ಮನೆಯಲ್ಲಿ ಈಸಿಯಾಗಿ ಕುರ್‌ಕುರೆ ಮಾಡುವ ಸಿಕ್ರೇಟ್‌ ವಿಧಾನ

First Published | Jul 12, 2020, 11:10 AM IST

ಕುರ್‌ಕುರೆ ಮಕ್ಕಳ ಫೇವರೇಟ್‌ ಪ್ಯಾಕೆಟ್‌ ತಿಂಡಿಗಳಲ್ಲಿ ಒಂದು. ಊಟ ತಿಂಡಿ ತಿನ್ನೊಕ್ಕೆ ನಾಟಕ ಮಾಡುವ ಮಕ್ಕಳೂ ಕುರ್‌ಕುರೆಗೆ ನೋ ಅನ್ನೋಲ್ಲ. ಆದರೆ ಯಾವ ತಾಯಿ  ತನ್ನ ಮಕ್ಕಳು ಜಂಕ್‌ ಫುಡ್‌ ತಿನ್ನೋದು ಬಯಸುತ್ತಾಳೆ. ಅದೇ ಕುರ್‌ಕುರೆ ಮನೆಯಲ್ಲಿ ಮಾಡೋ ಹಾಗಾದರೆ? ಯಾವುದೇ ಪ್ರಿಸರ್ವೇಟಿವ್‌, ಕೃತಕ ಫುಡ್‌ ಕಲರ್‌ ಇಲ್ಲದೆ ಮನೆಯಲ್ಲೇ ನೀವು ಮಾಡಬಹುದು ಮಾರ್ಕೆಟ್‌ ಸ್ಟೈಲ್‌ನ ಕ್ರಿಸ್ಪಿ ಕುರ್‌ಕುರೆ. ಇಲ್ಲಿದೆ ವಿಧಾನ.

1 ಕಪ್ ಅವಲಕ್ಕಿ,
1/4 ಕಪ್ ಕಡಲೆ ಹಿಟ್ಟು1 ಕಪ್ ನೀರು
1/2 ಟೀಸ್ಪೂನ್ ಉಪ್ಪು
1/4 ಕಪ್ ಕಾರ್ನ್‌ ಫ್ಲೋರ್‌  
1 ಟೀಸ್ಪೂನ್ ಚಾಟ್‌ ಮಸಾಲ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ 

ಕುರ್‌ಕುರೆ ಮಾಡಲು, ಮೊದಲು ಅವಲಕ್ಕಿಯನ್ನು ಮಿಕ್ಸಿಯಲ್ಲಿ ಪುಡಿಮಾಡಿ. ಒಂದು ಪಾತ್ರೆಯಲ್ಲಿ ಪುಡಿ ಮಾಡಿದ ಅವಲಕ್ಕಿಗೆ ಕಡಲೆ ಹಿಟ್ಟು ಸೇರಿಸಿ.
ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ಅರ್ಧ ಟೀ ಚಮಚ ಉಪ್ಪು ಸೇರಿಸಿ. ಕುದಿ ಬಂದ ನಂತರ ಗ್ಯಾಸ್‌ ಆಫ್ ಮಾಡಿ.
Tap to resize

ಬಿಸಿ ನೀರಿಗೆ ಅವಲಕ್ಕಿ ಪುಡಿ ಮತ್ತು ಕಡಲೆ ಹಿಟ್ಟಿನ ಮಿಶ್ರಣಸೇರಿಸಿ.
ನೀರಿಗೆ ಎಣ್ಣೆ ಸಿಡಿಯದಂತೆ ನೋಡಿಕೊಳ್ಳಿ.
ಉಂಡೆಗಳಾಗದಂತೆ ಅದನ್ನು ಚೆನ್ನಾಗಿ ಮಿಕ್ಸ್‌ ಮಾಡಿ.ಐದು ನಿಮಿಷಗಳ ಕಾಲ ಮುಚ್ಚಿಡಿ.
5 ನಿಮಿ‍ಷಗಳ ನಂತರ ಮಿಶ್ರಣಕ್ಕೆ ಕಾರ್ನ್‌ ಪ್ಲೋರ್‌ ಸೇರಿಸಿ ಚೆನ್ನಾಗಿ ಕಲಸಿ.
ಹಿಟ್ಟು ಮೃದುವಾಗಿರಲಿ.
ಈಗ ಹಿಟ್ಟಿಗೆ ತೆಳುವಾದ ಕಡ್ಡಿಯ ಆಕಾರವನ್ನು ನೀಡಿ.
ಕಾದ ಎಣ್ಣೆಯಲ್ಲಿ ನಿಧಾನವಾಗಿ ಫ್ರೈ ಮಾಡಿ. ಜಾಗೂರಕತೆಯಿಂದ ಕರಿಯಿರಿ ಹಿಟ್ಟಿನಲ್ಲಿರುವ ನೀರಿನಂಶದಿಂದ ಎಣ್ಣೆ ಸಿಡಿಯುವ ಸಾಧ್ಯತೆ ಇರುತ್ತದೆ.
ಕರಿದ ಕುರ್‌ಕುರೆಗೆ ಚಾಟ್ ಮಸಾಲಾ ಸಿಂಪಡಿಸಿ.
ಪ್ಯಾಕೆಟ್‌ನಲ್ಲಿ ಸಿಗುವಕ್ರಿಸ್ಪಿ ಕುರ್‌ಕುರೆ ಮನೆಯಲ್ಲೇ ರೆಡಿ. ಆರೋಗ್ಯಕ್ಕೂ ಇಲ್ಲ ಮಾರಕ. ಟ್ರೈ ಮಾಡಿ ನೋಡಿ..

Latest Videos

click me!