ದೇಶದ ಅತ್ಯಂತ ದುಬಾರಿ ಮದ್ವೆಯಿದು; ಸ್ವರ್ಗವೇ ಧರೆಗಿಳಿದಂತಿತ್ತು ಮಂಟಪ, ನೀರಂತೆ ಖರ್ಚಾಯ್ತು ಕೋಟಿ ಕೋಟಿ ಹಣ!

Published : Oct 01, 2023, 12:57 PM ISTUpdated : Oct 01, 2023, 01:00 PM IST

ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಮದುವೆ, ಭಾರತದಲ್ಲಿ ಅತ್ಯಂತ ದುಬಾರಿ ವಿವಾಹ ಎಂದು ಕರೆಸಿಕೊಂಡಿದೆ. ಆದರೆ ಇದಕ್ಕೆ ಸರಿಸಮಾನವಾದ ಮದುವೆಯೊಂದಿದೆ. ಇದು ಭಾರತದಲ್ಲಿನ ಅತ್ಯಂತ ದುಬಾರಿ ಡಬಲ್ ವೆಡ್ಡಿಂಗ್ ಬಜೆಟ್‌ನ್ನು ಹೊಂದಿತ್ತು. ಚಿಟ್‌ಫಂಡ್ ಕಂಪೆನಿ ಮಾಲೀಕ ತಮ್ಮ ಮಕ್ಕಳ ಈ ಅದ್ಧೂರಿ ಮದುವೆ ಮಾಡಿದ್ರು.

PREV
17
ದೇಶದ ಅತ್ಯಂತ ದುಬಾರಿ ಮದ್ವೆಯಿದು; ಸ್ವರ್ಗವೇ ಧರೆಗಿಳಿದಂತಿತ್ತು ಮಂಟಪ, ನೀರಂತೆ ಖರ್ಚಾಯ್ತು ಕೋಟಿ ಕೋಟಿ ಹಣ!

ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಮದುವೆ, ಭಾರತದಲ್ಲಿ ಅತ್ಯಂತ ದುಬಾರಿ ವಿವಾಹ ಎಂದು ಕರೆಸಿಕೊಂಡಿದೆ. ಇದರ ಒಟ್ಟು ವೆಚ್ಚವು 700 ಕೋಟಿ ರೂಪಾಯಿಗಳನ್ನು ಮೀರಿತ್ತು. ಆದರೆ ಇದಕ್ಕೆ ಸರಿಸಮಾನವಾದ ಮದುವೆಯೊಂದಿದೆ. ಇದು ಭಾರತದಲ್ಲಿನ ಅತ್ಯಂತ ದುಬಾರಿ ಡಬಲ್ ವೆಡ್ಡಿಂಗ್ ಬಜೆಟ್‌ನ್ನು ಹೊಂದಿತ್ತು. ಇದು ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ಮಕ್ಕಳ ವಿವಾಹ. 

27

ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ಅವರ ಬೃಹತ್ ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನಶೈಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಾಜಿ ಬಿಲಿಯನೇರ್ ತನ್ನ ಇಬ್ಬರು ಪುತ್ರರಾದ ಸುಶಾಂತೋ ಮತ್ತು ಸೀಮಂಟೊ ಅವರ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಮಾಡಿದ್ದರು. 2004ರಲ್ಲಿ ನಡೆದ ಡಬಲ್ ವೆಡ್ಡಿಂಗ್‌ಗಾಗಿ ಕೋಟಿ ಕೋಟಿ ಹಣವನ್ನು ವ್ಯಯಿಸಲಾಗಿತ್ತು.

37

ಭಾರತದ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಸುಶಾಂತೋ ಮತ್ತು ಸೀಮಂತೋ ರಾಯ್ ಅವರ ವಿವಾಹ ಸಮಾರಂಭವು ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ನಂತರದ ಬಜೆಟ್ ಅನ್ನು ಹೊಂದಿದೆ. ಸಮಾರಂಭದ ಮದುವೆ ಬಜೆಟ್ 550 ಕೋಟಿ ರೂ. ಆಗಿತ್ತು.

47

ಸುಬ್ರತಾ ರಾಯ್ ತಮ್ಮ ಪುತ್ರರ ಮದುವೆಗೆ 11,000 ಅತಿಥಿಗಳನ್ನು ಆಹ್ವಾನಿಸಿದ್ದರು. ಅದು ಲಕ್ನೋದಲ್ಲಿ ನಡೆಯಿತು. ಸಹಾರಾ ಗ್ರೂಪ್ ಮುಖ್ಯಸ್ಥರು ಮದುವೆಗೆ ಪ್ರಪಂಚದಾದ್ಯಂತದ ಅತಿಥಿಗಳು ಮದುವೆಗೆ ಅತಿಥಿಗಳು ಆಗಮಿಸಲು ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆದರು, ಇದು ನಾಲ್ಕು ದಿನಗಳ ಮದುವೆಯಾಗಿದ್ದು, ಸ್ವರ್ಗವೇ ಧರೆಗಿಳಿದಿತ್ತು.

57

ಸುಶಾಂತೋ ರಿಚಾ ಅಹುಜಾ ಮತ್ತು ಸೀಮಂಟೋ ಚಾಂಟಿನಿ ಟೂರ್ ಅವರನ್ನು ವಿವಾಹವಾದರು. ಪುತ್ರರ ಅದ್ದೂರಿ ವಿವಾಹ ಮಾತ್ರವಲ್ಲದೆ, ಸುಬ್ರೋತೊ ರಾಯ್ ಅವರು 101 ಹಿಂದುಳಿದ ಹುಡುಗಿಯರ ವಿವಾಹವನ್ನು ಆಯೋಜಿಸಿದರು. ಮದುವೆಯ ಸಂಭ್ರಮದಲ್ಲಿ 15,000ಕ್ಕೂ ಹೆಚ್ಚು ಬಡವರಿಗೆ ಆಹಾರವನ್ನು ನೀಡಲಾಗಿತ್ತು.

67

ಮದುವೆ ಮಂಟಪ ಬಿಳಿ ಮತ್ತು ಹಳದಿ ಹೂವುಗಳಿಂದ ತುಂಬಿತ್ತು, ಹೊಳೆಯುವ ಪ್ರಿಸ್ಮ್ ದೀಪಗಳನ್ನು ಹೊಂದಿತ್ತು. ಸಮಾರಂಭದಲ್ಲಿ ಅನೇಕ ಖ್ಯಾತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಬಾಲಿವುಡ್ ತಾರೆಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 100ಕ್ಕೂ ಹೆಚ್ಚು ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು.

77

ಸುಶಾಂತೋ ರಾಯ್ ಮತ್ತು ಸೀಮಾಂತೋ ರಾಯ್ ಅವರ ಮದುವೆಯಲ್ಲಿ ಎ ಲಿಸ್ಟ್ ಅತಿಥಿಗಳಾದ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ಅನಿಲ್ ಅಂಬಾನಿ ಮತ್ತು ಮುಲಾಯಂ ಸಿಂಗ್ ಯಾದವ್ ಭಾಗವಹಿಸಿದ್ದರು. ಶಿಯಾಮಕ್ ದಾವರ್ ಅವರ ತಂಡ ಮತ್ತು ಬ್ರಿಟಿಷ್ ಸಿಂಫನಿ ಆರ್ಕೆಸ್ಟ್ರಾದಿಂದ ಪ್ರದರ್ಶನಗಳು ನಡೆದವು. ಡಿಸೈನರ್‌ ರೋಹಿತ್ ಬಾಲ್ ಮತ್ತು ಸಬ್ಯಸಾಚಿ ವಧು-ವರರ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories