ಕುಕ್ಕರ್ ಮತ್ತು ಮಿಕ್ಸಿ ಜಾರಿನ ರಬ್ಬರ್ ಲೂಸ್ ಆದರೆ ಅದನ್ನು ಎಸೆಯುವ ಬದಲು ಸುಲಭವಾಗಿ ಸರಿಪಡಿಸಬಹುದು. ಮಿಕ್ಸಿ ರಬ್ಬರ್‌ಗೆ ರಬ್ಬರ್ ಬ್ಯಾಂಡ್ ಬಳಸಿ ಮತ್ತು ಕುಕ್ಕರ್ ಗ್ಯಾಸ್ಕೆಟ್ ಅನ್ನು ಫ್ರೀಜರ್‌ನಲ್ಲಿಟ್ಟು ಟೈಟ್ ಮಾಡಬಹುದು. ಆದರೂ ಆರೋಗ್ಯದ ದೃಷ್ಟಿಯಿಂದ ಆರು ತಿಂಗಳಿಗೊಮ್ಮೆ ಬದಲಾಯಿಸುವುದು ಉತ್ತಮ.
ಸಾಮಾನ್ಯವಾಗಿ ಮಿಕ್ಸಿ ಮತ್ತು ಕುಕ್ಕರ್ ರಬ್ಬರ್ ಅರ್ಥಾತ್ ಗ್ಯಾಸ್ಕೆಟ್ಗಳು ಮೇಲಿಂದ ಮೇಲೆ ಲೂಸ್ ಆಗುವುದು ಇದೆ. ಒಮ್ಮೆ ಲೂಸ್ ಆಯ್ತು ಎಂದರೆ ಮತ್ತೆ ಅದರಿಂದ ಯಾವುದೇ ಉಪಯೋಗವೇ ಇಲ್ಲ. ಅಷ್ಟಕ್ಕೂ ಗ್ಯಾಸ್ಕೆಟ್ಗಳನ್ನು ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ಬದಲಿಸಬೇಕು ಎಂದು ಹೇಳಲಾಗುತ್ತದೆಯಾದರೂ, ಭಾರತೀಯ ಮೆಂಟ್ಯಾಲಿಟಿ ಸ್ವಲ್ಪ ಡಿಫರೆಂಟ್ ಇರೋದ್ರಿಂದ ಅದು ಸಂಪೂರ್ಣ ಹಾಳಾಗುವವರೆಗೂ ಬಿಡಲ್ಲ.
26
ಆರು ತಿಂಗಳ ಬಳಕೆ
ಆದರೆ, ಆರು ತಿಂಗಳ ಒಳಗೇನೇ ಲೂಸ್ ಆಗಿಬಿಟ್ಟರೆ ಏನು ಮಾಡೋದು? ಮಾಡೋದೇನು? ಅದನ್ನು ಎಸೆದು ಹೊಸತು ತರೋದು ಅಷ್ಟೇ ಎಂದುಕೊಳ್ಳುವವರೇ ಎಲ್ಲಾ.
36
ಚಿಂತೆ ಬಿಡಿ
ಆದರೆ ಇಲ್ಲಿದೆ ಒಂದು ಕಮಾಲ್.ನೀವು ಕುಕ್ಕರ್ ಅಥವಾ ಮಿಕ್ಸಿ ಜಾರಿನ ರಬ್ಬರ್ ಲೂಸ್ ಆದ್ರೆ ಚಿಂತೆನೇಮಾಡಬೇಡಿ. ಮಿಕ್ಸಿ ಜಾರಿನ ರಬ್ಬರ್ ಅರ್ಧ ನಿಮಿಷದಲ್ಲಿ ಸರಿ ಮಾಡ್ಬೋದು, ಕುಕ್ಕರ್ ರಬ್ಬರ್ ಐದು ನಿಮಿಷದಲ್ಲಿ ಸರಿ ಮಾಡ್ಬೋದು.
ಮೊದಲಿಗೆ ಮಿಕ್ಸಿ ಜಾರಿನ ಐಡಿಯಾ ಹೇಳುವುದಾದರೆ, ಮಿಕ್ಸಿ ಜಾರಿನ ರಬ್ಬರ್ ಲೂಸ್ ಆಗಿದ್ದರೆ, ಅದಕ್ಕೆ ನೀವು ಮನೆಯಲ್ಲಿ ಕಟ್ಟಲು ಬಳಸುವ ರಬ್ಬರ್ ಬ್ಯಾಂಡ್ ಅನ್ನು ಅಗಲಿಸಿ ರಬ್ಬರ್ ಮೇಲೆ ಹಾಕಿ. ಎರಡು ರಬ್ಬರ್ ಬ್ಯಾಂಡ್ ಹಾಕಿದರೆ ಉತ್ತಮ. ಇದರಿಂದ ಲೂಸ್ ಆಗಿರೋ ಮಿಕ್ಸಿಯ ಜಾರಿನ ರಬ್ಬರ್ ಟೈಟ್ ಆಗಿ ಚೆನ್ನಾಗಿ ಕುಳಿತುಕೊಳ್ಳುತ್ತದೆ.
56
ಕುಕ್ಕರ್ ಗ್ಯಾಸ್ಕೆಟ್ ಲೂಸ್ ಆಗಿದ್ದರೆ
ಇನ್ನು ಕುಕ್ಕರ್ ಗ್ಯಾಸ್ಕೆಟ್ ಲೂಸ್ ಆಗಿದ್ದರೆ, ಅದನ್ನು ತೆಗೆದು ಐದು ನಿಮಿಷ ಫ್ರೀಜರ್ನಲ್ಲಿ ಇಡಿ. ಬಳಿಕ ತೆಗೆದು ಅದನ್ನು ಕುಕ್ಕರ್ಗೆ ಹಾಕಿ ಮ್ಯಾಜಿಕ್ ನೋಡಿ.
66
ಹಾಗೆ ಒಂದು ಮಾತು
ಅಂದಹಾಗೆ ಮೊದಲೇ ಹೇಳಿದಂತೆ ಆರು ತಿಂಗಳಿಗೆ ಒಮ್ಮೆಯಾದರೂ ಇವುಗಳನ್ನು ಬದಲಿಸುತ್ತಿದ್ದರೆ ತಜ್ಞರು ಹೇಳುವಂತೆ ಆರೋಗ್ಯದ ದೃಷ್ಟಿಯಿಂದ ಅದು ತುಂಬಾ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.