Money Plant Care Tips: ಮನೆಯ ಅಂದ ಹೆಚ್ಚಿಸುವ ಮನಿ ಪ್ಲಾಂಟ್ ಒಣಗುತ್ತಿದೆಯೇ? ಚಿಂತಿಸಬೇಡಿ! ಈ ಟ್ರಿಕ್ ಬಳಸಿ ಕೇವಲ ಕೆಲವೇ ದಿನಗಳಲ್ಲಿ ಗಿಡವನ್ನು ಮತ್ತೆ ಹಚ್ಚಹಸಿರಾಗಿಸಬಹುದು. ಹೇಗೆಂದು ಇಲ್ಲಿ ತಿಳಿಯಿರಿ.
ಮನಿ ಪ್ಲಾಂಟ್ ಗಿಡದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಹೆಚ್ಚಿನ ಜನರು ಇದನ್ನು ಮನೆಯ ಮುಖ್ಯ ದ್ವಾರದ ಬಳಿ ಬೆಳೆಸುತ್ತಾರೆ. ಏಕೆಂದರೆ, ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಸಂಪತ್ತು ವೃದ್ಧಿಯಾಗುವುದಲ್ಲದೆ, ವಾಸ್ತು ಪ್ರಕಾರವೂ ಶುಭ ಎಂದು ನಂಬಲಾಗುತ್ತದೆ. ಮನಿ ಪ್ಲಾಂಟ್ ಎಷ್ಟು ವೇಗವಾಗಿ ಮತ್ತು ಹಚ್ಚಹಸಿರಾಗಿ ಬೆಳೆಯುತ್ತದೆಯೋ, ಅಷ್ಟೇ ಅದೃಷ್ಟ ಒಲಿಯುತ್ತದೆ ಎಂಬುದು ಜನರ ನಂಬಿಕೆ. ಹಾಗಾಗಿಯೇ ಈ ಗಿಡದ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸುತ್ತಾರೆ.
25
ಈ ಸರಳ ಟ್ರಿಕ್ ಪಾಲಿಸಿ
ಆದರೆ ಬಿಸಿಲಿನ ತಾಪಕ್ಕೆ ಅಥವಾ ಕೆಲವು ಕಾರಣಗಳಿಗಾಗಿ ಮನಿ ಪ್ಲಾಂಟ್ ಒಣಗಲು ಶುರುವಾಗುತ್ತದೆ. ಗಿಡ ಒಣಗುತ್ತಿರುವುದನ್ನು ನೋಡಿ ಅನೇಕರು ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅಂತಹವರಿಗಾಗಿಯೇ ಇಲ್ಲಿದೆ ಒಂದು ಅದ್ಭುತ ಮನೆಮದ್ದು! ಈ ಸರಳ ಟ್ರಿಕ್ ಪಾಲಿಸಿದರೆ ಸಾಕು, ಬಾಡಿಹೋದ ಗಿಡವೂ ಮತ್ತೆ ಗುಂಪಾಗಿ ಚಿಗುರೊಡೆಯುತ್ತದೆ. ಆ ಟಿಪ್ಸ್ ಯಾವುವು ಎಂದು ನೋಡೋಣ ಬನ್ನಿ.
35
ಕೆಮಿಕಲ್ ಮಿಶ್ರಿತ ಉತ್ಪನ್ನ ಖರೀದಿಸುವ ಅಗತ್ಯವಿಲ್ಲ
ಮನಿ ಪ್ಲಾಂಟ್ ಎಲೆಗಳು ಬಣ್ಣಗೆಟ್ಟು ಒಂದೊಂದಾಗಿ ಉದುರಿ ಹೋಗುವುದು ಸಾಮಾನ್ಯ. ಇಂತಹ ಸಮಯದಲ್ಲಿ ಗಿಡದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವರು ಇದು ಯಾವುದೋ ಅಶುಭ ಸಂಕೇತ ಎಂದು ಭಾವಿಸುತ್ತಾರೆ. ಆದರೆ ಬಿಸಿಲಿಗೆ ಮನಿ ಪ್ಲಾಂಟ್ ಬಾಡುವುದು ಒಂದು ನೈಸರ್ಗಿಕ ಪ್ರಕ್ರಿಯೆ ಎನ್ನುತ್ತಾರೆ ತಜ್ಞರು. ಒಣಗುತ್ತಿರುವ ಗಿಡವನ್ನು ಮತ್ತೆ ಹಸಿರಾಗಿಸಲು ಹಣ ಕೊಟ್ಟು ಕೆಮಿಕಲ್ ಮಿಶ್ರಿತ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ, ಬದಲಿಗೆ ಈ ಮನೆಮದ್ದು ಬಳಸಿದರೆ ಸಾಕು.
ಒಂದು ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರೊಳಗಿನ ಜೆಲ್ ಅನ್ನು ಬೇರ್ಪಡಿಸಿ. ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 'ಅಲೋವೆರಾ ಜೆಲ್ ವಾಟರ್' ತಯಾರಿಸಿಕೊಳ್ಳಿ. ಈ ನೀರನ್ನು ಗಿಡದ ಬೇರುಗಳಿಂದ ಹಿಡಿದು ಎಲೆಗಳವರೆಗೆ ಪ್ರತಿದಿನ ಸ್ಪ್ರೇ ಮಾಡುತ್ತಿರಬೇಕು. ಇದರಿಂದ ಗಿಡಕ್ಕೆ ನೈಸರ್ಗಿಕ ಪೋಷಕಾಂಶಗಳು ಲಭ್ಯವಾಗಿ, ಬಾಡಿದ ಗಿಡವು ಮತ್ತೆ ಚಿಗುರಲು ಪ್ರಾರಂಭಿಸುತ್ತದೆ.
55
ಎಪ್ಸಮ್ ಸಾಲ್ಟ್ ಬಳಕೆ
ಎಪ್ಸಮ್ ಸಾಲ್ಟ್ ಗಿಡಗಳಲ್ಲಿ ಕ್ಲೋರೊಫಿಲ್ (ಪತ್ರಹರಿತ್ತು) ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅರ್ಧ ಲೀಟರ್ ನೀರಿನಲ್ಲಿ ಸ್ವಲ್ಪ ಎಪ್ಸಮ್ ಸಾಲ್ಟ್ ಮತ್ತು ಒಂದು ಚಮಚ ಅಲೋವೆರಾ ಜೆಲ್ ಬೆರೆಸಿ ಒಂದು ಇಡೀ ರಾತ್ರಿ ನೆನೆಯಲು ಬಿಡಿ. ಮರುದಿನ ಈ ದ್ರಾವಣವನ್ನು ಸ್ಪ್ರೇ ಬಾಟಲಿಗೆ ತುಂಬಿಸಿಕೊಳ್ಳಿ. ಈ ಮಿಶ್ರಣವನ್ನು ಪ್ರತಿದಿನ ಗಿಡಕ್ಕೆ ಸ್ಪ್ರೇ ಮಾಡುವುದರಿಂದ ಮನಿ ಪ್ಲಾಂಟ್ ನೈಸರ್ಗಿಕವಾಗಿ ಚಿಗುರುತ್ತದೆ. ಒಣಗಿದ ಗಿಡವೂ ಸಹ ಮತ್ತೆ ಹಸಿರಾಗಿ ಬದಲಾಗಿ ಸೊಂಪಾಗಿ ಬೆಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.