ಸೀಲಿಂಗ್ ಫ್ಯಾನ್ ಸ್ಪೀಡ್‌ನಲ್ಲಿ ತಿರುಗಿದ್ರೂ ತಂಗಾಳಿ ಬರುತ್ತಿಲ್ಲವೇ? ಇಲ್ಲಿದೆ 2 ರೂಪಾಯಿ ಪರಿಹಾರ

Published : Mar 24, 2026, 12:35 PM IST

ಬೇಸಿಗೆಯಲ್ಲಿ ನಿಮ್ಮ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿಲ್ಲವೇ? ಕೇವಲ ಎರಡು ರೂಪಾಯಿಯಿಂದ ತಂಪಾದ ಗಾಳಿಯನ್ನು ಪಡೆಯುವ ಸರಳ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನೀವು ಈ ಸುಲಭ ಉಪಾಯ ಬಳಸಿಕೊಳ್ಳಬಹುದು.

PREV
15
ಫ್ಯಾನ್

ಬೆಳಗ್ಗೆ 10 ಗಂಟೆ ಆಗ್ತಿದ್ದಂತೆ ಬಿಸಿಲು ಶುರುವಾಗುತ್ತದೆ. ಸೆಕೆ ಕಡಿಮೆಯಾಗಲೆಂದು ಫ್ಯಾನ್ ಆನ್ ಮಾಡಿದರೂ ಕೆಲವೊಮ್ಮೆ ತಂಪಾದ ಗಾಳಿ ಬರಲ್ಲ. ಫ್ಯಾನ್‌ನ ರೆಕ್ಕೆಗಳು ಗರಗರ ಅಂತ ತಿರುಗಿದ್ರೂ ಗಾಳಿ ಮಾತ್ರ ದೇಹಕ್ಕೆ ತಂಪು ನೀಡಲ್ಲ. ಕೇವಲ ಎರಡು ರೂಪಾಯಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

25
ತಂಪಾದ ಗಾಳಿ

ಹೌದು, ಸೀಲಿಂಗ್ ಫ್ಯಾನ್‌ನಿಂದ ತಂಪಾದ ಗಾಳಿ ಬರುತ್ತಿರಲ್ಲ. ಇದಕ್ಕೆ ಕಾರಣ ನಿಮ್ಮ ಫ್ಯಾನ್ ರೆಕ್ಕೆಗಳ ಮೇಲೆ ಕುಳಿತಿರುವ ಧೂಳು. ರೆಕ್ಕೆಗಳ ಮೇಲಿರುವ ಧೂಳು ತೆಗೆಯಲು ನೀವು ಎರಡು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಎರಡು ರೂಪಾಯಿಯ ಪರಿಹಾರ ಏನು ಎಂದು ನೋಡೋಣ ಬನ್ನಿ.

35
ಧೂಳು

ಎರಡು ರೂಪಾಯಿ ನೀಡಿ ಅಂಗಡಿಯಿಂದ ಶಾಂಪ್ಯೂ ತೆಗೆದುಕೊಂಡು ಬನ್ನಿ. ಒಂದು ಬಕೆಟ್‌ಗೆ ನೀರು ಹಾಕಿ, ಅದಕ್ಕೆ ಶಾಂಪ್ಯೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಎತ್ತಿಟ್ಟುಕೊಳ್ಳಿ. ತದನಂತರ ಒಣಬಟ್ಟೆಯಿಂದ ಸೀಲಿಂಗ್ ಫ್ಯಾನ್ ರೆಕ್ಕೆಗಳ ಮೇಲೆ ಧೂಳು ಕ್ಲೀನ್ ಮಾಡಿಕೊಳ್ಳಿ.

45
ಕಾಟನ್ ಬಟ್ಟೆ

ನಂತರ ಶಾಂಪ್ಯೂ ಸೇರಿಸಿರುವ ನೀರಿಗೆ ಕಾಟನ್ ಬಟ್ಟೆ ಅದ್ದಿ ನಿಮ್ಮ ಸೀಲಿಂಗ್ ಫ್ಯಾನ್ ಸಂಪೂರ್ಣವಾಗಿ ಸ್ವಚ್ಛವಾಗಿಸಿಕೊಳ್ಳಿ. ನಂತರ ಒಣಬಟ್ಟೆಯಿಂದ ಮತ್ತೊಮ್ಮೆ ಸೀನಿಂಗ್ ಫ್ಯಾನ್ ಮೇಲಿನ ತೇವ ಒರಿಸಿಕೊಂಡ್ರೆ ತಂಪಾದ ಗಾಳಿ ನಿಮ್ಮದಾಗುತ್ತದೆ. ಈ ರೀತಿ ಫ್ಯಾನ್ ಸ್ವಚ್ಛಗೊಳಿಸಿದ್ರೆ ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ: ಹನಿಮೂನ್​ ಲ್ಯಾಂಡ್​ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?

55
ಧೂಳು, ಕಸಕಡ್ಡಿ

ಇದೇ ರೀತಿಯಲ್ಲಿಯೇ ನಿಮ್ಮ ಬಳಿ ಟೇಬಲ್ ಫ್ಯಾನ್ ಸಹ ಸ್ವಚ್ಛಗೊಳಿಸಿಕೊಳ್ಳಬಹುದು. ಏರ್ ಕೂಲರ್‌ನಿಂದಲೂ ತಂಪಾದ ಗಾಳಿ ಬರದಿದ್ರೂ ಅದನ್ನು ಕ್ಲೀನ್ ಮಾಡಿಕೊಳ್ಳಿ. ಏರ್‌ ಕೂಲರ್‌ನಿಂದ ಗಾಳಿ ಬೀಸುವ ಭಾಗದಲ್ಲಿ ಅತಿಯಾದ ಧೂಳು, ಕಸಕಡ್ಡಿ ಸಿಲುಕಿದ್ರೂ ಗಾಳಿಯ ವೇಗ ಕಡಿಮೆಯಾಗಿರುತ್ತದೆ.

ಇದನ್ನೂ ಓದಿ: ಮದುವೆ, ಡಿವೋರ್ಸ್​ ಬಗ್ಗೆ ರಾಜ್​ ಬಿ.ಶೆಟ್ಟಿ ಓಪನ್​ ಮಾತು: ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories