ಮನೆಯೊಳಗೆ ಸೊಳ್ಳೆ, ಇಲಿ, ಜಿರಲೆಗಳ ಹಾವಳಿ ಮಿತಿಮೀರಿದ್ಯಾ? ಇಲ್ಲಿದೆ ನೋಡಿ ಕ್ಯಾಂಡಲ್ ಟ್ರಿಕ್

Published : Oct 15, 2026, 12:14 PM IST

Natural Mosquito Repellent: ಸೊಳ್ಳೆ ಕಾಯಿಲ್‌ಗಳ ಕೆಮಿಕಲ್ ಹೊಗೆ ಮಕ್ಕಳ ಆರೋಗ್ಯಕ್ಕೆ ಹಾಗೂ ಶ್ವಾಸಕೋಶಕ್ಕೆ ಅತ್ಯಂತ ಹಾನಿಕಾರಕ. ಹಾಗಾದರೆ ಯಾವುದೇ ರಾಸಾಯನಿಕ ಇಲ್ಲದೆ ನೈಸರ್ಗಿಕವಾಗಿ ಸೊಳ್ಳೆ, ಜಿರಳೆ ಮತ್ತು ಇಲಿಗಳನ್ನು ಮನೆಯಿಂದ ಓಡಿಸುವುದು ಹೇಗೆ?

PREV
16
ಶಾಶ್ವತವಾಗಿ ಓಡಿಸಲು ಇಲ್ಲಿದೆ ಎರಡು ಅದ್ಭುತ ಮನೆಮದ್ದು

ಶಾಶ್ವತವಾಗಿ ಓಡಿಸಲು ಇಲ್ಲಿದೆ ಎರಡು ಅದ್ಭುತ ಮನೆಮದ್ದು
ರಾತ್ರಿಯಾಗುತ್ತಿದ್ದಂತೆ ಮನೆಗೆ ನುಗ್ಗುವ ಸೊಳ್ಳೆಗಳು, ಅಡುಗೆ ಮನೆಯಲ್ಲಿ ಓಡಾಡುವ ಜಿರಳೆಗಳು ಮತ್ತು ಎಲ್ಲೆಂದರಲ್ಲಿ ಸಾಮಗ್ರಿಗಳನ್ನು ಹಾಳು ಮಾಡುವ ಇಲಿಗಳು ಪ್ರತಿಯೊಬ್ಬರ ಮನೆಯಲ್ಲೂ ದೊಡ್ಡ ತಲೆನೋವು. ಇವುಗಳನ್ನು ಓಡಿಸಲು ನಾವು ಮಾರುಕಟ್ಟೆಯಿಂದ ತರುವ ಸೊಳ್ಳೆ ಬತ್ತಿ, ಕಾಯಿಲ್ ಅಥವಾ ಕೆಮಿಕಲ್ ಸ್ಪ್ರೇಗಳು ಮಕ್ಕಳ ಶ್ವಾಸಕೋಶಕ್ಕೆ ಹಾಗೂ ನಮ್ಮ ಆರೋಗ್ಯಕ್ಕೆ ತೀರಾ ಹಾನಿಕಾರಕ. ಆದ್ದರಿಂದ ಯಾವುದೇ ರಾಸಾಯನಿಕ ಬಳಸದೆ, ನೈಸರ್ಗಿಕವಾಗಿ ಇವುಗಳನ್ನು ಮನೆಯಿಂದ ಶಾಶ್ವತವಾಗಿ ಓಡಿಸಲು ಇಲ್ಲಿದೆ ಎರಡು ಅದ್ಭುತ ಮನೆಮದ್ದು.

26
ಮೊದಲನೇ ಮನೆಮದ್ದುಈ ವಿಶೇಷ ದೀಪ

ಮೊದಲನೇ ಮನೆಮದ್ದುಈ ವಿಶೇಷ ದೀಪ
ಸಂಜೆ 6 ಗಂಟೆಯಾಗುತ್ತಿದ್ದಂತೆ ಮನೆಯಲ್ಲಿ ಈ ವಿಶೇಷ ದೀಪವನ್ನು ಹಚ್ಚಿದರೆ ಸಾಕು, ಆ ಸುವಾಸನೆಗೆ ಒಂದೇ ಒಂದು ಸೊಳ್ಳೆಯಾಗಲಿ, ಜಿರಳೆಯಾಗಲಿ ಮನೆಯೊಳಗೆ ಉಳಿಯುವುದಿಲ್ಲ.

36
ವಿಶೇಷ ದೀಪಕ್ಕೆ ಬೇಕಾಗುವ ಸಾಮಗ್ರಿಗಳು

ವಿಶೇಷ ದೀಪಕ್ಕೆ ಬೇಕಾಗುವ ಸಾಮಗ್ರಿಗಳು
ಚಿಕ್ಕ ಮೇಣದಬತ್ತಿ (ಕ್ಯಾಂಡಲ್) – 1
ಬೇವಿನೆಣ್ಣೆ ಅಥವಾ ಎಳ್ಳೆಣ್ಣೆ – 2-3 ಚಮಚ
ಕರ್ಪೂರ – 2 ಬಿಲ್ಲೆ (ಪುಡಿ ಮಾಡಿದ್ದು)
ವಿಕ್ಸ್ (Vicks Vaporub) – ½ ಚಮಚ
ಮಣ್ಣಿನ ದೀಪ ಮತ್ತು ಬತ್ತಿ

ಮಾಡುವ ವಿಧಾನ
*ಒಂದು ಹಳೆಯ ಪಾತ್ರೆಯಲ್ಲಿ ಕ್ಯಾಂಡಲ್ ಅನ್ನು ಸಣ್ಣಗೆ ತುಂಡು ಮಾಡಿ ಹಾಕಿ ಕರಗಿಸಿ (ದಾರವನ್ನು ಮರೆಯದೆ ತೆಗೆಯಿರಿ). ಇದೇ ಸಮಯದಲ್ಲಿ ಬೇವಿನೆಣ್ಣೆ ಸೇರಿಸಿಯೂ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ.

