ವೈರಲ್‌ ಆಗಿವೆ ಮುಖೇಶ್‌ ಅಂಬಾನಿ ಸೊಸೆಯ ಪೋಟೋಸ್

First Published | Jul 13, 2020, 5:30 PM IST

ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಮನೆಯ ಹಿರಿಯ ಸೊಸೆ ಶ್ಲೋಕಾ ಮೆಹ್ತಾರ ಬರ್ಥ್‌ಡೇ. ಶ್ಲೋಕಾ ಮುಖೇಶ್‌ರ ಹಿರಿಯ ಮಗ ಆಕಾಶ್ ಪತ್ನಿ. ಇಬ್ಬರೂ 2019ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ವ್ಯವಹಾರದ ಹೊರತಾಗಿ, ಅತ್ತೆ ನೀತಾ ಅಂಬಾನಿಯಂತೆ ಸಾಮಾಜಿಕ ಕಾರ್ಯಗಳಲ್ಲಿಯೂ ಶ್ಲೋಕಾ ಮೆಹ್ತಾ ಭಾಗವಹಿಸುತ್ತಿದ್ದಾರೆ.ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಪೋಟೋಗಳನ್ನು ಶೇರ್‌ ಮಾಡಿ ಅಭಿನಂದಿಸಿದರು. ಅನೇಕ ಸಂದರ್ಭಗಳಲ್ಲಿ ಇವರ ಪೋಟೋಗಳು ತುಂಬಾ ವೈರಲ್ ಆಗುತ್ತವೆ. ಇಂತಹ ಕೆಲವು ವೈರಲ್ ಪೋಟೋಗಳು ಇಲ್ಲಿವೆ. ಈ ಎಲ್ಲಾ ಪಿಕ್ಚರ್‌ಗಳನ್ನು ಅಂಬಾನಿ ಫ್ಯಾಮಿಲಿ ಹೆಸರಿನ ಇನ್‌ಸ್ಟಾಗ್ರಾಮ್ ಫ್ಯಾನ್‌ಪೇಜ್‌ನಲ್ಲಿ ಶೇರ್‌ ಮಾಡಲಾಗಿದೆ.

11 ಜುಲೈರಂದು ಜನಿಸಿದ ಶ್ಲೋಕಾರ ತಂದೆ ರಸ್ಸೆಲ್ ಮೆಹ್ತಾ ಪ್ರಸಿದ್ಧ ವಜ್ರ ಉದ್ಯಮಿ. ತಂದೆಯ ವ್ಯವಹಾರದಲ್ಲಿ ಡೈರೆಕ್ಟರ್‌ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ ಶ್ಲೋಕಾ. ಅಂತಹ ಒಂದು ಕೆಲಸದ ಸಮಯದಲ್ಲಿ ಈ ಪೋಟೋವನ್ನು ಕ್ಲಿಕ್‌ ಮಾಡಲಾಗಿದೆ.
ಅಂಬಾನಿ ಸೊಸೆ ಶ್ಲೋಕಾ.
Tap to resize

ಹುಟ್ಟುಹಬ್ಬದಂದು, ಚಿಕ್ಕತ್ತೆ ಟೀನಾ ಅಂಬಾನಿ ಇನ್ಸ್ಟಾಗ್ರಾಮ್‌ನಲ್ಲಿ ಇದೇ ಚಿತ್ರವನ್ನು ಹಂಚಿಕೊಂಡು ವಿಶ್‌ ಮಾಡಿದ್ದಾರೆ.
ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಮಾಡಿ, ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಅಧ್ಯಯನ ನೆಡಸಿದ್ದಾರೆಶ್ಲೋಕಾ.
ಮದುವೆಯ ನಂತರ, ಗಂಡನೊಂದಿಗೆ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಜುಯಲ್‌ ಲುಕ್‌ನಲ್ಲಿ ಆಕಾಶ್‌ ಹಾಗೂ ಶ್ಲೋಕಾ.
ಸಖತ್‌ ವೈರಲ್ ಆಗಿರುವ ಅಂಬಾನಿ ಫ್ಯಾಮಿಲಿಯ ಫೋಟೋ ಇದು. ವಿವಾಹದ ನಂತರದ ಆಚರಣೆಗಳ ಈ ಫೋಟೋದಲ್ಲಿ ಆಕಾಶ್, ಇಶಾ, ಮುಖೇಶ್ ಮತ್ತು ನೀತಾ ಅಂಬಾನಿ.
ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿ ಮದುವೆಯ ರಿಸೆಪ್ಷನ್‌ನಈ ಪೋಟೋ ಕೂಡ ತುಂಬಾ ವೈರಲ್ ಆಗಿದೆ.
ನಂದಾ ಇಶಾ ಅಂಬಾನಿ ಜೊತೆ ಶ್ಲೋಕಾ.
ಮದುವೆಯಲ್ಲಿ ಆಕಾಶ್ ಮತ್ತು ಶ್ಲೋಕಾ ಜೊತೆಗೆ ಇಶಾ ಅಂಬಾನಿ.
ಗಂಡ ಮತ್ತು ಅತ್ತೆಯೊಂದಿಗೆ ಶ್ಲೋಕಾ.
ಶ್ಲೋಕಾಳ ಫೋಟೋಶೂಟ್‌ನ ಹಲವು ಫೋಟೋಗಳು ಬಹಿರಂಗಗೊಂಡಿವೆ.

Latest Videos

click me!