How to clean Washing Machine: ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್‌ನಲ್ಲೂ ಕೊಳೆ, ಕೆಟ್ಟ ವಾಸನೆ ಸೇರಿಕೊಳ್ಳುತ್ತದೆ. ಇದರಿಂದ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗದೆ, ಹಳೆಯದರಂತೆಯೇ ಕಾಣಿಸುತ್ತವೆ. ಈ ಸಮಸ್ಯೆಯನ್ನು ನಿವಾರಿಸಿ, ಮೆಷಿನ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್!
ಅರ್ಧ ನಿಂಬೆಹಣ್ಣಿನ ಮೇಲೆ ಸ್ವಲ್ಪ ಟೂತ್‌ಪೇಸ್ಟ್ (Toothpaste) ಹಚ್ಚಿ, ಅದನ್ನು ವಾಷಿಂಗ್ ಮೆಷಿನ್‌ನ ಒಳಭಾಗದಲ್ಲಿ ಚೆನ್ನಾಗಿ ಉಜ್ಜಿ. ನಂತರ, ಖಾಲಿ ನೀರನ್ನು ಮಾತ್ರ ಹಾಕಿ ಮೆಷಿನ್ ಓಡಿಸಿದರೆ (Empty Cycle), ಒಳಭಾಗ ಹೊಳೆಯುವುದರ ಜೊತೆಗೆ ನಿಂಬೆಯ ಸುವಾಸನೆಯೂ ಬರುತ್ತದೆ.
25
ಮೌತ್‌ವಾಶ್ ದ್ರವದ ಮ್ಯಾಜಿಕ್
ಬಾಯಿ ಮುಕ್ಕಳಿಸಲು ಬಳಸುವ ಎರಡು ಮುಚ್ಚಳ ಮೌತ್‌ವಾಶ್ (Mouthwash) ಅನ್ನು ಡಿಟರ್ಜೆಂಟ್ ಬಾಕ್ಸ್‌ನಲ್ಲಿ ಹಾಕಿ. ಮೆಷಿನ್ ಅನ್ನು 'ಕ್ವಿಕ್ ವಾಶ್' (Quick Wash) ಮೋಡ್‌ನಲ್ಲಿ ಚಲಾಯಿಸಿದರೆ, ಒಳಗೆ ಅಡಗಿರುವ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸಂಪೂರ್ಣವಾಗಿ ನಾಶವಾಗುತ್ತವೆ.
35
ಆಪಲ್ ಸೈಡರ್ ವಿನೆಗರ್
ಫ್ರಂಟ್ ಲೋಡ್ ಮೆಷಿನ್‌ಗಳ (Front Load) ರಬ್ಬರ್ ಗ್ಯಾಸ್ಕೆಟ್‌ನಲ್ಲಿ ಹೆಚ್ಚು ಕೊಳೆ ಸೇರುತ್ತದೆ. ಆಪಲ್ ಸೈಡರ್ ವಿನೆಗರ್‌ನಲ್ಲಿ (Apple Cider Vinegar) ಅದ್ದಿದ ಹತ್ತಿ ಬಟ್ಟೆಯಿಂದ ಈ ರಬ್ಬರ್ ಭಾಗವನ್ನು ಒರೆಸಿದರೆ, ಅಲ್ಲಿರುವ ಕಪ್ಪು ಕಲೆಗಳು ತಕ್ಷಣ ಮಾಯವಾಗುತ್ತವೆ.
ಸೋಪ್ ಪೌಡರ್ ಹಾಕುವ ಬಾಕ್ಸ್ ಅನ್ನು ಪ್ರತ್ಯೇಕವಾಗಿ ತೆಗೆದು, ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ (Baking Soda) ಬೆರೆಸಿ 10 ನಿಮಿಷ ನೆನೆಸಿಡಿ. ನಂತರ ಹಳೆಯ ಬ್ರಷ್‌ನಿಂದ ಉಜ್ಜಿದರೆ, ಗಟ್ಟಿಯಾದ ಸೋಪಿನ ಕಣಗಳು ಹೋಗಿ ಹೊಸದರಂತೆ ಆಗುತ್ತದೆ.
55
ಸಂಗ್ರಹವಾದ ಕಸವನ್ನು ತೆಗೆಯಿರಿ
ಬಟ್ಟೆಗಳಿಂದ ಬರುವ ನೂಲಿನ ಎಳೆಗಳು ಮತ್ತು ನಾಣ್ಯಗಳು ಮೆಷಿನ್‌ನ ಕೆಳಭಾಗದಲ್ಲಿರುವ ಫಿಲ್ಟರ್‌ನಲ್ಲಿ ಸಂಗ್ರಹವಾಗುತ್ತವೆ. ತಿಂಗಳಿಗೊಮ್ಮೆ ಈ ಫಿಲ್ಟರ್ ತೆರೆದು, ಅದರಲ್ಲಿರುವ ಕಸವನ್ನು ತೆಗೆದರೆ ಮೆಷಿನ್‌ನ ಬಾಳಿಕೆ ಹೆಚ್ಚುತ್ತದೆ.
ಕೆಟ್ಟ ವಾಸನೆ ತಡೆಯಲು ಸುಲಭ ದಾರಿ
ಬಟ್ಟೆ ಒಗೆದು ಮುಗಿದ ತಕ್ಷಣ ವಾಷಿಂಗ್ ಮೆಷಿನ್ ಬಾಗಿಲನ್ನು ಮುಚ್ಚಬಾರದು. ಕನಿಷ್ಠ ಅರ್ಧ ಗಂಟೆಯಾದರೂ ಅದರ ಬಾಗಿಲನ್ನು ತೆರೆದಿಟ್ಟರೆ, ಒಳಗಿನ ತೇವಾಂಶ ಒಣಗಿ, ಫಂಗಸ್ ಬೆಳೆಯುವುದನ್ನು ಸಂಪೂರ್ಣವಾಗಿ ತಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.