ಡ್ರೈ ಕ್ಲೀನಿಂಗ್‌ಗೆ ಕೊಡದೇ ಮನೆಯಲ್ಲಿಯೇ ದುಬಾರಿ ರೇಷ್ಮೆ ಸೀರೆಗಳನ್ನು ತೊಳೆಯೋದು ಹೇಗೆ?

Published : May 06, 2026, 12:29 PM IST

ದುಬಾರಿ ರೇಷ್ಮೆ ಸೀರೆಗಳನ್ನು ಸಾಮಾನ್ಯವಾಗಿ ಡ್ರೈ ಕ್ಲೀನಿಂಗ್‌ಗೆ ನೀಡಲಾಗುತ್ತದೆ, ಆದರೆ ಮನೆಯಲ್ಲಿಯೇ ಇವುಗಳನ್ನು ಕಾಳಜಿಯಿಂದ ತೊಳೆಯಬಹುದು.  ಹೆಚ್ಚು ಉಜ್ಜದೆ ಸೀರೆಯ ಮೃದುತ್ವವನ್ನು ಕಾಪಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ರೇಷ್ಮೆ ಸೀರೆಗಳು

ಮದುವೆ, ಸಮಾರಂಭ, ಪೂಜೆ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ಬಂದ್ರೆ ತಿಜೋರಿಯಲ್ಲಿರುವ ಬೆಲೆಬಾಳುವ ರೇಷ್ಮೆ ಸೀರೆಗಳು ಬರುತ್ತವೆ. ಇಂತಹ ವಿಶೇಷ ದಿನಗಳಲ್ಲಿ ಧರಿಸುವ ಉದ್ದೇಶದಿಂದ ಮಹಿಳೆಯರು ದುಬಾರಿ ಬೆಲೆ ಸೀರೆಗಳನ್ನು ಎತ್ತಿಟ್ಟುಕೊಂಡಿರುತ್ತಾರೆ. ಆದ್ರೆ ಈ ಸೀರೆಗಳ ನಿರ್ವಹಣೆಯೂ ಸಹ ಕೊಂಚ ದುಬಾರಿಯಾಗಿರುತ್ತದೆ.

25
ಸೀರೆ ಕ್ಲೀನಿಂಗ್

ಇಂತಹ ಸೀರೆಗಳನ್ನು ಶುಚಿಗೊಳಿಸಲು ಡ್ರೈ ಕ್ಲೀನಿಂಗ್ ಮಾಡಲು ನೀಡಬೇಕಾಗುತ್ತದೆ. ಹಾಗಾಗಿ ಧರಿಸಿದ ನಂತರ ಸೀರೆಗಳು ಮತ್ತೆ ತಿಜೋರಿಯಲ್ಲಿಡುತ್ತಾರೆ. ಈ ರೀತಿ ಮಾಡೋದರಿಂದ ಸೀರೆಗಳನ್ನು ಮೂರರಿಂದ ನಾಲ್ಕು ಬಾರಿ ಧರಿಸಬಹುದಾಗಿದೆ. ಆದ್ರೆ ಕೆಲವೊಮ್ಮೆ ಸೀರೆ ಮೇಲೆ ಕಲೆಗಳು ಉಂಟಾದಾಗ ಡ್ರೈ ಕ್ಲೀನಿಂಗ್‌ ನೀಡೋದು ಅನಿವಾರ್ಯವಾಗುತ್ತದೆ. ಇಂದು ಮನೆಯಲ್ಲಿಯೇ ಇಂತಹ ಸೀರೆಗಳನ್ನು ತೊಳೆಯೋದು ಹೇಗೆ ಎಂದು ನೋಡೋಣ ಬನ್ನಿ.

35
ಸೀರೆ ಮೇಲಿನ ಕಲೆಗಳು

ನಿಮ್ಮ ರೇಷ್ಮೆ ಸೀರೆ ಮೇಲೆ ಯಾವುದೇ ರೀತಿಯ ಕಲೆಗಳು ಉಂಟಾಗಿದ್ರೆ ನಿಂಬೆಹಣ್ಣು ಬಳಸಿ. ಕಲೆ ಮೇಲೆ ಕೆಲವು ನಿಂಬೆಹಣ್ಣಿನ ರಸ ಹಾಕಿ ಕೈಗಳಿಂದ ಸವರಬೇಕು. ನಂತರ ತಣ್ಣೀರಿನಿಂದ ತೊಳೆಯಬೇಕು. (ಕೆಲ ಸೀರೆಗಳ ಬಣ್ಣ ನಿಂಬೆಹುಳಿಯಿಂದ ಮಾಸುತ್ತದೆ. ಹಾಗಾಗಿ ಬಳಕೆಗೂ ಮುನ್ನ ಸೀರೆಯ ಅಂಚಿನಲ್ಲಿ ನಿಂಬೆಹಣ್ಣಿನ ರಸ ಸಿಂಪಡಿಸಿ ಖಚಿತಪಡಿಸಿಕೊಳ್ಳಿ)

45
ಡಿಟರ್ಜೆಂಟ್

ಮೈಸೂರು ಸಿಲ್ಕ್, ಬನಾರಸಿ, ಕಾಂಚೀಪುರಂ ಅಂತಹ ಸೀರೆಗಳನ್ನು ತೊಳೆಯಲು ಸಾಮಾನ್ಯ ಡಿಟರ್ಜೆಂಟ್ ಬಳಸಬಾರದು. ಬೇಬಿ ಶಾಂಪೂ ಅಥವಾ ಇಂತಹ ಸೀರೆಗಳ ವಾಶ್‌ಗಾಗಿ ಇಂದು ಮಾರುಕಟ್ಟೆಯಲ್ಲಿ ಡಿಟರ್ಜೆಂಟ್ ಸಿಗುತ್ತದೆ. ಇವುಗಳ ಸಹಾಯದಿಂದ ಕಲೆಗಳನ್ನು ತೆಗೆಯಬಹುದು.

55
ಹೆಚ್ಚು ಉಜ್ಜಬೇಡಿ

ಈ ಸೀರೆಗಳು ತುಂಬಾನೇ ಸಾಫ್ಟ್ ಆಗಿದ್ದು, ತೊಳೆಯುವಾಗ ಹೆಚ್ಚು ಉಜ್ಜಬಾರದು. ಈ ರೀತಿ ಮಾಡೋದರಿಂದ ಸೀರೆಯ ಮೃದುತ್ವ ನಶಿಸಿ ಹೋಗುತ್ತದೆ. ಹಾಗೆಯೇ ಸೀರೆ ಬಣ್ಣವನ್ನು ಕಳೆದುಕೊಳ್ಳುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories