ಹಳದಿಯಾಗಿ ಬದಲಾದ ಫೋನ್ ಕವರನ್ನು ಹೊಸದಾಗಿ ಕಾಣುವಂತೆ ಮಾಡಿ; ಮನೆಯಲ್ಲಿರುವ 2 ವಸ್ತುಗಳು ಸಾಕು!

Published : Aug 22, 2026, 06:34 PM IST

ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವ ಪಾರದರ್ಶಕ ಮೊಬೈಲ್ ಕವರ್‌ಗಳನ್ನು ಪ್ರತಿ ಬಾರಿ ಬದಲಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಬೇಕಿಂಗ್ ಸೋಡಾ, ವಿನೆಗರ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಹಳೆಯ ಕವರ್‌ಗೆ ಹೊಸ ಹೊಳಪನ್ನು ನೀಡುವ ಸರಳ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
16
ಮೊಬೈಲ್‌ಗೆ ಹೊಸ ಲುಕ್ ನೀಡುವ ಕವರ್‌ಗಳು

ಸ್ಮಾರ್ಟ್‌ಫೋನ್ ಕವರ್ ಹಾಕುವುದರಿಂದ ಫೋನ್‌ಗೆ ಸ್ಟೈಲಿಶ್ ಲುಕ್ ಬರುತ್ತದೆ. ಇನ್ನು ಮೊಬೈಲ್ ಮೇಲೆ ಸಣ್ಣ ಸಣ್ಣ ಗೆರೆಗಳು, ಡೆಂಟ್ ಬೀಳುವುದಕ್ಕೆ ಬ್ರೇಕ್ ಬೀಳುತ್ತದೆ. ಇದರಿಂದಲೇ ನಷ್ಟ ಕಡಿಮೆಯಾಗುತ್ತದೆ. ಮಾರ್ಕೆಟ್‌ನಲ್ಲಿರುವ ಎಷ್ಟೋ ಭಿನ್ನ ಭಿನ್ನ ಬಣ್ಣ, ವಿನ್ಯಾಸಗಳಲ್ಲಿ ಕವರ್‌ಗಳು ಸಿಗುತ್ತದೆ. ಫೋನ್ ಅಸಲಿ ಲುಕ್ ಕಾಣಿಸುವಂತೆ, ಹಲವರು ಪಾದರ್ಶಕ ಕವರ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳ ಮೇಲೆ ಯಾವುದೇ ಡಿಸೈನ್ ಇಲ್ಲದಿರುವುದರಿಂದ ಪದೇ ಪದೇ ಕವರ್ ಬದಲಾವಣೆ ಮಾಡುವ ಅಗತ್ಯ ಇರೋದಿಲ್ಲ. ತಿಂಗಳು ಸಮೇತ ಒಂದೇ ಕವರ್ ಉಪಯೋಗಿಸುವುದು ಸಾಮಾನ್ಯ ಸಂಗತಿ.

26
ಹೊಸ ಕವರ್ ಖರೀದಿಸುವ ಅಗತ್ಯವಿಲ್ಲ

ಆದರೆ ಟಾನ್ಸ್ಪರೇಂಟ್ ಮೊಬೈಲ್ ಕವರ್‌ಗಳನ್ನು ಹೆಚ್ಚು ಸಮಯ ಬಳಕೆ ಮಾಡಿದರೆ ಒಂದು ಸಮಸ್ಯೆ ತಪ್ಪುವುದಿಲ್ಲ. ಕೆಲ ದಿನಗಳ ಬಳಿಕ ಮೊಬೈಲ್ ಕವರ್ ಬಣ್ಣ ಬದಲಾಗಿ, ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕವರ್ ಹಳೆಯದಾಗಿ ಕೊಳೆಯಾಗಿ ಕಾಣಿಸುತ್ತದೆ. ಕೂಡಲೇ ಹಲವರು ಹೊಸ ಕವರ್ ಖರೀದಿ ಮಾಡಬೇಕು ಎಂದು ಯೋಚಿಸುತ್ತಾರೆ. ಆದರೆ ಪ್ರತಿ ಬಾರಿ ಹೊಸ ಕವರ್ ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಕೆಲವು ವಸ್ತುಗಳಿಂದ ಹಳೆಯ ಕವರ್‌ಅನ್ನು ಶುಭ್ರ ಮಾಡಿ, ಅದಕ್ಕೆ ಹೊಸ ರೂಪ ಕೊಡಬಹುದಾಗಿದೆ.

