ, ಸ್ವಲ್ಪ ಎಚ್ಚರಿಕೆಯಿಂದ ನಡೆದಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories