Chanakya Niti: ಕಚೇರಿಯಲ್ಲಾಗಲಿ, ಸಮಾಜದಲ್ಲಾಗಲಿ ನಿಮ್ಮ ಬಗ್ಗೆ ನೀವು ಸಾಬೀತುಪಡಿಸುವ ಅಗತ್ಯವಿಲ್ಲ. ಆಚಾರ್ಯ ಚಾಣಕ್ಯರ ಈ ಆರು ನೀತಿಗಳು ಅನುಸರಿಸಿದರೆ ಯಶಸ್ವಿ ಜೀವನ ನಡೆಸಲು ಸಾಧ್ಯ. ಆ ನೀತಿಗಳು ಯಾವಾವು ಎಂದು ತಿಳಿಯಿರಿ.
ಆಚಾರ್ಯ ಚಾಣಕ್ಯರ ನೀತಿಗಳು ಇಂದಿಗೂ ಮಾರ್ಗದರ್ಶಕವಾಗಿವೆ. ಅವರ ಮಾತಲ್ಲಿ ಆಳವಾದ ಅರ್ಥವಿದೆ. ಜೀವನದ ಮೌಲ್ಯ, ಗೌರವ ಮತ್ತು ಪ್ರತಿಷ್ಠೆಯನ್ನ ಮಾತಿನಿಂದಲ್ಲ, ನಮ್ಮ ನಡೆವಳಿಕೆಯಿಂದ ಗಳಿಸಬೇಕು. ನೀವು ಎಂಥವರು, ನಿಮ್ಮ ಪ್ರಮಾಣಿಕತೆಯೇನು?, ಮೌಲ್ಯವೇನು ಎಂಬುದನ್ನ ಯಾವಾಗಲೂ ಇತರರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ. ಚಾಣಕ್ಯರ ಈ ಮಾತುಗಳನ್ನು ಅರ್ಥೈಸಿಕೊಂಡರೆ, ಪಾಲಿಸಿದರೆ ನೀವು ಜೀವನದಲ್ಲಿ ಯಶಸ್ವಿಯಾಗಲು, ಕೆಲಸದ ಸ್ಥಳದಲ್ಲಿ ಗೌರವ ಗಳಿಸಬೇಕೆಂದರೆ ಚಾಣಕ್ಯರ ಈ ಏಳು ತತ್ವಗಳನ್ನ ತಿಳಿದುಕೊಂಡು ಪಾಲಿಸಿದರೆ ಜನರು ನಿಮ್ಮ ವ್ಯಾಲ್ಯೂ ಗುರುತಿಸುತ್ತಾರೆ, ನಿಮ್ಮ ಗೌರವಿಸುತ್ತಾರೆ.
26
ನೀವು ಯಾರೆಂಬುದು ಪದೇಪದೆ ಸಾಬೀತುಪಡಿಸಬೇಡಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ಕೆಲಸದಲ್ಲಿ ಗೌರವ, ಉತ್ತಮ ರೀತಿಯಲ್ಲಿ ಗುರುತಿಸಿಕೊಳ್ಳಲು ಇಷ್ಟಪಡ್ತಾರೆ.ಇದು ಆಫೀಸ್ನಲ್ಲಷ್ಟೇ ಅಲ್ಲ, ಆಫೀಸಿನಿಂದಾಚೆಗೂ ಹೊರಗಿನ ಸಮಾಜದಲ್ಲಿ ಗುರುತಿಸುವಂತಾಗಬೇಕು, ನಿಮ್ಮಲ್ಲಿನ ಒಳ್ಳೆಯತನ, ಕೆಲಸದ ಗುಣಮಟ್ಟ, ಬದುಕಿನ ಮೌಲ್ಯಗಳು ಗುರುತಿಸಬೇಕು, ಗೌರವಿಸಬೇಕು ಎಂದು ಎಲ್ಲರೂ ಬಯಸುತ್ತಾರೆ.
ಆದರೆ ಅದನ್ನು ನೀವು ಪದೇಪದೆ ಸಾಬೀತುಪಡಿಸಬೇಕಾಗಿಲ್ಲ. ಕೆಲವರು ತಾವು ತೋರಿಕೆಗೆ ಒಳ್ಳೆಯವರಂತೆ ತಾವೇ ತೋರಿಸಿಕೊಳ್ಳುತ್ತಾರೆ. ಸೋಷಿಯಲ್ ಮೀಡಿಯಾ ಬಂದ ಬಳಿಕ ಸಹಾಯ ಮಾಡುವ ವಿಡಿಯೋ, ಒಳ್ಳೆಯವರಂತೆ ನಟನೆ ಮಾಡುವುದು ಇವೆಲ್ಲ ತಾವು ಒಳ್ಳೆಯವರೆಂದು ಸಾಬೀತುಪಡಿಸಲು ಹರಸಾಹಸ ಪಡುತ್ತಾರೆ. ಆದರೆ ನಿಜವಾಗಿಯೂ ನೀವು ಒಳ್ಳೆಯವರು ಗೌರವದ ವ್ಯಕ್ತಿಗಳಾಗಿದ್ದರೆ ಅದನ್ನ ಸಾಬೀತುಪಡಿಸುವ ಅಗತ್ಯವಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
36
ಚಾಣಕ್ಯ ಹೇಳುವಂತೆ ಈ 6 ಸಂದರ್ಭಗಳಲ್ಲಿ ಮೌನವಾಗಿರಿ
ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ!
ಎಲ್ಲದಕ್ಕೂ ಪ್ರತಿಕ್ರಿಯಿಸಬೇಡಿ. ಆದರೆ ಪ್ರತಿಕ್ರಿಯಿಸಬೇಕಾದ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸಿ. ಅಗತ್ಯವಿದ್ದಾಗ ಮಾತ್ರ ಮಾತನಾಡುವುದರಿಂದ ನಿಮ್ಮ ಪ್ರಭಾವ ಹೆಚ್ಚುತ್ತದೆ.
ನಿಮ್ಮ ಜ್ಞಾನ ಪ್ರದರ್ಶನ ಬೇಡ
ನೀವು ಎಷ್ಟೇ ಬುದ್ಧಿವಂತರಾಗಿದ್ದರೂ, ನಿಮ್ಮಲ್ಲಿ ಎಷ್ಟೇ ಸ್ಕಿಲ್ ಅಥವಾ ಕೌಶಲ್ಯಗಳಿದ್ದರೂ ಪ್ರದರ್ಶಿಸಬೇಡಿ. ಆದರೆ ಸರಿಯಾದ ಸಮಯದಲ್ಲಿ ನಿಮ್ಮ ಕೆಲಸದ ಮೂಲಕ ನಿಮ್ಮ ಸಾಮರ್ಥ್ಯಗಳನ್ನ ಸಾಬೀತುಪಡಿಸಿ, ನಿಮ್ಮ ಜ್ಞಾನವನ್ನು ಬೇರೆಯವರಿಗೆ ತೋರಿಸುವ ಬದಲು ನಿಮ್ಮ ಫಲಿತಾಂಶಗಳನ್ನು ತೋರಿಸಿ.
ಹಿರಿಯರು ಹೇಳುವಂತೆ ಗೌರವ ನೀಡಬೇಕು ಮತ್ತು ಪಡೆಯಬೇಕು (Give respect and take respect) ಆಚಾರ್ಯ ಚಾಣಕ್ಯ ಕೂಡ ಇದನ್ನೇ ಹೇಳುತ್ತಾರೆ. ಈ ವಿಚಾರವಾಗಿಯೇ ಪ್ರತ್ಯೇಕವಾಗಿ ಹೇಳಿದ್ದಾರೆ. ಇತರರನ್ನು ಗೌರವಿಸುವ ವ್ಯಕ್ತಿಗೆ ಸಮಾಜದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಗೌರವ ಸಿಗತ್ತದೆ.
ಪ್ರಾಮಾಣಿಕರಾಗಿರಿ.
ಸಮಯಪ್ರಜ್ಞೆ, ಜವಾಬ್ದಾರಿ ಮತ್ತು ಪ್ರಾಮಾಣಿಕತೆ ಇದ್ದರೆ ನಿಮ್ಮ ಸಹೋದ್ಯೋಗಿಗಳ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ನೀವು ಶಿಸ್ತಿನಿಂದ ವರ್ತಿಸಿದಾಗ, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಿದಾಗ, ನೀವು ಪ್ರಾಮಾಣಿಕರಾದಾಗ, ಗೌರವವು ತಾನಾಗಿಯೇ ಬರುತ್ತದೆ.
56
ಆಫೀಸ್ ಪಾಲಿಟಿಕ್ಸ್ನಿಂದ ದೂರವಿರಿ
ಆಫೀಸ್ ಅಥವಾ ಕಚೇರಿ ವಾತಾವರಣ ಮೊದಲು ಅರ್ಥ ಮಾಡಿಕೊಳ್ಳಿ. ಆದರೆ ಅನಗತ್ಯ ವಾದಗಳು, ಗುಂಪುಗಾರಿಕೆ, ಪ್ರತಿಭಟನೆ, ಹೋರಾಟ ಇಂಥವುಗಳಿಂದ ದೂರವಿರಿ. ಪ್ರತಿಯೊಂದು ಆಫೀಸ್ನಲ್ಲೂ ಗುಂಪುಗಾರಿಕೆ, ಆಫೀಸ್ ಪಾಲಿಟಿಕ್ಸ್ ಇದ್ದೇ ಇರುತ್ತೆ. ಆದರೆ ಇದರ ನೀವು ನಿಮ್ಮ ಕೆಲಸದ ಮೇಲೆ ಗಮನಹರಿಸಿ. ಕಚೇರಿಯಲ್ಲಿ ನಡೆಯುವ ಈ ಗುಂಪುಗಾರಿಕೆಯಿಂದ ದೂರವಿರಿ, ಹಾಗಾಂತ ಎಲ್ಲರಿಂದ ದೂರವಿರುವುದಲ್ಲ, ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಿ. ಆದರೆ ನೀವು ಗೌರವವನ್ನು ಕೇಳಿ ಪಡೆಯಬೇಕಾಗಿಲ್ಲ, ನೀವು ಇತರರನ್ನು ಗೌರವಿಸಿದಾಗ ಅದು ತಾನಾಗಿಯೇ ಬರುತ್ತದೆ.
ನೀವು ಮಾತನಾಡುವುದನ್ನ ಮಾತ್ರವಲ್ಲ, ಇತರರು ಏನು ಹೇಳುತ್ತಿದ್ದಾರೆ ಅದನ್ನ ಸಮಾಧಾನದಿಂದ ಕೇಳಿಸಿಕೊಳ್ಳುವ ಅಭ್ಯಾಸ ಮಾಡಿ. ಇತರರ ವಿಚಾರಗಳನ್ನ ಗಮನವಿಟ್ಟು ಕೇಳುವುದರಿಂದ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ವ್ಯಕ್ತಿತ್ವವು ಹೆಚ್ಚುತ್ತದೆ.
66
ಇತರರ ಪ್ರಯತ್ನಗಳನ್ನ ಗೌರವಿಸಿ
ನಿಮ್ಮ ಸಹೋದ್ಯೋಗಿಗಳ ಕೆಲಸವನ್ನು ಶ್ಲಾಘಿಸಿ, ಗೌರವಿಸಿ. ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳುವಂತೆ, ಯಾರು ಇತರರ ಪ್ರಯತ್ನಗಳನ್ನು, ಕೆಲಸವನ್ನು ಗೌರವಿಸುತ್ತಾರೋ ಅಂತಹ ವ್ಯಕ್ತಿ ಮಹಾನ್ ನಾಯಕನಾಗುತ್ತಾನೆ..' ಎಂದು ಹೇಳಿದ್ದಾರೆ. ಹೀಗಾಗಿ ಕೆಲಸ ಮಾಡುವ ಕಚೇರಿಯಾಗಲಿ, ನೀವು ಇರುವ ಸಮಾಜದಲ್ಲಾಗಲಿ ಚಾಣಕ್ಯರ ಈ ಆರು ನೀತಿಗಳನ್ನು ಅನುಸರಿಸಿದ್ದೇ ಆದಲ್ಲಿ ನಿಮಗೂ ಗೌರವ ಹೆಚ್ಚುವುದರಲ್ಲಿ ಅನುಮಾನವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.