ಹೆಸರು ಹೇಳೋಕೆ ಕಷ್ಟಪಡಬೇಕಾದ ಜಗತ್ತಿನ 5 ಅಪರೂಪದ ಸ್ಕಾಚ್ಸ್‌!

First Published | Nov 29, 2024, 2:58 PM IST

ಜಗತ್ತಿನಲ್ಲಿ ಸಾಕಷ್ಟು ಅಪರೂಪದ ಸ್ಕಾಚ್‌ ವಿಸ್ಕಿಗಳಿವೆ. ಇವು ಎಷ್ಟು ಅಪರೂಪ ಎಂದರೆ ಇವುಗಳ ಹೆಸರನ್ನು ನೀವು ಸುಲಭವಾಗಿ ಉಚ್ಛಾರ ಮಾಡಲು ಸಾಧ್ಯವೇ ಇಲ್ಲ. ಶೇ. 95ರಷ್ಟು ಮಂದಿ ಇವುಗಳ ಹೆಸರ ಉಚ್ಛಾರಣೆಯನ್ನು ತಪ್ಪಾಗಿಯೇ ಮಾಡುತ್ತಾರೆ.

ಸ್ಕಾಚ್‌ ವಿಸ್ಕಿ ಅಂದರೆ ಕುಡುಕರ ತಲೆ ಧಿಮ್‌ ಎನ್ನುತ್ತದೆ. ಆದರೆ, ಪ್ರಪಂಚದಲ್ಲಿ ಕೆಲವೊಂದು ಸ್ಕಾಚ್‌ ವಿಸ್ಕಿಗಳಿದ್ದು, ಅವುಗಳ ಹೆಸರನ್ನು ಉಚ್ಛಾರಣೆ ಮಾಡೋದೆ ಕಷ್ಟ. ಈ ಲೇಖನದಲ್ಲಿ ಪ್ರಪಂಚದ ಐದು ಸ್ಕಾಚ್‌ ವಿಸ್ಕಿಗಳು ಸುವಾಸನೆಯ ಕಾರಣಕ್ಕಾಗಿ ಮಾತ್ರವಲ್ಲ ತನ್ನ ಹೆಸರಿನಲ್ಲೂ ಹೊಸ ಸಾಹಸ ಮಾಡುತ್ತಿದೆ. ಇವುಗಳು ಸ್ಕಾಟ್ಲೆಂಡ್‌ನ ವಿಸ್ಕಿ ಪರಂಪರೆಯನ್ನು ಮಾತ್ರವಲ್ಲದೆ, ಅಲ್ಲಿನ ಶ್ರೀಮಂತ ಭಾಷಾ ಪರಂಪರೆಯನ್ನೂ ನೋಡಬಹುದಾಗಿದೆ.
 

Bruichladdich

ಬ್ರೂಚ್ಲಾಡಿಚ್ (Bruichladdich) ಅಂತಾ ನೀವು ಇದನ್ನು ಓದಬಹುದಾದರೂ ಇದರ ಉಚ್ಚಾರಣೆ ಬ್ರೂಕ್ಲಾಡೀ (bru-kla-dee). ಇಸ್ಲೇಯ ಲೊಚ್ ಇಂಡಾಲ್‌ನ ಪಶ್ಚಿಮ ತೀರದಲ್ಲಿ ರೆಮಿ ಕೊಯಿಂಟ್ರೂ-ಮಾಲೀಕತ್ವದ ಡಿಸ್ಟಿಲರಿಯ ಸ್ಕಾಚ್‌ ವಿಸ್ಕಿ ಇದು. 1881ರಲ್ಲಿ ಆರಂಭವಾದ ಈ ಡಿಸ್ಟಲರಿಯ ಬ್ರೂಕ್ಲಾಡೀ  ಸೌಮ್ಯವಾದ, ಹೂವಿನ ಮತ್ತು ಜೇನುತುಪ್ಪದ ವಿಸ್ಕಿಗಳಿಗೆ ಹೆಸರುವಾಸಿಯಾಗಿದೆ. ಇದರ ಒಂದು ಬಾಟಲ್‌ನ ಬೆಲೆ 40 ಸಾವಿರ ರೂಪಾಯಿ. ಫೆಬ್ರವರಿ 2024 ರಲ್ಲಿ ಹೊಸ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುವುದರೊಂದಿಗೆ ಬ್ರೂಕ್ಲಾಡೀ 21 ವರ್ಷದ ಹಳೆಯ ಬಾಟಲ್‌ಅನ್ನು ನವೀಕರಿಸಿದ್ದಾರೆ. ಬ್ರೂಕ್ಲಾಡೀ ಥರ್ಟಿ ಅನ್ನು ಸಹ ಅನಾವರಣಗೊಳಿಸಲಾಯಿತು.
 

Latest Videos


Bunnahabhain

ಬುನ್ನಾಹ್‌ಬೈನ್‌ ಎಂದು ನಾವಿದನ್ನು ಓದಬಹುದಾದರೂ, ಇದರ ಉಚ್ಛಾರಣೆ, ಬುನಾಹವ್‌ಎನ್‌ (Bu-Nah-Hav-En). ಒಂದು ಬಾಟಲ್‌ನ ಬೆಲೆ 2.60 ಲಕ್ಷ ರೂಪಾಯಿ. ಇಸ್ಲೇ ಡಿಸ್ಟಿಲರಿ ದ್ವೀಪದ ಈಶಾನ್ಯ ಕರಾವಳಿಯಲ್ಲಿದೆ. ಬ್ರೂಕ್ಲಾಡೀನಂತೆ, ಇದನ್ನು 1881 ರಲ್ಲಿ ವಿಕ್ಟೋರಿಯನ್ ವಿಸ್ಕಿಯ ಕ್ರಾಂತಿಯ ಮಧ್ಯೆ ಸ್ಥಾಪಿಸಲಾಯಿತು. ಡಿಸ್ಟಿಲರಿಯು ಈ ಹಿಂದೆ ಪೀಟೆಡ್ ಸಿಂಗಲ್ ಮಾಲ್ಟ್‌ಗಳನ್ನು ಉತ್ಪಾದನೆ ಮಾಡುತ್ತಿತ್ತು. 1960 ರ ದಶಕದಿಂದ ಬುನಾಹವ್‌ಎನ್‌ ಪ್ರಧಾನವಾಗಿ ಶೆರ್ರಿ ಪೀಪಾಯಿಗಳಲ್ಲಿ ಏಜಡ್‌ ಪೀಟ್ ಮಾಡದ ವಿಸ್ಕಿಯನ್ನು ಉತ್ಪಾದಿಸುತ್ತಿದೆ. ಇಲ್ಲಿಯವರೆಗೂ ಕೇವಲ 594 ಬಾಟಲ್‌ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ.
 

Glen Garioch

ಗ್ಲೆನ್‌ ಗ್ಯಾರಿಯೋಚ್ ಎಂದು ನಾವು ಹೇಳಬಹುದಾದರೂ, ಇದರ ಸರಿಯಾದ ಉಚ್ಛಾರಣೆ ಗ್ಲೆನ್‌ ಗೀರೇ (Glen-Geery). ಡಿಸ್ಟಿಲರಿಯು ತನ್ನ ಹೆಸರನ್ನು ಗೀರೇಯ ಹತ್ತಿರದ ಕಣಿವೆಯಿಂದ ಪಡೆದುಕೊಂಡಿದೆ, ಇದು ಸ್ಕಾಟ್ಲೆಂಡ್‌ನ ಅತ್ಯುತ್ತಮ ಬಾರ್ಲಿ-ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ಸ್ಕಾಟ್ಲೆಂಡ್‌ನ ಅನೇಕ ಡಿಸ್ಟಿಲರಿಗಳು 'ಗ್ಲೆನ್' ಪೂರ್ವಪ್ರತ್ಯಯವನ್ನು ಹೊಂದಿರುತ್ತವೆ. ಸ್ಕಾಟ್ಸ್‌ ಗೇಲಿಕ್‌ನಲ್ಲಿ 'ಗ್ಲೆನ್' ಎಂದರೆ 'ಕಣಿವೆ' ಎಂದರ್ಥವಾಗಿದೆ. ಸ್ಕಾಟಿಷ್ ಹೈಲ್ಯಾಂಡ್ಸ್‌ನ ಓಲ್ಡ್‌ಮೆಲ್ಡ್ರಮ್‌ನಲ್ಲಿರುವ ಗ್ಲೆನ್‌ ಗೀರೇ ಅನ್ನು 1797 ರಲ್ಲಿ ಥಾಮಸ್ ಸಿಂಪ್ಸನ್ ಸ್ಥಾಪಿಸಿದರು. ಸ್ಕಾಟ್ಲೆಂಡ್‌ನ ಅತ್ಯಂತ ಹಳೆಯ ಕಾರ್ಯಾಚರಣೆಯ ಡಿಸ್ಟಿಲರಿಗಳಲ್ಲಿ ಒಂದಾಗಿದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 2.87 ಲಕ್ಷ ರೂಪಾಯಿ.