*ಈಗ ಇದಕ್ಕೆ ಪುಡಿ ಮಾಡಿದ ಕರ್ಪೂರ ಮತ್ತು ವಿಕ್ಸ್ ಸೇರಿಸಿ ಚೆನ್ನಾಗಿ ಕಲಸಿ.

*ಈ ಮಿಶ್ರಣ ಬಿಸಿಯಿರುವಾಗಲೇ ಮಣ್ಣಿನ ದೀಪಕ್ಕೆ ಬತ್ತಿಯಿಟ್ಟು ಅದರೊಳಗೆ ಸುರಿಯಿರಿ.

*ಸಂಜೆ ವೇಳೆ ಈ ದೀಪವನ್ನು ಹಚ್ಚಿಡಿ. ಕರ್ಪೂರ, ಬೇವಿನೆಣ್ಣೆ ಮತ್ತು ವಿಕ್ಸ್‌ನ ಘಾಟು ವಾಸನೆಗೆ ಸೊಳ್ಳೆ ಮತ್ತು ಜಿರಳೆಗಳು ಮನೆಯಿಂದ ಓಡಿಹೋಗುತ್ತವೆ.

46
ಎರಡನೇ ಮನೆಮದ್ದು ಪೇಸ್ಟ್

ಎರಡನೇ ಮನೆಮದ್ದು ಪೇಸ್ಟ್
ಇಲಿಗಳು ಮನೆಯೊಳಗೆ ಎಲ್ಲೆಂದರಲ್ಲಿ ಸತ್ತು ಬಿದ್ದರೆ ವಾಸನೆ ಬರುತ್ತದೆ. ಆದರೆ ಈ ಟ್ರಿಕ್ ಬಳಸಿದರೆ ಇಲಿಗಳು ಮನೆಯೊಳಗೆ ಸಾಯದೆ ತಕ್ಷಣ ಮನೆಯಿಂದ ಹೊರಗೆ ಓಡಿಹೋಗುತ್ತವೆ.

56
ಪೇಸ್ಟ್‌ಗೆ ಬೇಕಾಗುವ ಸಾಮಗ್ರಿಗಳು

ಪೇಸ್ಟ್‌ಗೆ ಬೇಕಾಗುವ ಸಾಮಗ್ರಿಗಳು
ಕಡಲೆಹಿಟ್ಟು – 2-3 ಚಮಚ
ಎಕ್ಸ್‌ಪೈರ್ ಆದ ಅಥವಾ ಉಳಿದ ಮಾತ್ರೆಗಳು – 2 (ಪುಡಿ ಮಾಡಿದ್ದು)
ಅಡುಗೆ ಸೋಡಾ (ಬೇಕಿಂಗ್ ಸೋಡಾ) – 1 ಚಮಚ
ಹಸಿಮೆಣಸಿನಕಾಯಿ – 2 (ಖಾರವಾಗಿರುವಂತದ್ದು, ತರಿತರಿಯಾಗಿ ಕುಟ್ಟಿದ್ದು)
ಸ್ವಲ್ಪ ನೀರು
ಟೊಮೆಟೊ ಚೂರುಗಳು ಅಥವಾ ಹಳೆಯ ಬಿಸ್ಕೆಟ್ / ಪೇಪರ್ ತುಂಡು

ಮಾಡುವ ವಿಧಾನ
*ಕಡಲೆಹಿಟ್ಟಿಗೆ ಪುಡಿ ಮಾಡಿದ ಮಾತ್ರೆ, ಅಡುಗೆ ಸೋಡಾ ಮತ್ತು ಕುಟ್ಟಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಬೆರೆಸಿ.

*ಸ್ವಲ್ಪವೇ ನೀರು ಹಾಕಿ ಗಟ್ಟಿ ಪೇಸ್ಟ್‌ನಂತೆ ಕಲಸಿಕೊಳ್ಳಿ.

*ಈ ಪೇಸ್ಟ್ ಅನ್ನು ಟೊಮೆಟೊ ಚೂರುಗಳ ನಡುವೆ, ಮೆತ್ತಗಾದ ಬಿಸ್ಕೆಟ್‌ಗಳ ಮೇಲೆ ಅಥವಾ ಪೇಪರ್ ಮೇಲೆ ಹಚ್ಚಿ.

*ಇಲಿಗಳು ಹೆಚ್ಚಾಗಿ ಓಡಾಡುವ ಗ್ಯಾಸ್ ಸ್ಟವ್ ಕೆಳಗೆ, ಡಸ್ಟ್‌ಬಿನ್ ಹತ್ತಿರ, ಗಿಡಗಳ ಬಳಿ ಮತ್ತು ಬಾಗಿಲಿನ ಸಂದಿಗಳಲ್ಲಿ ಇಡಿ.

66
ಪ್ರಯೋಜನ

ಪ್ರಯೋಜನ
ಕಡಲೆಹಿಟ್ಟಿನ ವಾಸನೆಗೆ ಇಲಿಗಳು ಇದನ್ನು ತಿನ್ನಲು ಬರುತ್ತವೆ. ತಿಂದ ತಕ್ಷಣ ಮೆಣಸಿನಕಾಯಿಯ ಖಾರ ಮತ್ತು ಸೋಡಾದಿಂದಾಗಿ ಅವುಗಳಿಗೆ ಉಸಿರುಗಟ್ಟಿದಂತಾಗಿ, ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿಹೋಗುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories