ಜಿಡ್ಡಿನ ಚರ್ಮಕ್ಕೆ ಫೇಸ್ ಪ್ಯಾಕ್...
ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು, ಪಪ್ಪಾಯಿ, ಸೌತೆಕಾಯಿ
ಈ ಬಾಳೆಹಣ್ಣಿನ ಫೇಸ್ ಪ್ಯಾಕ್, ಪಪ್ಪಾಯಿ, ಸೌತೆಕಾಯಿ ಮತ್ತು ಬಾಳೆಹಣ್ಣಿನ ಮಿಶ್ರಣವು ಎಣ್ಣೆಯುಕ್ತ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತದೆ. ಬಾಳೆಹಣ್ಣು ಮತ್ತು ಪಪ್ಪಾಯಿ ಮಿಶ್ರಣವನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ. ಸೌತೆಕಾಯಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದ ಮುಖದಲ್ಲಿ ಹೊಳಪು ಕಾಣಿಸುತ್ತದೆ. ಇದಕ್ಕಾಗಿ.... 1/4 ಪಪ್ಪಾಯಿ, 1/4 ಸೌತೆಕಾಯಿ ಮತ್ತು 1/2 ಬಾಳೆಹಣ್ಣನ್ನು ಸೇರಿಸಿ ನಯವಾದ ಪೇಸ್ಟ್ ಮಾಡಿ. ಪೇಸ್ಟ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿದ ನಂತರ, 15 ನಿಮಿಷ ಕಾಯಿರಿ. ನಂತರ, ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಯೌವನವಾಗಿ ಕಾಣಲು....
ಯೌವನವಾಗಿ ಕಾಣಲು ನೀವು ಮೊಸರು ಮತ್ತು ಬಾಳೆಹಣ್ಣಿನ ಮಿಶ್ರಣವನ್ನು ಬಳಸಿದರೆ ಸಾಕು. ಮೊಸರಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಮತ್ತು ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಲ್ಯಾಕ್ಟಿಕ್ ಆಮ್ಲವೂ ಇದ್ದು, ಇದು ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಮತ್ತು ಮೊಸರಿನ ಸಂಯೋಜನೆಯು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮವನ್ನು ಯೌವನವಾಗಿಡಲು ಸಹಕಾರಿ. ಇದಕ್ಕಾಗಿ.. ಒಂದು ಬಟ್ಟಲಿನಲ್ಲಿ ಅರ್ಧ ಮಾಗಿದ ಬಾಳೆಹಣ್ಣಿಗೆ 2 ಚಮಚ ಮೊಸರು ಸೇರಿಸಿ ನುಣ್ಣಗೆ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಸಮಾನವಾಗಿ ಹಚ್ಚಿ. 15 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿದರೆ ಸಾಕು.