ಒರಿಜಿನಲ್‌ ಚಾಯ್ಸ್‌ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್‌!

Auchentoshan

ಔಚೆಂಟೋಶನ್ ಎಂದು ನಾವಿದನ್ನು ಕರೆಯಬಹುದಾದರೂ ಇದರ ಉಚ್ಛಾರಣೆ 'ಔಕುಂತೋಷ್‌ಉನ್‌'(Ock-Un-Tosh-Un). ಇದು ಲೋಲ್ಯಾಂಡ್ ಡಿಸ್ಟಿಲರಿಯಾಗಿದ್ದು, ಇದು ಗ್ಲ್ಯಾಸ್ಗೋದ ಉತ್ತರಕ್ಕೆ ಕ್ಲೈಡ್ ನದಿಯ ಮುಖಭಾಗದಲ್ಲಿದೆ. 'ಉಚ್ಛಾರ ಮಾಡೋಕೆ ಕಷ್ಟ, ಕುಡಿಯಲು ಸುಲಭ..' ಸಂತಾ ಸ್ವತಃ ಈ ಕಂಪನಿಯೇ ಹೇಳಿಕೊಳ್ಳುತ್ತದೆ.  ಡಿಸ್ಟಿಲರಿಯು ಸ್ಕಾಟಿಷ್ ಗೇಲಿಕ್ ನುಡಿಗಟ್ಟು 'ಅಚಾದ್ ಆನ್ ಓಸಿನ್' ಅಂದರೆ ಇಂಗ್ಲಿಷ್‌ನಲ್ಲಿ 'ಸ್ಥಳದ ಮೂಲೆ'ಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.1817 ರಲ್ಲಿ ಜಾನ್ ಬುಲೋಚ್ ಸ್ಥಾಪಿಸಿದ ಔಕುಂತೋಷ್‌ಉನ್‌, ಸ್ಕಾಟ್ಲೆಂಡ್‌ನಲ್ಲಿ ಟ್ರಿಪಲ್ ಡಿಸ್ಟಿಲೇಷನ್ ಅನ್ನು ಪ್ರತ್ಯೇಕವಾಗಿ ಬಳಸುವ ಏಕೈಕ ವಿಸ್ಕಿ ಡಿಸ್ಟಿಲರಿ ಎಂದು ಪ್ರಸಿದ್ಧವಾಗಿದೆ. ಎಲ್ಲಾ ಉತ್ಪಾದನೆಯನ್ನು ಸಿಂಗಲ್‌ ಮಾಲ್ಟ್‌ಗಳಿಗೆ ಬಳಸಲಾಗುತ್ತದೆ. ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 55 ಸಾವಿರ ರೂಪಾಯಿ.

ಭಾರತ ಬಿಟ್ಟು ಲಂಡನ್‌ಗೆ ಹೋದ ಸಾಲಗಾರ ಮಲ್ಯ, ಇಂಗ್ಲೆಂಡ್‌ಗೇ 'ಕಿಂಗ್‌ಫಿಶರ್‌ ಬಿಯರ್‌' ಕರೆಸಿಕೊಂಡ್ರು!

Caol Ila

ಕಾಲ್ ಇಲಾ ಎಂದು ನೀವಿದನ್ನೂ ಉಚ್ಛಾರ ಮಾಡಿದರೂ, ಇದರ ಸರಿಯಾದ ಉಚ್ಛಾರಣೆ ಕುಲ್ ಇಲಾಹ್ (Cull-Ee-Lah). ಇದರ ಒಂದು ಸಿಂಗಲ್‌ ಬಾಟಲ್‌ನ ಬೆಲೆ 59 ಸಾವಿರ ರೂಪಾಯಿ. ಕುಲ್ ಇಲಾಹ್ ಎಂಬುದು ಸೌಂಡ್ ಆಫ್ ಇಸ್ಲೇಗೆ ಸ್ಕಾಟಿಷ್ ಗೇಲಿಕ್ ಹೆಸರಾಗಿದೆ. ಐಲ್ ಆಫ್ ಜುರಾದಿಂದ ಇಸ್ಲೇಯನ್ನು ಪ್ರತ್ಯೇಕಿಸುವ ನೀರಿನ ಭಾಗ ಇದು. ಈ ಡಿಸ್ಟಿಲರಿ  ಬುನಾಹವ್‌ಎನ್‌ ದಕ್ಷಿಣಕ್ಕೆ ಪೋರ್ಟ್ ಅಸ್ಕೈಗ್‌ನ ಉತ್ತರದಲ್ಲಿದೆ.
 

click me!