Tulsi Plant Care Tips in Kannada ತುಳಸಿ ಗಿಡವನ್ನು ಚೆನ್ನಾಗಿ ಆರೈಕೆ ಮಾಡಿದರೂ ಕೆಲವೊಮ್ಮೆ ಒಣಗುತ್ತದೆ. ಅಡುಗೆಮನೆಯಲ್ಲಿ ಸಿಗುವ ವಸ್ತು ಮತ್ತು ಸರಳ ವಿಧಾನಗಳಿಂದ ತುಳಸಿ ಗಿಡವನ್ನು ದಟ್ಟವಾಗಿ ಬೆಳೆಸಬಹುದು.
ಆರೋಗ್ಯ ಮತ್ತು ಪೂಜೆ ಮಾಡುವ ದೃಷ್ಟಿಯಿಂದಾಗಿ ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವಿರುತ್ತದೆ. ಈ ಎರಡು ಕಾರಣಗಳಿಂದ ತುಳಸಿ ಗಿಡವನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ. ಚೆನ್ನಾಗಿ ಆರೈಕೆ ಮಾಡಿದ್ರೂ ಕೆಲವೊಮ್ಮೆ ತುಳಸಿ ಒಣಗುತ್ತದೆ. ಈ ಲೇಖನ ತುಳಸಿ ಗಿಡ ದಟ್ಟವಾಗಿ ಬೆಳೆಯಲು ಏನ ಮಾಡಬೇಕು ಎಂಬುದರ ಮಾಹಿತಿಯನ್ನು ಒಳಗೊಂಡಿದೆ.
24
ಅಡುಗೆಮನೆಯಲ್ಲಿರುವ ವಸ್ತು
ದಟ್ಟವಾದ ತುಳಸಿ ಗಿಡ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೆಲವು ವಿಧಾನಗಳ ಮೂಲಕ ಆರೈಕೆ ಮಾಡಿದ್ರೆ ತುಳಸಿ ಗಿಡ ದಟ್ಟವಾಗಿ ಬೆಳೆಯುತ್ತದೆ. ಈ ವಿಧಾನಗಳಲ್ಲಿ ಮಾರುಕಟ್ಟೆಯಿಂದ ಯಾವುದೇ ಗೊಬ್ಬರ ಖರೀದಿಸುವ ಅಗತ್ಯವಿರಲ್ಲ. ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ತುಳಸಿ ಗಿಡವನ್ನು ದಟ್ಟವಾಗಿ ಬೆಳೆಸಬಹುದಾಗಿದೆ.
34
ತುಳಸಿ ಮೊಗ್ಗಗಳು
ತುಳಸಿ ಮೊಗ್ಗಗಳು ಕಾಣಿಸಿಕೊಂಡ ನಂತರ ಹೊಸ ಎಲೆಗಳು ಕಾಣಿಸಿಕೊಳ್ಳೋದು ಕಡಿಮೆಯಾಗುತ್ತದೆ. ಹಾಗಾಗಿ ಈ ಮೊಗ್ಗಗಳನ್ನು ಚಿವುಟಬೇಕು. ಇದರಿಂದ ಹೊಸ ಎಲೆಗಳು ಚಿಗುರೊಡೆದು ತುಳಸಿ ದಟ್ಟವಾಗಿ ಬೆಳೆಯುತ್ತದೆ. ಈ ರೀತಿಯಾಗಿ ಕತ್ತರಿಸಿದ ಮೊಗ್ಗಗಳನ್ನು ಗಿಡದ ಬುಡದಲ್ಲಿಯೇ ಹಾಕಿಕೊಳ್ಳಿ. ಇದು ತುಳಸಿ ಬೆಳವಣಿಗೆಗೆ ಸಹಾಯವಾಗುತ್ತದೆ.
ತುಳಸಿ ಗಿಡದ ಬೆಳವಣಿಗೆಗೆ ಹುಳಿ ಮೊಸರು ಬಳಕೆ ಮಾಡಲಾಗುತ್ತದೆ. ಒಂದು ಲೋಟ ನೀರಿಗೆ ಎರಡರಿಂದ ಮೂರು ಟೀ ಸ್ಪೂನ್ ಹುಳಿ ಮೊಸರು ಸೇರಿಸಿ ತುಳಸಿ ಗಿಡಕ್ಕೆ ಹಂತ ಹಂತವಾಗಿ ಹಾಕಬೇಕು. ಹುಳಿ ಮೊಸರಿನ ಬದಲಾಗಿ ಮಜ್ಜಿಗೆಯನ್ನು ಸಹ ಬಳಕೆ ಮಾಡಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಮತ್ತು ಉತ್ತಮ ಬ್ಯಾಕ್ಟೀರಿಯಾಗಳು ಮಣ್ಣಿನ ಫಲವತ್ತತ್ತೆಯನ್ನು ಹೆಚ್ಚಿಸುತ್ತದೆ. ತಿಂಗಳಿಗೊಮ್ಮೆ ಈ ರೀತಿ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.