36
ಈ ಎರಡು ವಸ್ತುಗಳು ಸಾಕು

ಹಳದಿ ಬಣ್ಣಕ್ಕೆ ತಿರುಗಿದ ಟ್ರಾನ್ಸ್‌ಪರೇಂಟ್ ಫೋನ್ ಕವರ್‌ ಶುಭ್ರಗೊಳಿಸಲು ಬೇಕಿಂಗ್ ಸೋಡಾ, ವಿನೆಗರ್ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು. ಸಾಮಾನ್ಯವಾಗಿ ಇವು ಮನೆ ಅಡುಗೆ ಕೋಣೆಯಲ್ಲಿ ಇರುತ್ತದೆ. ಮನೆಯ ಕ್ಲೀನಿಂಗ್ ಕೆಲಸದಲ್ಲೂ, ದುರ್ವಸನೆ ಕಡಿಮೆ ಮಾಡುವುದರಲ್ಲೂ ಇವುಗಳನ್ನು ಬಳಕೆ ಮಾಡುತ್ತಾರೆ. ಮೊದಲು ಮೊಬೈಲ್‌ನಿಂದ ಕವರ್ ತೆಗೆದು, ಅದರ ಮೇಲೆ ಸ್ವಲ್ಪ ವಿನೆಗರ್ ಹಾಕಿ, ಕವರ್ನ ಮೂಲೆ ಮೂಲೆಯೂ ಹರುಡುವಂತೆ ನೋಡಿಕೊಳ್ಳಿ. ಆ ಬಳಿಕ ಸ್ವಲ್ಪ ಬೇಕಿಂಗ್ ಸೋಡಾ (ಅಡುಗೆ ಸೋಡಾ) ಹಾಕಿ. ಈ ಎರಡು ಪದಾರ್ಥಗಳು ಒಟ್ಟಿಗೆ ಸೇರಿದ ಕೂಡಲೇ ನೊರೆ ಮೂಡುತ್ತದೆ.

46
ಹೊಳೆಯುವ ಲುಕ್ ಮತ್ತೆ ಬರುತ್ತೆ

ನೊರೆ ಬಂದ ಬಳಿಕ ಕೂಡಲೇ ಸಣ್ಣ ಬ್ರಷ ತೆಗೆದುಕೊಂಡು, ಕವರ್ ಮೂಲೆ ಮೂಲೆಯನ್ನು ಮುಖ್ಯವಾಗಿ ಹಳದಿ ಬಣ್ಣ ಹೆಚ್ಚು ಕಾಣುವ ಭಾಗದಲ್ಲಿ ರಬ್ ಮಾಡಿ. ಕೆಲ ಸಮಯ ಈ ರೀತಿ ಕ್ಲೀನ್ ಮಾಡಿದ ಬಳಿಕ ಸ್ವಚ್ಛವಾಗಿರುವ ನೀರಿನಿಂದ ಕ್ಲೀನ್ ಮಾಡಿ. ಈ ಬಳಿಕ ಕವರ್ ಈ ಹಿಂದಿಗಿಂತ ಹೊಳೆಯುತ್ತಾ ಕಾಣುವುದಕ್ಕೆ ಅವಕಾಶವಿದೆ. ಈ ಹಿಂದೆ ಇದ್ದ ಹಳದಿ ಮಾರ್ಕ್‌ಗಳು ದೂರವಾಗುತ್ತದೆ.

56
ಹಳೆ ಕವರ್‌ಗೆ ಹೊಸ ರೂಪ

ಮೊಬೈಲ್ ಕವರ್ ಹೆಚ್ಚು ಹಳದಿಯಾಗಿದ್ದರೆ ಮತ್ತೊಂದು ಪದ್ದತಿಯನ್ನು ಪ್ರಯತ್ನಿಸಹುದು. ಇದಕ್ಕಾಗಿ 3% ಹೈಡ್ರೋಜನ್ ಪೆರಾಕ್ಸೈಡ್ ಬಳಸುವ ವಿಧಾನವನ್ನು ಶಿಫಾರಸು ಮಾಡಲಾಗುತ್ತದೆ. ಕವರ್ ಅನ್ನು ಜಿಪ್‌ಲಾಕ್ ಬ್ಯಾಗ್‌ನಲ್ಲಿ ಇರಿಸಿ ಭದ್ರವಾಗಿ ಮುಚ್ಚಲಾಗುತ್ತದೆ ಮತ್ತು ನಂತರ ಸುಮಾರು 2 ರಿಂದ 3 ಗಂಟೆಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಇರಿಸಲಾಗುತ್ತದೆ. ಇದರಿಂದ ಸೂರ್ಯನ ಕಿರಣಗಳು ಯುವಿ ಕಾಂತಿ ಹಾಗೂ ಹೈಡ್ರೋಜನ್ ಪೆರಾಕ್ಸೈಡ್ ಕವರ್‌ ಶುಭ್ರ ಮಾಡಲು ಕೆಲಸ ಮಾಡುತ್ತದೆ. ಇದರಿಂದ ಕವರ್‌ಗೆ ಹೊಸ ರೂಪ ಸಿಗುತ್ತದೆ.

66
ಬಳಸುವ ಮುನ್ನ ಎಚ್ಚರ ವಹಿಸಿ

ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸುವ ಮೊದಲು, ಅದು ಕವರ್‌ನ ವಸ್ತುವಿಗೆ ಸೂಕ್ತವೇ ಎಂದು ಪರಿಶೀಲಿಸುವುದು ಉತ್ತಮ. ಅಲ್ಲದೆ, ರಾಸಾಯನಿಕಗಳನ್ನು ಬಳಸುವಾಗ ಅವು ಚರ್ಮ ಮತ್ತು ಕಣ್ಣುಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ಹೊಸ ಕವರ್ ಅನ್ನು ಖರೀದಿಸುವ ಮೊದಲು ನೀವು ಈ ಸರಳ ಸ್ವಚ್ಛಗೊಳಿಸುವ ವಿಧಾನಗಳನ್ನು ಪರಿಗಣಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories